ಬಿಬಿತಾಂಡ:ಅವ್ಯವಸ್ಥೆಗಳ ರುದ್ರ ತಾಂಡವ- ಶಾಲೆಯಂಗಳದಲ್ಲಿಯೇ ಶೌಚ ನೀರು ಸಂಗ್ರಹ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡೇ ಬಸಾಪುರ ತಾಂಡ ಜನರ ಗೋಳಿದು. ಬಿಬಿ ತಾಂಡಾ ದ ಸರ್ಕಾರಿ ಶಾಲೆ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ, ಕೆಲ ಭಾಗ ನೀರು ನಿಂತು ಈಜುಕೊಳದಂತೆ ಗೋಚರಿಸುತ್ತಿದೆ. ಶಾಲೆ ಆವರಣ ಭಾರೀ ಗಾತ್ರದ ತೆಗ್ಗು ಗುಂಡಿಗಳೇ ತುಂಬಿದ್ದು, ಗ್ರಾಮದ ಮನೆಗಳ ಶೌಚದ ನೀರು ಹಾಗೂ ಮಲ ಮೂತ್ರ ಹೊತ್ತು ತರುವ ತ್ಯಾಜ್ಯ ನೀರು ಶಾಲೆಯ ಅಂಗಳದಲ್ಲಿಯೇ ನಿಲ್ಲುತ್ತಿದೆ. ಅಂಗನವಾಡಿ ಶಾಲಾ ಅಡಿಗೆ ಕೋಣೆಗಳ ಆಜು ಬಾಜು ಈ ನೀರು ನಿಂತು, ಬಾರೀ ಪ್ರಮಾಣ ದುರ್ನಾಥ ಬೀರುತ್ತಿದೆ. ಇದು ನಿನ್ನೆ ಮೊನ್ನೆಯ ಸಮಸ್ಯೆ ಮಾತ್ರವಲ್ಲ, ಕಳೆದ ಹತ್ತಾರು ವರ್ಷಗಳಿಂದ ಹೀಗೆ ಇದೆ ಎಂದು ತಾಂಡಾದ ಗ್ರಾಮಸ್ಥರು ದೂರಿದ್ದಾರೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ , ಹಾಗೂ ಗ್ರಾಮದ ಗ್ರಾಮ ಪಂಚಾಯ್ತಿ ಕೆಲ ಸದಸ್ಯರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ತಾಂಡಾದ ಕೆಲ ಗ್ರಾಮ ಪಂಚಾಯ್ತಿ ಸದಸ್ಯರು, ಈ ಸಮಸ್ಯಗೂ ತಮಗೂ ಸಂಬಂಧ ಇಲ್ಲವೇ ಇಲ್ಲ ಅನ್ನೋತರ ವರ್ತಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಹಶಿಲ್ದಾರರು, ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕಿದೆ. ಶಾಸಕರಿಗೆ ತಾಂಡವಾಸಿಗಳು ಚುನವಣಾ ಸಂದರ್ಭದಲ್ಲಿ ಕೈ ಹಿಡಿದು ಭಾರೀ ಲೀಡ್ ಕೊಟ್ಟಿದ್ದಾರೆ, ಇದನ್ನರಿತಾದರೂ ಶಾಸಕರು ಶೀಘ್ರವೇ ತಾಂಡಾಕ್ಕೆ ಆಗಮಿಸಿ ಅಗತ್ಯ ಕ್ರಮ ಜರುಗಸಿ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸಿಕೊಂಡಬೇಕು ಎಂದು ತಾಂಡಾದ ಯುವಕರು ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ರವರಿಗೆ ಈ ಮೂಲಕ ಒತ್ತಾಯಿಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*