ಸ್ಥಳೀಯ

ಸಾರ್ವತ್ರಿಕ ಲಸಿಕೆ ಎರಡು ದಿನದ ಜಿಲ್ಲಾ ಮಟ್ಟದ ಆರೋಗ್ಯ ತರಬೇತಿ

WhatsApp Group Join Now
Telegram Group Join Now

ಸಾರ್ವತ್ರಿಕ ಲಸಿಕೆ ಎರಡು ದಿನದ ಜಿಲ್ಲಾ ಮಟ್ಟದ ಆರೋಗ್ಯ ತರಬೇತಿ

ಯಾದಗಿರಿ : ಮಾರ್ಚ್ 20, : ಸಾರ್ವತ್ರಿಕ ಲಸಿಕೆ ಎರಡು ದಿನದ ಜಿಲ್ಲಾ ಮಟ್ಟದ ಆರೋಗ್ಯ ತರಬೇತಿ, ಯಾದಗಿರಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ದಡಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಎರಡು ದಿನದ ಜಿಲ್ಲಾಮಟ್ಟದ ಆರೋಗ್ಯ ಕಾರ್ಯಕರ್ತರ ಕೈಪಿಡಿ ತರಬೇತಿಯನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಭುಲಿಂಗ ಮಾನ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ ಅರ್ಹ ಮಕ್ಕಳನ್ನು ಜಿಲ್ಲೆಯಲ್ಲಿ ಗುರುತಿಸಿ ಲಸಿಕೆಯಿಂದ ಮಕ್ಕಳು ವಂಚಿತರಾಗದAತೆ ನಿಗಾವಹಿಸಬೇಕು ಎಂದರು. ಮಗು ಜನಿಸಿದ ನಂತರ ಅದರ ಪಾಲನೆ ಹಾಗೂ ಪೋಷಣೆ ಕುರಿತು ತಾಯಿಗೆ ಹೆರಿಗೆಯಾದ ಸ್ಥಳದಲ್ಲಿಯೇ ಅರಿವು ಮೂಡಿಸಬೇಕು ಎಂದರು.

ಆರೋಗ್ಯ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಮನೆಮನೆಗೆ ಭೇಟಿ ನೀಡಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಇದರಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಲ್ಲಪ್ಪ.ಕೆ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ತರಬೇತಿಯಲ್ಲಿ ಡಾ.ಅನಿಲ್ ಕುಮಾರ್ ಎಸ್ ತಾಳಿಕೋಟಿ ಎಸ್ ಎಂ ಕಲಬುರ್ಗಿ, ತಾಲೂಕ ಆರೋಗ್ಯ ಅಧಿಕಾರಿ ಡಾ. ಹನುಮಂತ ರೆಡ್ಡಿ, ಮಲ್ಲಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಯಶ್ವಂತ್ ರಾಠೋಡ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಮನೋಹರ್ ಎಸ್ ಪಾಟೀಲ್, ತಾಲೂಕ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಹನುಮಂತರಾವ್ ಕುಲಕರ್ಣಿ, ಮೆಹಬೂಬ್ ಜಿಲ್ಲಾ ಲಸಿಕಾ ಕ್ಷೇತ್ರ ಪರಿವೀಕ್ಷಕರು ಹಾಗೂ ಆರ್.ಸಿ.ಹೆಚ್.ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಉಪ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಸಾರ್ವತ್ರಿಕ ಲಸಿಕ ಕಾರ್ಯಕ್ರಮದ ಗುಣಮಟ್ಟದ ಲಸಿಕಾ ಕೇಂದ್ರ ಕೈಗೊಳ್ಳಲು ನಮ್ಮ ಹೊಣೆಗಾರಿಕೆಯಾಗಿದೆ ಎಂದರು. ವ್ಯವಸ್ಥಿತವಾದ ಲಸಿಕಾ ಗುಣಮಟ್ಟದ ಲಸಿಕಾ ಕೇಂದ್ರಗಳನ್ನು ಹೇಗೆ ಕೈಗೊಳ್ಳಬೇಕೆಂದು, ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳ ಬಗ್ಗೆ, ಶಿತಲಾ ಸರಪಣಿಯ ಬಗ್ಗೆ, ಗುಣಮಟ್ಟದ ಉಪ ಕೇಂದ್ರದ ಸೂಕ್ಷö್ಮಕ್ರಿಯ ಯೋಜನೆ ತಯಾರಿಸುವ ಕುರಿತು ಹೀಗೆ ಹಲವಾರು ವಿಷಯಗಳು ಕುರಿತು ತಿಳಿಸಲಾಯಿತು.

WhatsApp Group Join Now
Telegram Group Join Now

Related Posts