ಸುರಪುರ ತಾಲೂಕ ಸುಕ್ಷೇತ್ರ ತಿಂಥಣಿ ಗ್ರಾಮದಲ್ಲಿ ವಿಶ್ವ ಚೇತನ ಭಕ್ತ ಕನಕದಾಸ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು
ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಗ್ರಾಮದಲ್ಲಿ ಪ್ರಥಮವಾಗಿ ಡೊಳ್ಳು ಹಾಗೂ ಇನ್ನುಳಿದ ವಾದ್ಯ ಮೇಳವೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ತಿಂತಣಿ ಗ್ರಾಮದ ಸಂತೆ ಮಾರ್ಕೆಟ್ ಆವರಣದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಕನಕ ಗುರು ಪೀಠ ಕಾಗಿನೆಲೆ ಮಹಾಸಂಸ್ಥಾನ ಕಲ್ಬುರ್ಗಿ ವಿಭಾಗ ತಿಂಥಣಿ ಬ್ರಿಜ್ ವಹಿಸಿದ್ದರು
ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು
ಪೂಜ್ಯಶ್ರೀ ಮೌನೇಶ್ವರ ಮಹಾಸ್ವಾಮಿಗಳು ದಕ್ಷಿಣ ಕಾಶಿ ಸುಕ್ಷೇತ್ರ ತಿಂಥಣಿ ಮಹಾಸ್ವಾಮಿಗಳು
ಕನಕದಾಸ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು
ಪೂಜ್ಯಶ್ರೀ ವರದಾನೇಶ್ವರ ಮಹಾಸ್ವಾಮಿಗಳು ವಾಲ್ಮೀಕಿ ಆಶ್ರಮ ಗೋಲಪಲ್ಲಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪೂಜ್ಯಶ್ರೀ ಶಾಂತಮಯ್ಯ ಮಹಾಸ್ವಾಮಿಗಳು ರೇವಣಸಿದ್ದೇಶ್ವರ ಶಾಖ ಮಠ ಆಗತೀರ್ಥ
ಶ್ರೀ ಸಜ್ಜಾದ ಸೈಯದ್ ಭಾಷಾ ಸಾಬ್ ಭಾವೈಕ್ಯತೆ ಆಗುವ ಪ್ರವಚನಕಾರರು ಹೈದರಾಬಾದ್ ಜಗದ್ಗುರು ಆಶ್ರಮ
ಆಯುಷ್ಮಾನ್ ಮಂತ್ ಪಾಲ್ ಬಂತೇಜಿ ಬೌದ್ಧ ಧರ್ಮಗುರು ಬುದ್ಧ ವಿಹಾರ ಶಹಪುರ
ವಿಶೇಷ ಅತಿಥಿಗಳು
ರೇವಂಡ್ ಜಿ ಜೈಶೀಲ್ ಸಭಾ ಪಾಲಕರು ಕ್ರಿಶ್ಚಿಯನ್ ಧರ್ಮ ಗುರುಗಳು
ಪೂಜ್ಯಶ್ರೀ ಕೆಂಚಪ್ಪ ಪೂಜಾರಿ ಮಾಳಿಂಗರಾಯ ದೇವಸ್ಥಾನ ಮಾಳಳ್ಳಿ
ಪೂಜ್ಯಶ್ರೀ ಶಂಕ್ರಪ್ಪ ಪೂಜಾರಿ ಅಯ್ಯಾಳ ಲಿಂಗೇಶ್ವರ ದೇವಸ್ಥಾನ ದೇವರಗೋನಾಲ್
ಪೂಜ್ಯಶ್ರೀ ಸಾಯಿಬಣ್ಣ ಪೂಜಾರಿ ದೇವತ್ಕಲ್
ಪ್ರಾರ್ಥನೆ ಶ್ರೀ ಮನೋಹರ್ ಪತ್ತಾರ್ ಶಿಕ್ಷಕರು
ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಶ್ರೀ ಹಯ್ಯಾಳಪ್ಪ ಕುರುಕುಂದಿ ತಿಂಥಣಿ ನಡೆಸಿಕೊಟ್ಟರು
ಕಾರ್ಯಕ್ರಮದ ಪ್ರಾಸ್ತಾವಿಕ ಶ್ರೀ ಮಲ್ಲಿಕಾರ್ಜುನ ಸಾಹುಕಾರ್ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಮಾತನಾಡುತ್ತಾ ಕನಕದಾಸರು ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿಯವರನ್ನು ಸಮಾನವಾಗಿ ಕಂಡಿದ್ದಾರೆ ಅವರ ಸಂದೇಶಗಳು ಪ್ರಸ್ತುತ ದಿನಮಾನದಲ್ಲಿ ಪ್ರಚಾರ ಮಾಡುವುದು ಅತ್ಯವಶ್ಯಕವಾಗಿದೆ ಜಾತಿ ಮತ ಪಂಥಗಳನ್ನು ಮೀರಿ ಭಕ್ತಿಯ ತಾರಕಕ್ಕೆ ಹೋದವರು ಅವರ ಭಾವ ಪರವಶ ಭಕ್ತಿ ಮತ್ತು ಗುರು ಭಕ್ತಿ ಮತ್ತು ಸರ್ವಧರ್ಮವನ್ನು ಸಮಾನವಾಗಿ ಕಂಡಿರುವವರು ಇವತ್ತು ಅದರಂತೆ ತಿಂಥಣಿ ಗ್ರಾಮದಲ್ಲಿ ಹಾಲುಮತ ಸಮಾಜದವರು ಕೂಡಿಕೊಂಡು ಎಲ್ಲಾ ಜಾತಿಯವರ ಧರ್ಮಗುರುಗಳನ್ನು ಕರೆಯಿಸಿ ಸಂದೇಶವನ್ನು ತಿಳಿಯೋಣ ಎಂದು ಇವತ್ತು ಈ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾ ಧರ್ಮ ಗುರುಗಳನ್ನು ಇವತ್ತು ಸೇರಿಸಿ ಅವರ ನುಡಿಗಳನ್ನು ಕೇಳಿ ನಾವು ಜೀವನದಲ್ಲ ಅಳವಡಿಸಿಕೊಳ್ಳಬೇಕೆಂದು ಹೇಳಿದರು
ಕ್ರೈಸ್ತ ಧರ್ಮ ಗುರುಗಳು ಶ್ರೀ ರೇವಣ್ ಜಯಸೀಲ್ ಪಾಲಕರು ಮಾತನಾಡಿ ಏಸುಕ್ರಿಸ್ತರು ಜಗತ್ತಿಗೆ ಶಾಂತಿಯನ್ನು ಸಾರಿದವರು, ಯಾರು ನಮಗೆ ಅಪಾಯವನ್ನು ಮಾಡುತ್ತಾರೆ ಅವರಿಗೆ ನಾವು ಒಳ್ಳೆಯದನ್ನು ಮಾಡಬೇಕು ಯಾರು ನಮಗೆ ಕಷ್ಟವನ್ನು ಕೊಡುತ್ತಾರೆ ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಭಗವಂತನಲ್ಲಿ ಯೋಚನೆ ನಲ್ಲಿ ಪ್ರಾರ್ಥಿಸುತ್ತೇವೆ ಭಗವಾನ್ ಏಸುಕ್ರಿಸ್ತನಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಾರೆ ಆದರೆ ಅವರು ಎಲ್ಲಿ ಕೂಡ ತಮ್ಮ ಕಷ್ಟ ಕಾರ್ಪಣ್ಯವನ್ನು ಹೇಳಿಕೊಳ್ಳದೆ ಸದಾ ಮಾನವ ಜಾತಿಗೆ ಒಳ್ಳೆಯದಾಗಲಿ ಎಂದು ಬಯಸಿದವರು ಜಗತ್ತಿಗೆ ಶಾಂತಿಯನ್ನು ಸಾರಿ ಹೇಳಿದವರು ಎಂದು ಹೇಳಿದರು
ಸೈಯದ್ ಭಾಷೆ ಸಾಬ್ ಜಗದ್ಗುರು ಪೀಠ ಹೈದರಾಬಾದ್ ಮಾತನಾಡುತ್ತಾ ಬಸವೇಶ್ವರರು ಸಮಾನ ಸಮಾಜವನ್ನು ಕಂಡವರು ಮೇಲೆ ಕೀಳು ಎಲ್ಲವನ್ನೂ ತೆಗೆದುಹಾಕಿ ಬೇದಭಾವವಿಲ್ಲದೆ ಎಲ್ಲರೂ ನಾವು ಒಂದೇ ಎಂದು ಭಾವನೆಯನ್ನು ವ್ಯಕ್ತಪಡಿಸಿದವರು ಸದಾ ಅವರು ಅನುಭವ ಮಂಟಪದಲ್ಲಿ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸಿ ಸಮಾಜದಲ್ಲಿ ಸಮಾನತೆಯನ್ನು ತರಬೇಕಾದರೆ ಏನೇನು ಮಾಡಬೇಕೆಂದು ಕಾರ್ಯ ಯೋಜನೆಯನ್ನು ಮಾಡಿ ಅದನ್ನು ಅನುಷ್ಠಾನ ಮಾಡಿರುವವರು ಅದರಂತೆ ಕೂಡ ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರರು ಧರ್ಮ ಮತ ಪಂಥವನ್ನು ಮೀರಿ ಸಮನ್ವಯ ಹರಿಕಾರರಾಗಿ ಬಾಳಿದವರು ಅವರ ಜಗತ್ತಕ್ಕೆ ಸಮಾನತೆ ಮತ್ತು ಮಾನವೀಯ ಸಂದೇಶಗಳನ್ನು ಸಾರಿದ್ದಾರೆ ಎಂದು ಅನೇಕ ವಚನಗಳನ್ನು ಹೇಳಿದರು ಮತ್ತು ಭಗವದ್ಗೀತೆಯ ಸಾರವನ್ನು ಹೇಳಿದರು ಮತ್ತು ಉಪನಿಷತ್ತು ಸಂದೇಶವನ್ನು ಹೇಳಿದರು ಕನ್ನಡದಲ್ಲಿ ಅದ್ಭುತವಾಗಿ ನಿರರ್ಗಳವಾಗಿ ಮಾತನಾಡಿದರು
ಪೂಜ್ಯಶ್ರೀ ಶಾಂತಮ್ಮ ರೇವಣಸಿದ್ದೇಶ್ವರರ ಮಾತನಾಡಿ ಕನಕದಾಸರು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ ಮತ್ತು ಅನೇಕ ಕೀರ್ತನೆಗಳನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ ಅವರಿಲ್ಲಿರುವ ಜ್ಞಾನ ಬಂಡಾರ ಮತ್ತು ಅವರಲ್ಲಿರುವ ಭಕ್ತಿ ಭಾವವನ್ನು ಇವತ್ತಿನ ದಿವಸ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗಿದೆ ಇವತ್ತು ಈ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ಸೇರಿ ಇದು ನಮ್ಮ ಕಾರ್ಯಕ್ರಮ ಎಂದು ಭೇದಭಾವವಿಲ್ಲದೆ ಕಾರ್ಯಕ್ರಮ ಮಾಡಿರುವುದು ಇದು ಸಾಕ್ಷಿಯಾಗಿದೆ ಎಂದು ಹೇಳಿದರು
ಪೂಜ್ಯಶ್ರೀ ವರದಾನೇಶ್ವರ ಮಹಾಸ್ವಾಮಿಜಿ ಮಾತನಾಡುತ್ತಾ ಜಗತ್ಗುರು ಮೌನೇಶ್ವರರು ಈ ಗ್ರಾಮದಲ್ಲಿ ಸರ್ವರ ಮನೆದೇವರಾಗಿದ್ದಾರೆ ಇಂದು ಮುಸ್ಲಿಂ ಕ್ರೈಸ್ತರು ಎಲ್ಲರೂ ಮೌನೇಶ್ವರನನ್ನು ಪ್ರಾರ್ಥನೆ ಮಾಡುತ್ತಾರೆ ಪೂಜಿಸುತ್ತಾರೆ ಮತ್ತು ಆತನ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು
ಪೂಜ್ಯಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಆಶೀರ್ವಚನವನ್ನು ನೀಡಿ ತಿಂಥಣಿ ಗ್ರಾಮದಲ್ಲಿ ಇಡೀ ಜಗತ್ತಿಗೆ ಧರ್ಮ ಸರ್ವಧರ್ಮವನ್ನು ದಾರಿ ಹೇಳಿದಂತ ಜಗದ್ಗುರು ಮೌನೇಶ್ವರರು ನೆಲೆಸಿದ್ದಾರೆ ಇದು ಪವಿತ್ರವಾದ ಭೂಮಿ ಇಂತಹ ಕರ್ಮ ಭೂಮಿಯಲ್ಲಿ ನಾವೆಲ್ಲರೂ ಜಾತಿ ಮತ ಪಂಥವನ್ನು ಬಿಟ್ಟು ನಾವೆಲ್ಲರೂ ಒಂದೇ ಅಣ್ಣತಮ್ಮಂದಿರು ಎಂಬ ಭಾವನೆಯಿಂದ ಬದುಕಿ ತೋರಿಸಿರುವುದು ಈ ಗ್ರಾಮ ಎಂಬುದು ಈ ಕಾರ್ಯಕ್ರಮದಿಂದ ಗೊತ್ತಾಗ್ತಿದೆ ಎಂದು ಸವಿವರವಾಗಿ ಕನಕದಾಸರ ಜೀವನ ದರ್ಶನವನ್ನು ಸ್ಪಷ್ಟವಾಗಿ ಹೇಳಿದರು
ವೇದಿಕೆಯಲ್ಲಿ ಶ್ರೀ ಭೀಮರಾಯ ಮೂಲಿಮನಿ ದೇವತ್ಕಲ್
ಶ್ರೀ ಕಾಳಪ್ಪ ಕವತಿ ಅಧ್ಯಕ್ಷರು ಸುರಪುರ ತಾಲೂಕ ಕುರುಬ ಸಮಾಜ
ಶ್ರೀ ರಾಘವೇಂದ್ರ ಮಾಚ್ಗುಂಡಾಳ
ಶ್ರೀ ಮಲ್ಲು ದಂಡಿನ್ ಮಂದಲಾಪುರ
ಶ್ರೀ ಕೃಷ್ಣ ಹಾವಿನ ಬಾದ್ಯಪೂರ್
ಶ್ರೀ ಭೀಮಣ್ಣ ಕವಲದಾರ್ ತಿಂಥಣಿ
ಶ್ರೀ ಗಂಗಾಧರ ನಾಯಕ್ ತಿಂಥಣಿ ಕಲ್ಯಾಣ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷರು
ಶ್ರೀ ದೇವೇಂದ್ರಪ್ಪ ಅಂಬಿಗೇರ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು
ಶ್ರೀ ಲಿಂಗಣ್ಣ ಜೋಶಿ ತಿಂತಣಿ
ಶ್ರೀ ಸಂಜು ಕುಮಾರ್ ನಾಯಕ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಲಿ ಸದಸ್ಯರು
ಶ್ರೀ ಹನುಮಂತ ದೊಡ್ಡಮನಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ತಿಂಥಣಿ
ಶ್ರೀ ಇಮಾಮ್ ಸಾಬ್ ಹವಾಲ್ದಾರ್ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು
ಶ್ರೀ ವೀರಯ್ಯಸ್ವಾಮಿ ತಿಂಥಣಿ
ಶ್ರೀ ಯಂಕಪ್ಪ ಬೂದುಗುಂಪಿ ಗ್ರಾಮ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಪ್ರಥಮವಾಗಿ ಎಲ್ಲಾ ಗುರುಗಳನ್ನು ಸ್ವಾಗತಿಸಲು ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಖ್ಯ ರಸ್ತೆಗೆ ಡೊಳ್ಳು ಮತ್ತು ವಾದ್ಯಗಳ ಸಮೇತ ಆಗಮಿಸಿ ಕುಂಭ ಕಳಸದೊಂದಿಗೆ ಗುರುಗಳನ್ನು ಸ್ವಾಗತಿಸಿದರು ಅಲ್ಲಿಂದ ಮೆರವಣಿಗೆ ಪ್ರಾರಂಭಗೊಂಡು ಸಂತೆ ಮಾರ್ಕೆಟ್ ಅವರಿಗೆ ಮೆರವಣಿಗೆ ನಡೆಯಿತು ಅಲ್ಲಿ ಕಾರ್ಯಕ್ರಮ ಜರುಗಿತು ತಿಂಥಣಿ ಶಾಂತಪುರ ಹುಣಸಿಹಳೆ ಕನಕ ನಗರ ವಿವಿಧ ಗ್ರಾಮಗಳಿಂದ ಆಗಮಿಸಿದ್ದರು ಮತ್ತು *ತಿಂಥಣಿ ಗ್ರಾಮದ ಸರ್ವ ಜಾತಿ ಜನಾಂಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶೇಷವಾಗಿತ್ತು