ವೈಶಿಷ್ಟ್ಯ ಲೇಖನ

ಆಧ್ಯಾತ್ಮಿಕ ಯುಗಪುರುಷ ಶರಣ ಶಂಕರಲಿಂಗ ಶರಣರು

WhatsApp Group Join Now
Telegram Group Join Now

ಆಧ್ಯಾತ್ಮಿಕ ಯುಗಪುರುಷ ಶರಣ ಶಂಕರಲಿಂಗ ಶರಣರು

ಲೇಖಕರು: ಸಂಗಮೇಶ ಎನ್ ಜವಾದಿ.
********”
ಬಸವಾದಿ ಶರಣರ, ಲಿಂಗೈಕ್ಯ ಮಾಣಿಕೇಶ್ವರ, ಶಂಕರಲಿಂಗ ಅಪ್ಪಾಜಿಯವರ
ಕರ್ಮಭೂಮಿ, ಶರಣರು ನಡೆದಾಡಿದ ಪಾವನನೆಲ.ಭಾವೈಕ್ಯತೆಯ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ಭೂಮಿ, ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ ಪ್ರೀತಿಯ ಶ್ರೀ ಸುಕ್ಷೇತ್ರವೆಂದ ಖ್ಯಾತಿ ಪಡೆದ ನೆಲವೇ ಶ್ರೀ ಸುಕ್ಷೇತ್ರ ಶಂಕರಲಿಂಗ ಆಶ್ರಮ.

ಶ್ರೀ ಸುಕ್ಷೇತ್ರ ಶಂಕರಲಿಂಗ ಆಶ್ರಮದ ಇಂದಿನ ಪರಮ ಪೂಜ್ಯ ತಪಸ್ವಿ, ತ್ಯಾಗಯೋಗಿ, ವೀರ ಸನ್ಯಾಸಿಗಳ ಪಾವನ ಪವಿತ್ರ ಭೂಮಿಯಾಗಿದೆ. ಇಲ್ಲಿ
ಸರ್ವರನ್ನು ಸಮಭಾವದಿಂದ ಕಾಣಲಾಗುತ್ತದೆ. ಸರ್ವ ಜನಾಂಗವನ್ನು ಅತ್ಯಂತ ಗೌರವ ಪ್ರೀತಿಯಿಂದ ಕಾಣಲಾಗುತ್ತದೆ. ಮಾನವೀಯತೆಯ ಕಾರ್ಯಕ್ಕೆ ಹಾಗೂ ಕಾಯಕ ಸಿದ್ಧಾಂತಕ್ಕೆ ಆದ್ಯತೆ ನೀಡಿದ್ದಾರೆ. ಬಸವಾದಿ ಪ್ರಮಥರ ಹಾಗೂ ಲಿಂಗೈಕ್ಯ ಮಾಣಿಕೇಶ್ವರ ಮತ್ತು
ಶಂಕರಲಿಂಗ ಅಪ್ಪಾಜಿಯವರ ವೈಚಾರಿಕ ಚಿಂತನೆಗಳು ಜನಸಾಮಾನ್ಯರಲ್ಲಿ ನಿರಂತರವಾಗಿ ಬಿತ್ತುವ ಕೆಲಸ ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ .
ಶ್ರೀ ಸುಕ್ಷೇತ್ರವು ಹಲವು ವರ್ಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ, ಸರ್ವೊತ್ತಮ
ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ. ಅದಕ್ಕಾಗಿ ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಮ್ಮೆಯ ಆಶ್ರಮವಾಗಿ ಬೆಳಗುತ್ತಿದೆ ಎಂದರೆ ಇದಕ್ಕೆ ಕಾರಣಿಕರ್ತರೆಂದರೆ ಇಂದಿನ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶರಣ ಶಂಕರಲಿಂಗ ಶರಣರು ಎಂದು ಹೆಮ್ಮೆಯಿಂದ ಹೇಳಲು ಸಂತೋಷ ಎನಿಸುತ್ತದೆ.

ಮಾತೋಶ್ರೀ ನಾಗಮ್ಮ ಮತ್ತು ಸಿದ್ದಣ್ಣ ದಂಪತಿಗಳ ಮಗನಾಗಿ ದಿನಾಂಕ 13/10/1990 ರಂದು ಜನಿಸಿದ್ದ ಪೂಜ್ಯರು, ನಾಲ್ಕನೇ ತರಗತಿಯ ವರೆಗೆ ವಿಧ್ಯಾಭ್ಯಾಸ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಆಧ್ಯಾತ್ಮಿಕದ ಹಸಿವು ಹೆಚ್ಚಾದಾಗ ಶಾಲೆಯನ್ನು ತ್ಯಜಿಸಿ, ಮುಲ್ಲಾಮಾರಿಯ ಶಂಕರಲಿಂಗರ ಆಶ್ರಮದ ಕಡೆಗೆ ಹೆಜ್ಜೆ ಹಾಕುತ್ತಾರೆ.
ಆ ಸಮಯದಲ್ಲಿ ಆಶ್ರಮ ಸಂಪೂರ್ಣವಾಗಿ
ಸುಸ್ಥಿತಿಯಲ್ಲಿ ಇರಲಿಲ್ಲ. ಆದರೂ ಪೂಜ್ಯರು ದೃತಿಗಿಡದೇ ಇದನ್ನೇ ಸವಾಲಾಗಿ ಸ್ವೀಕರಿಸಿ, ತನು, ಮನ, ಭಕ್ತಿಯಿಂದ ಆಶ್ರಮದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪ್ರಯುಕ್ತ ಭಕ್ತರ ಇಚ್ಚೆಯಂತೆ ಆಶ್ರಮದ ಪೀಠಾಧಿಪತಿಯಾಗಿ ಪೂಜ್ಯ ಅಭಿನವ ಶರಣ ಶಂಕರಲಿಂಗ ಶರಣರು ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಅಂತೆಯೇ ದಿನನಿತ್ಯವೂ ಪೂಜೆ, ಪ್ರವಚನ, ಧ್ಯಾನ ಮಾಡುತ್ತ, ಭಕ್ತರ ಭಾವನೆಗಳಿಗೆ ಗೌರವ ನೀಡುತ್ತ, ಅವರೆಲ್ಲ ಕಷ್ಟಗಳಿಗೆ ಸ್ಪಂದನೆ ಮಾಡುತ್ತಿದ್ದಾರೆ.
ಅಂದಿನಿಂದ ಇಂದಿನವರೆಗೂ
ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಆಶ್ರಮದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಹತ್ತು ಹಲವು ವಿನೂತನ ಅಭಿವೃದ್ಧಿಯ ಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಶ್ರೀಕ್ಷೇತ್ರದ ಶ್ರೇಯಸ್ಸಿಗಾಗಿ, ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಟ್ಟ ಚಟಗಳಿಗೆ ದಾಸರಾದ ಎಷ್ಟೋ ವ್ಯಕ್ತಿಗಳನ್ನು ತಿದ್ದಿ ತೀಡಿ ಸರಿದಾರಿಗೆ ತಂದು ಅವರ ನೆಮ್ಮದಿ ಜೀವನಕ್ಕೆ ಕಾರಣಿಕರ್ತರಾಗಿದ್ದಾರೆ. ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿ ನಾಡಿಗೆ ಮಾದರಿಯಾಗಿದ್ದಾರೆ.
ಶೈಕ್ಷಣಿಕ ಕ್ಷೇತ್ರದ ಉನ್ನತಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಸೇವಾ ಕೈಂಕರ್ಯಗಳು ಮಾಡುತ್ತಿದ್ದಾರೆ. ಲಿಂಗೈಕ್ಯ ಪೂಜ್ಯರ ಹಾಗೂ ಬಸವಾದಿ ಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ವಿಚಾರ ಮತ್ತು ಚಿಂತನಾ ಗೋಷ್ಠಿಗಳನ್ನು ಹಮ್ಮಿಕೊಂಡು ದಾರ್ಶನಿಕರ ತತ್ವಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ
ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇಂದು ಈ ಭಾಗದಲ್ಲಿ ನಡೆದಾಡುವ ಶರಣರು ಎಂದೇ ಸುಪ್ರಸಿದ್ಧ ಪಡೆದಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಅಹಂಕಾರ, ದರ್ಪ, ದೌಲತ್ತುಗಳನ್ನು ಪ್ರದರ್ಶಿಸದೇ, ಸರ್ವ ಪರಿತ್ಯಾಗಿಯಾಗಿ, ಸಹನೆ, ತಾಳ್ಮೆ ,ಸೌಜನ್ಯತೆ, ವಿನಮ್ರತೆಯ
ಅಕ್ಕರೆಯಿಂದ ಜನಸಾಮಾನ್ಯರನ್ನು ಹಾಗೂ ಮಕ್ಕಳನ್ನು ಗೌರವಿಸುತ್ತಾರೆ. ಅದಕ್ಕಾಗಿ ಇವರನ್ನು ಜನಸಾಮಾನ್ಯರ ಸ್ನೇಹ ಜೀವಿ ಶ್ರೀಗಳೆಂದೇ ಕರೆಯುವುದುಂಟು. ಇವರ ಪ್ರಾಮಾಣಿಕತೆ, ಪ್ರಬುದ್ಧತೆ, ನಿಷ್ಕಲ್ಮಶತೆಯಿಂದ ಲಕ್ಷಾಂತರ ಬಡವರಿಗೆ ಅನೇಕ ಸೌಲಭ್ಯಗಳನ್ನು ಒದಿಗಿಸಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಿರುತ್ತಾರೆ. ಹೀಗೆ ಶ್ರೀಗಳ ಕಾರ್ಯ ಚಟುವಟಿಕೆಗಳು ಸದ್ದುಗದ್ದಲವಿಲ್ಲದೆ ನಿತ್ಯ ನಿರಂತರವಾಗಿ ಸೇವಾ ನಿಷ್ಠೆಯ ಕಾರ್ಯಗಳು ಚಾಚೂ ತಪ್ಪದೆ ಸಾಗರೋಪಾದಿಯಾಗಿ ಸಾಗುತ್ತಿವೆ. ಜನಮಾನಸಗೊಂಡಿವೆ ಎಂಬುದಂತೂ ಅಷ್ಟೇ ಸತ್ಯ.ಅದೇ ರೀತಿ ಪರಮ ಪೂಜ್ಯ ಅಭಿನವ ಶರಣ ಶಂಕರಲಿಂಗ ಶರಣರು ದಿನನಿತ್ಯವೂ ಸೇವಾ ಕೈಂಕರ್ಯಗಳು ಯಾವುದೇ ಹಮ್ಮುಗಳಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ಜನಪರ, ರೈತಪರ, ಬಡವರ ಪರ, ಕೂಲಿ ಕಾರ್ಮಿಕರ, ನೊಂದವರ ಧ್ವನಿಯಾಗಿದ್ದಾರೆ. ಹೀಗಾಗಿಯೇ ಪೂಜ್ಯರ ನಿಷ್ಕಲ್ಮಶ
ಶ್ರದ್ಧಾ ಭಕ್ತಿಯ ಸೇವಾ ಕಾರ್ಯಗಳು ಐತಿಹಾಸಿಕ ಮತ್ತು ಶ್ಲಾಘನೀಯ ಸೇವಾ ಕೆಲಸ ಎಂದೇ ಹೆಮ್ಮೆಯಿಂದ ಹೇಳಬಹುದು.
ಅದಕ್ಕಾಗಿಯೇ ಪೂಜ್ಯರ ಸರ್ವ ಜನಾಂಗದ ಶಾಂತಿಯ ತೋಟದ ರೂವಾರಿಗಳು, ಮಾನವೀಯ ಮೌಲ್ಯಗಳ ಹರಿಕಾರರು, ಸೇವೆಯೇ ಶ್ರೇಷ್ಠ ಜೀವನದ ಪ್ರತಿಪಾದಕರಾಗಿ ನಮ್ಮೆಲ್ಲರ ಮಾರ್ಗದರ್ಶಕರಾಗಿ ಬೆಳಗುತ್ತಿದ್ದಾರೆ.

ಅಂದಹಾಗೆ ಪರಮ ಪೂಜ್ಯ ಅಭಿನವ ಶರಣ ಶಂಕರಲಿಂಗ ಶರಣರು ಧಾರ್ಮಿಕ ಮತ್ತು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಉಪನ್ಯಾಸ ಮಾಲೆ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಚಾರಿಕ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಯಲ್ಲಿ ಸಂಗೀತ ಸೇವ ಸಹ ಪ್ರತಿ ವರ್ಷ ಆಶ್ರಮದಲ್ಲಿ ನಿರಂತರವಾಗಿ ನಡೆಯುತ್ತದೆ. ಪೂಜ್ಯರ ಸಮಾಜ ಮುಖಿ ಸೇವೆಯಿಂದ ಕನ್ನಡ ನಾಡಿಗೆ ಚಿರಪರಿಚಿರರಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಹಿತಿ,ಸಾಂಸ್ಕೃತಿಕ ಲೋಕದಲ್ಲಿ ಅಭಿನವ ಪೂಜ್ಯರ ಸೇವೆ ಅನನ್ಯ ಹಾಗೂ ಶ್ರಿ ಕ್ಷೇತ್ರವೂ ಪವಿತ್ರ ಶರಣರ ಸುಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಪಾರ ಅಭಿಮಾನಿಗಳು ಹೊಂದುವ ಮೂಲಕ ಈ ಭಾಗದಲ್ಲಿ ವೈಚಾರಿಕ ಸಮತವಾದ ಸಾರುವ ಕ್ರಾಂತಿಗಳು ಮಾಡಿಕೊಂಡು,
ಲಿಂಗೈಕ್ಯ ಪೂಜ್ಯ ಮಾಣಿಕೇಶ್ವರ ಶ್ರೀಗಳ
ಆಶಯ ಹಾದಿಯಲ್ಲಿ ಸಾಗುತ್ತಿರುವುದರಿಂದ ಇಡಿ ಭಕ್ತ ಸಮೂಹ ಪೂಜ್ಯರನ್ನು ಅತ್ಯಂತ ಗೌರವದಿಂದ ಪೂಜಿಸುತ್ತಾರೆ.
ಹೀಗಾಗಿಯೇ ಅಭಿನವ ಶರಣ ಶಂಕರಲಿಂಗ ಶರಣರು ಸಾಮಾಜಿಕ ಸೇವೆ ಅನನ್ಯ ಮತ್ತು ಅಜರಾಮರವಾದದ್ದು ಎನ್ನುವುದಂತೂ ಸತ್ಯ. ಈ ಮಾತು ಇಲ್ಲಿ ಹೇಳಲೇಬೇಕಾದ ವಿಚಾರವಾಗಿದೆ. ಯಾಕೆ ಈ ಮಾತು, ಈ ಸಂದರ್ಭದಲ್ಲಿ ಹೇಳಲೇಬೇಕಾಗಿತ್ತು ಎಂದರೆ ಈ ನಿಟ್ಟಿನಲ್ಲಿ ಪೂಜ್ಯರು ಒಂಭತ್ತನೇ ವಯಸ್ಸಿನಲ್ಲೇ ಮನೆಮಠ ತೊರೆದು, ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿ, ಸಮಾಜದ ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದು ಸಣ್ಣ ಮಾತೇನು ಅಲ್ಲವೇ ಅಲ್ಲ.ಅದಕ್ಕಾಗಿಯೇ ಇವರನ್ನು ಆಧ್ಯಾತ್ಮಿಕ ಯುಗಪುರುಷ ಎಂದು ಜನಸಾಮಾನ್ಯರು ಹೆಮ್ಮೆಯಿಂದ ಕರೆಯುತ್ತಾರೆ.

ಕಲ್ಯಾಣ ನಾಡಿನ ಹೆಮ್ಮೆಯ ಆಶ್ರಮ:
ಅನೇಕ ರಾಜಕರಣಿಗಳು, ಸಾಹಿತಿಗಳು, ಕವಿಗಳು ಕಲಾವಿದರು ಹಾಗೂ ಅಪಾರ ಭಕ್ತವೃಂದ ಶ್ರೀಕ್ಷೇತ್ರಕ್ಕೆ ದಿನನಿತ್ಯ ಬಂದು ಹೊಗುತ್ತಾರೆ. ಅನಾಥರಿಗೆ ಮತ್ತು ಬಡವರಿಗೆ ಶ್ರೀಕ್ಷೇತ್ರ ನೆಮ್ಮದಿಯ ಆಶ್ರಯತಾಣವಾಗಿದೆ.
ಮುಂಜಾನೆಯಿಂದ ಮಧ್ಯ ರಾತ್ರಿ ವರೆಗೂ ದಾಸೋಹ ವ್ಯವಸ್ಥೆ ಇರುತ್ತದೆ. ಆಶ್ರಯಕ್ಕಾಗಿ ಬಂದವರಿಗೆ ಆಶ್ರಯ ನೀಡಿದೆ. ನೂರಕ್ಕಿಂತ ಹೆಚ್ಚು ಅನಾಥ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ನೀಡಿ ಮದುವೆ ಮಾಡಿಸಿದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ.
ಕಲ್ಯಾಣ ನಾಡಿನ ಹೆಮ್ಮೆಯ ಆಶ್ರಮವಾಗಿ ನಿರಂತರ ಜನಪರ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಶ್ರೀ ಆಶ್ರಮದ ದಾಸೋಹ ಭಾವ:
ಕಲ್ಯಾಣ ನಾಡಿನ ಆಶ್ರಮದ ವಿಶೇಷ ಎಂದರೆ ದಿನದ 24 ಗಂಟೆಗಳಲ್ಲಿಯೋ ಪ್ರಸಾದದ ವ್ಯವಸ್ಥೆ ಇರುತ್ತದೆ. ಅದೇ ರೀತಿ ಶ್ರೀ ಆಶ್ರಮದಲ್ಲಿ ಸಹ ದಾಸೋಹ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಜಾತಿ, ಧರ್ಮ ಬೇದ ಭಾವನೆಗಳನ್ನು ಮಾಡುವುದಿಲ್ಲ, ಎಲ್ಲರೂ ಸಮಾನರು.ಹಾಗಾಗಿ ಬರುವ ಎಲ್ಲಾ ಭಕ್ತವೃಂದಕ್ಕೂ ಯಾವುದೇ ರೀತಿಯಲ್ಲಿ ನೋವಾಗದೇ ಇರುವ ಹಾಗೆ ಆಶ್ರಮದ ವತಿಯಿಂದ ದಾಸೋಹ ವ್ಯವಸ್ಥೆ ನಿರ್ವಹಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಆಶ್ರಮಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ವಸತಿ, ನಿತ್ಯದಾಸೋಹ ವ್ಯವಸ್ಥೆ ಇರುತ್ತದೆ.
ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಶ್ರೀ ಸುಕ್ಷೇತ್ರ ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಮತ್ತು ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ”ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ಆಶ್ರಮ ತೊಡಗಿಸಿಕೊಂಡಿದೆ.

ಶ್ರೀ ಸುಕ್ಷೇತ್ರ ಆಶ್ರಮದಲ್ಲಿ ಶಿಕ್ಷಣ:
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಆಶ್ರಮದಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಶಾಲೆ, ಪ್ರಸಾದ ನಿಲಯಗಳು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀ ಸುಕ್ಷೇತ್ರ ಸಹ ಒಂದಾಗಿದೆ. ಇಲ್ಲಿ
ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣಾಭ್ಯಾಸ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕೆಲಸ ಮಾಡಲಾಗುತ್ತಿದೆ.ಹಾಗಾಗಿ ಶ್ರೀ ಕ್ಷೇತ್ರವು ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ.

ಶ್ರೀ ಆಶ್ರಮದಿಂದ ಪ್ರಶಸ್ತಿ ಪ್ರದಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಸಾಧಕರನ್ನು ಗುರುತಿಸುವ ಮೂಲಕ ಅವರನ್ನು ಶ್ರೀ ಸುಕ್ಷೇತ್ರ ಆಶ್ರಮದಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಒಟ್ಟು 100 ಕ್ಕೂ ಹೆಚ್ಚು ಪ್ರಶಸ್ತಿಗಳು ಶ್ರೀ ಕ್ಷೇತ್ರದಿಂದ ಇಲ್ಲಿಯವರೆಗೆ ನೀಡಲಾಗಿದೆ ಮತ್ತು ಪ್ರತಿ ವರ್ಷ ನಿರಂತರವಾಗಿ ನೀಡಲಾಗುತ್ತಿದೆ.

ವೈಚಾರಿಕ ಚಿಂತನೆಗಳಿಗೆ ಆದ್ಯತೆ :
ಡಾಂಬಿಕತೆಗೆ ಹೆಚ್ಚು ಆಸ್ಪದ ನೀಡದೇ ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡುವ ಪೂಜ್ಯರು, ಯಾವುದೇ ತರಹದ ಪಲ್ಲಕ್ಕಿಗಳಲ್ಲಿ ಮರವಣಿಗೆ ಮಾಡಿಸಿಕೊಳ್ಳದೆ, ಪಾದಯಾತ್ರೆಯ ಮೂಲಕ ಶ್ರೀಸಾಮಾನ್ಯರ ಭಾವನೆಗಳಿಗೆ ಗೌರವ ನೀಡುತ್ತಾ,ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಹಾಗಾಗಿ
ನಾಡಿನ ಯಾವುದೇ ಸಂಘ – ಸಂಸ್ಥೆ ಮತ್ತು ಸರಕಾರಗಳು ಮಾಡದೇ ಇರುವ ಜನಪರ ಕೆಲಸಗಳು ಪೂಜ್ಯರು ತಮ್ಮ ಆಶ್ರಮದಿಂದ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಆಶ್ರಮದಿಂದ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ: ಕೇವಲ ಆದ್ಯಾತ್ಮೀಕ, ಸಮಾಜಿಕ ಕಾರ್ಯಗಳಿಗೆ ಸೀಮಿತವಾಗದೆ ಸಮಾಜ ಮುಖಿ ಚಿಂತನೆಯುಳ್ಳ ಸಾಹಿತ್ಯ, ಸಾಂಸ್ಕೃತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸಾಹಿತಿಗಳಿಗೆ, ಸಾಂಸ್ಕೃತಿಕ ಕಲಾವಿದರಿಗೆ ಆಶ್ರಯ ನೀಡಿ, ಗೌರವಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ವಿಶೇಷವಾಗಿ ಪೂಜ್ಯರಿಗೆ
ಪುಸ್ತಕಗಳ ಮೇಲೆ ಅಪಾರವಾದ ಅಭಿಮಾನ ಮತ್ತು ಪ್ರೀತಿ ಇದೆ. ನಿರಂತರವಾಗಿ ಪುಸ್ತಕ ಬಿಡುಗಡೆ ಕಾರ್ಯ ಮಾಡಲಾಗುತ್ತದೆ.

ಪೂಜ್ಯರ ಪ್ರೀತಿಯ ಗೋಶಾಲೆ : ಪೂಜ್ಯರ ಈ ಪ್ರೀತಿಯ ಗೋಶಾಲೆ ಬೀದಿ ಹಸುಗಳಿಗೆ ರಕ್ಷಣಾತ್ಮಕ ಆಶ್ರಯ ತಾಣವಾಗಿದೆ. ಇಲ್ಲಿ ವಿವಿಧ ರೀತಿ ತಳಿಯ ಹಸುಗಳಿವೆ. ಪೂಜ್ಯರ ಪ್ರೀತಿಯ ಅಕ್ಕರೆಯಿಂದ 250 ಕ್ಕೂ
ಹೆಚ್ಚು ಹಸುಗಳಿಗೆ ವಸತಿ ಮತ್ತು ಆರೈಕೆ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.ಗೋಶಾಲೆಗಳಲ್ಲಿನ ಹಸುಗಳಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಿದ್ದಾರೆ. ಹಸುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಇದ್ದರೆ ಚಿಕಿತ್ಸೆಗಳು ಸೇರಿದಂತೆ ವೈದ್ಯಕೀಯ ಆರೈಕೆಯನ್ನು ಸಹ ಮಾಡುತ್ತಿದ್ದಾರೆ. ಹಸುವಿನ ಸಗಣಿ ಮತ್ತು ಮೂತ್ರವನ್ನು ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತದೆ.ಸ್ಥಳೀಯ ಹಸು, ಮನುಕುಲಕ್ಕೆ ಅಮೂಲ್ಯವಾದ ವರವಾಗಿದೆ ಎಂಬುದು ಪೂಜ್ಯರ ಅಭಿಮತವಾಗಿದೆ. ಅಂತೆಯೇ ಹಸುಗಳನ್ನು ಗೌರವಿಸುವ ಮತ್ತು ಬಳಸಿಕೊಳ್ಳುವವರಿಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸುವ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ. ಜೊತೆಗೆ, ದೇಸಿ ಹಸುವನ್ನು ಪೂಜಿಸುವ ಮತ್ತು ನೋಡಿಕೊಳ್ಳುವ ಧಾರ್ಮಿಕ ಕ್ರಿಯೆಯು ಪುಣ್ಯ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಅರ್ಹತೆಯನ್ನು ಗಳಿಸುತ್ತದೆ ಎಂದು ಹೇಳುತ್ತಾರೆ. ದುಃಖಕರವೆಂದರೆ, ನಮ್ಮ ಸಮಾಜದಲ್ಲಿ ಹಸುಗಳ ಆಳವಾದ ಪ್ರಾಮುಖ್ಯತೆಯ ಬಗ್ಗೆ ಅರಿವಿನ ಕೊರತೆಯಿದೆ ಮತ್ತು ಇದರ ಪರಿಣಾಮವಾಗಿ, ಅವುಗಳ ಅಸ್ತಿತ್ವವು ಅಳಿವಿನ ಅಪಾಯದಲ್ಲಿದೆ ಎಂದು ಪೂಜ್ಯರು ಯಾವಾಗಲೂ ಆತಂಕ ವ್ಯಕ್ತಪಡಿಸುತ್ತಾರೆ.
ಈ ನಿಟ್ಟಿನಲ್ಲಿ ಎಲ್ಲಾ ಹಸುಗಳನ್ನು ಪ್ರೀತಿಯಿಂದ ಪೋಷಿಸಲಾಗುತ್ತದೆ, ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ಅವುಗಳ ನಿರಂತರತೆಯನ್ನು ಖಾತ್ರಿಪಡಿಸಲಾಗುತ್ತಿದೆ. ಈ ಪ್ರಯತ್ನದ ಹಿಂದಿನ ಉದ್ದೇಶವು ಕೇವಲ ಹಸುಗಳ ಭೌತಿಕ ಉಪಸ್ಥಿತಿಯನ್ನು ಕಾಪಾಡುವುದು ಮಾತ್ರವಲ್ಲ, ಆಧುನಿಕ ಜಗತ್ತಿಗೆ ಈ ಭವ್ಯ ಜೀವಿಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನೀಡುವುದಾಗಿದೆ. ಅದಕ್ಕಾಗಿಯೇ
ಗೋಶಾಲೆ ಸ್ಥಾಪನೆಗಾಗಿ ಪೂಜ್ಯರು ಕೈಗೊಂಡ ದೂರದೃಷ್ಟಿಯ ಪ್ರಯತ್ನಗಳಲ್ಲಿ ಒಂದಾಗಿದೆ. ಅಂತೆಯೇ ಅಮೂಲ್ಯವಾದ ದೇಶಿ ಹಸುಗಳನ್ನು ರಕ್ಷಿಸುವುದಲ್ಲದೆ, ಮುಂದಿನ ಪೀಳಿಗೆಗೆ ಅನುರಣಿಸುವ ಬುದ್ಧಿವಂತಿಕೆ ಮತ್ತು ಸಹಾನುಭೂತಿಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂಬುವುದು ಪೂಜ್ಯರ ಕಳಕಳಿಯ ಸದಾಶಯವಾಗಿದೆ.

ಮೌನವೃತ ಪೂಜ್ಯರು: ಆಶ್ರಮದ ಜವಾಬ್ದಾರಿ ಹೊತ್ತುಕೊಂಡ ನಂತರ ಇಲ್ಲಿಯವರೆಗೂ ಆಶ್ರಮದಲ್ಲಿ ಶ್ರಾವಣ ಮಾಸದ ಅಘೋರ ಮೌನಾನುಸ್ಥಾನ ಪ್ರತಿ ವರ್ಷ ಮಾಡುತ್ತಿದ್ದಾರೆ.
ಅದೇ ರೀತಿ ನಾಡಿನಾದ್ಯಂತ ಅನುಷ್ಠಾನಗೈದ ಸ್ಥಳಗಳಾದ ದೇವಗಿರಿ, ವಿಭೂತಿಹಳ್ಳಿ, ಶಹಾಪುರ, ಯಕ್ಕೇರಿ ಕರಿಯಮ್ಮ, ಬೆಳಗಾವಿ ಜಿಲ್ಲೆ ರಾಮತೀರ್ಥ, ಮುಳ್ಳೂರ ಗೋಕರ್ಣ, ರಾಮತೀರ್ಥ ಹಾಗೂ ವಾಣಿಭದ್ರೇಶ್ವರ ಗಂಗಾವತಿ ಸೇರಿದಂತೆ ಅನೇಕ ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ಮೌನವೃತ ಅನುಷ್ಠಾನ ಮಾಡಿದ ಶ್ರೇಯಸ್ಸು ಪರಮ ಪೂಜ್ಯ ಅಭಿನವ ಶರಣ ಶಂಕರಲಿಂಗ ಅಪ್ಪಾಜಿಯವರಿಗೆ ಸಲ್ಲುತ್ತದೆ.

ಅಭಿನವ ಶರಣ ಶ್ರೀಗಳಿಗೆ ಸಂದ ಪ್ರಶಸ್ತಿ ಗೌರವಗಳು:
ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಪೂಜ್ಯರಿಗೆ ಅನೇಕ ಪ್ರಶಸ್ತಿಗಳು ಆರಿಸಿ ಬಂದಿವೆ. ಅದರಲ್ಲಿ ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾದ ಶರಣ ಸೇವಾ ರತ್ನ ಪ್ರಶಸ್ತಿ , ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾದ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ 500ಕ್ಕೂ ಹೆಚ್ಚು ಭಕ್ತರಿಂದ ತುಲಾಭಾರಗಳು ನೆರವೇರಿವೆ.ಅದೇ ರೀತಿ ಇನ್ನು ನಾಡಿನ ಅನೇಕ ಪ್ರತಿಷ್ಠಿತ ಸಂಘ – ಸಂಸ್ಥೆ, ಮಠಗಳಿಂದ ಪ್ರಶಸ್ತಿ,ಗೌರವಗಳು ಸಂದಿವೆ.

ಬದ್ಧತೆಯ ಅಭಿನವ ಶರಣ ಶ್ರೀಗಳು: ಸದಾ ಹಸನ್ಮುಖಿಯಾಗಿ ಇರುವ ಶ್ರೀಗಳು ಎಂದೆಂದಿಗೂ ಅವರ ನೋವುಗಳನ್ನು ತೋರಪಡಿಸದೆ, ಸಮಾಜದ ಉನ್ನತಿಗಾಗಿ ಸದಾ ಚಿಂತನೆ ಮಾಡುತ್ತಿರುತ್ತಾರೆ. ಇವರ ಸಮಾಜಿಕ ಕಳಕಳಿಯ ಬದ್ಧತೆ ಯಾರು ಪ್ರಶ್ನೆ ಮಾಡುವಂತೆ ಇರುವುದೇ ಇಲ್ಲ. ತಾನಾಯ್ತು ತಮ್ಮ ಕೆಲಸವಾಯಿತು ಎನ್ನುವ ದಿಸಯಲ್ಲೇ ಹೆಜ್ಜೆ ಹಾಕುವ ಮೇಧಾವಿ ಸಂತ ಇವರು.
ಜನರ ಅಶೋತ್ತರಗಳು ಈಡೇರಿಸುವ ನಿಟ್ಟಿನಲ್ಲಿ ಹತ್ತು ಹಲವು ವಿಶಿಷ್ಟ ಸೇವೆಗಳ ಮೂಲಕ ಜನಸಾಮಾನ್ಯರ ಬವಣೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಗೌರವದ ಮಾತು: ಬಸವಣ್ಣನವರ ಹಾಗೂ ಲಿಂಗೈಕ್ಯ ಪೂಜ್ಯರಾದ ಮಾಣಿಕೇಶ್ವರ , ಶಂಕರಲಿಂಗ ಅಪ್ಪಾಜಿಯವರ ಅನುಯಾಯಿಯಾಗಿ,
ಸದ್ದು ಗದ್ದಲವಿರದ ಸಾಧನೆಯ ಗದ್ದುಗೆಯೇರಿದ ಪರಮ ಪೂಜ್ಯ ಅಭಿನವ ಶರಣ ಶಂಕರಲಿಂಗ ಅಪ್ಪಾಜಿಯವರ ಸೇವಾ ಕೈಂಕರ್ಯಗಳು ಅನನ್ಯ ಮತ್ತು ಅಪಾರವಾಗಿವೆ.
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದ ಭಾವ ಇವರಲ್ಲಿ ಸದಾ ಎದ್ದು ಕಾಣುತ್ತದೆ.
ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳು.
ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೇ ಕೃತಿಯಲ್ಲಿ ನಡೆದು ತೋರಿಸಿಕೊಟ್ಟಿದ್ದಾರೆ.
ಒಬ್ಬ ಭಾರತೀಯ ಆಧ್ಯಾತ್ಮಿಕ ಯುಗ ಪುರುಷರಾಗಿ, ಮಾನವೀಯ ಮೌಲ್ಯಗಳನ್ನು ಸಾರುವ ಸಂತರಾಗಿ ಕಲ್ಯಾಣ ಕರ್ನಾಟಕದಲ್ಲಿ ಬೆಳಗುತ್ತಿದ್ದಾರೆ.

ಪೂಜ್ಯರಿಗೆ ಶುಭ ಹಾರೈಕೆಗಳು: ದಿನಾಂಕ
13/10/2024 ರಂದು ಪೂಜ್ಯರ ಜನ್ಮದಿನ. ಅಂದು ಪೂಜ್ಯರು 34 ವಸಂತಗಳನ್ನು ಪೂರೈಸಿ, 35 ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಸವಾದಿ ಪ್ರಮಥರ ಹಾಗೂ ವಿಶ್ವ ದಾರ್ಶನಿಕರ ಆಶೀರ್ವಾದ, ಅನುಗ್ರಹ ಸದಾ ಕಾಲ ಪೂಜ್ಯರ ಮೇಲಿರಲಿ ಎಂದು ಶುಭ ಹಾರೈಸುತ್ತಾ,ಇನ್ನುಷ್ಟು ಸಾಮಾಜಿಕ ಕೆಲಸ ಮಾಡಿ, ಬಾನೆತ್ತರಕ್ಕೆ ಬೆಳೆಯಲೆಂದು ಆಶಿಸುತ್ತೇವೆ.

****
ಲೇಖಕರು: ಸಂಗಮೇಶ ಎನ್ ಜವಾದಿ.
ಸಾಹಿತಿ,ಪತ್ರಕರ್ತರು, ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು,ಸಾಂಸ್ಕೃತಿಕ ಸಂಘಟಕರು.
ಬೀದರ ಜಿಲ್ಲೆ.
9663809340.

WhatsApp Group Join Now
Telegram Group Join Now

Related Posts