ರಾಜ್ಯ

9650 ಹುದ್ದೆಗಳನ್ನು ಒದಗಿಸಿದ ಸಚಿವರಿಗೆ ಸತ್ಯಕಾಮ ಪತ್ರಿಕೆ ಸಂಪಾದಕರಿಂದ ಸನ್ಮಾನ

WhatsApp Group Join Now
Telegram Group Join Now

<span;>9650 ಹುದ್ದೆಗಳನ್ನು ಒದಗಿಸಿದ ಸಚಿವರಿಗೆ ಸತ್ಯಕಾಮ ಪತ್ರಿಕೆ ಸಂಪಾದಕರಿಂದ ಸನ್ಮಾನ

<span;>9650 ಜನರಿಗೆ ಸ್ಥಳದಲ್ಲಿಯೇ ಉದ್ಯೋಗ ನೀಡುವ ಮೂಲಕ ದೇಶದಲ್ಲಿಯೇ ಹೊಸ ಇತಿಹಾಸ ದಾಖಲಿಸಿದ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯಗಳ ಖಾತೆ ಸಚಿವರಾದ  ಡಾ. ಶರಣಪ್ರಕಾಶ ಪಾಟೀಲರನ್ನು ಸತ್ಯಮಕಾಮ ಪತ್ರಿಕಾ ವೃಂದದಿಂದ ಸನ್ಮಾನಿಸಲಾಯಿತು.

<span;>ಇದೇ ಫೆಬ್ರವರಿ 26 ಮತ್ತು 27ನೆಯ ತಾರೀಖು ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಯೋಗ ಮೇಳ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸನ್ಮಾನ್ಯ ಸಚಿವರು ಸ್ಥಳದಲ್ಲಿಯೇ 9650 ಹುದ್ದೆಗಳನ್ನು ನೀಡುವ ಮೂಲಕ ದೇಶದಲ್ಲಿಯೇ ಮೊಟ್ಟ ಮೊದಲಬಾರಿಗೆ ಎನ್ನುವಂತೆ ಇತಿಹಾಸ ದಾಖಲಿಸಿದ್ದರು. ಸಚಿವರ ಈ ವಿನೂತನ ಕೊಡುಗೆ ಮತ್ತು ಮಾನವೀಯ ಗುಣಗಳನ್ನು ಗೌರವಿಸಿ ಸತ್ಯಕಾಮ ಪತ್ರಿಕಾ ತಂಡ ಸಚಿವರನ್ನು ಸನ್ಮಾನಿಸಿದ್ದಾರೆ.

<span;>ಈ ಸಂದರ್ಭದಲ್ಲಿ ಸತ್ಯಕಾಮ ಪತ್ರಿಕೆಯ ಸಂಪಾದಕರಾದ ಆನಂದ್ ಪಿ ಮಣ್ಣೂರು, ಡಿ.ಎಂ.ಮಣ್ಣೂರು ಹಾಗೂ ರೇವಣಸಿದ್ದಪ್ಪ ಚಿಂಚೋಳಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts