ಅಪರಾಧ

ಶಿಕ್ಷಕರು ಆಗಬೇಕಾ…?

WhatsApp Group Join Now
Telegram Group Join Now

ಶಿಕ್ಷಕರು ಆಗಬೇಕಾ…?

ಸರಳ ದಾರಿ ವಿಷಯವಾರು ಶಿಕ್ಷಕರು ಆಗಬೇಕು ಎಂದರೆ ಸಾಕಷ್ಟು ಪೈಪೋಟಿ ಇರುತ್ತದೆ ಬಹಳ ಸಂಖ್ಯೆಯಲ್ಲಿ ಶಿಕ್ಷಕರ ತರಬೇತಿ ಪಡೆದ ಪದವಿದರರು ಇರುತ್ತಾರೆ
ಅದಕ್ಕಾಗಿ ಹೀಗೆ ಮಾಡಿ ಒಂದಿಷ್ಟು ಚಿತ್ರಕಲಾ ಕಾಲೇಜುಗಳಿಗೆ ಪ್ರವೇಶ ಪಡೆಯಿರಿ ಅದರಲ್ಲಿ ಚಿತ್ರಕಲೆ ಬಗ್ಗೆ ಹಾಗೂ ಕಲಾಇತಿಹಾಸ ವಿಷಯಗಳು ಇರುತ್ತವೆ ಹೌದು ನಮ್ಮಗೆ ಚಿತ್ರಕಲೆ ಬಗ್ಗೆ ಆಸಕ್ತಿ ಇಲ್ಲ ಬರಲ್ಲ ಅಂತ ಚಿಂತೆಯೇ
ಚಿತ್ರಕಲೆ ಬರಬೇಕು ಎನ್ನುವ ಭಯವೇ ಬೇಡ
ಏನಿಲ್ಲ ಕಾಲೇಜುಗಳಲ್ಲಿ ಅರ್ದ ಅಂಕಗಳ ಪರೀಕ್ಷೆ ಇರುತ್ತವೆ
ಹಣನೀಡಿ ಕೈ ಬೆಚ್ಚಗೆ ಮಾಡಿದರೆ ಅಂಕಗಳು ಸಿಗುತ್ತವೆ ಪರೀಕ್ಷೆ ಸಹ ಬರೆಯುವುದೆ ಬೇಡ ನಿಮ್ಮ ಕಡೆ ಹಣ ಇದ್ದರೆ ಹಣವೇ ಬರೆಯುತ್ತದೆ

ಇದನ್ನೂ ಓದಿ:https://janaaakrosha.com/mla-chennareddy-patila-tunnura-should-adopt-yoga-in-daily-life/index.php

ಉಳಿದ ಅರ್ಧ ಅಂಕಗಳ ಪರೀಕ್ಷೆ ಜಿಲ್ಲಾ ಕೇಂದ್ರಗಳಲ್ಲಿ ಇರುತ್ತವೆ ಅಲ್ಲಿಯೂ ಅಷ್ಟೇ ಹಣ ನೀಡಿ ಉತ್ತಮ ಕಲಾವಿದನನ್ನು ಒಂದು ವಿಷಯಕ್ಕೆ ಇಷ್ಟು ಹಣ ನೀಡುತ್ತೇನೆ ಎಂದು ಡೀಲ್ ಮಾಡಿಕೊಂಡರೇ ಆ ಕಲಾವಿದರು ತಮ್ಮಗೆ ಪರೀಕ್ಷೆಗಿಂತ ನಿಮ್ಮ ಪರೀಕ್ಷೆ ಚನ್ನಾಗಿ ಬರೆದು ಅಂಕ ನೌಕರಿ ಸಿಗುವ ಹಾಗೆ ನಿಮ್ಮ ಪರೀಕ್ಷೆ ಬರೆಯುತ್ತಾರೆ

ಅಲ್ಲಿಯೂ ಕಡಿಮೆ ಅಂಕ ಬಂದರೇ ಅದಕ್ಕೂ ಸಹ ದಾರಿ ಇದೇ ಕಾಲೇಜು ಪ್ರಾಂಶುಪಾಲರನ್ನು ಹಿಡಿದು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿಸಿ ಯೂನಿವರ್ಸಿಟಿಯಲ್ಲಿ ಅಂಕ ಹಾಕಿಸಿಕೊಂಡು ಬರುತ್ತಾರೆ

ಈ ಸುದ್ದಿಯನ್ನು ಓದಿhttps://janaaakrosha.com/if-the-defenders-turn-into-devourers-our-karnataka-army-will-become-the-landlord/index.php

ಆದರೆ ಉತ್ತಮ ಕಲಾವಿದ ಅಂಕಗಳಿಂದ ಸತ್ತರು ಆಗಲ್ಲ
ಅಂಕಗಳಿಂದ ನೌಕರಿ ಸಿಗಬಹುದು ಕಲೆ ಹೃದಯ ಹಾಗೂ ತಲೆಯಿಂದ ಬರಬೇಕು

ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ತುಂಬುತ್ತದೆ ಅವರೇನು ನಿಮ್ಮಲ್ಲಿ ಕಲೆ ಎಷ್ಟು ಇದೆ ಎಂದು ನೋಡುತ್ತದೆಯೇ ಇಲ್ಲ ಅಂಕವಷ್ಟೇ ನೋಡಿ ಶಿಕ್ಷಕರ ಆಗಲು ಯೋಗ್ಯ ಎಂದು ನಿರ್ಧಾರ ಮಾಡುತ್ತದೆ
ಆಗ ಸರಳವಾಗಿ ನೀವು ಚಿತ್ರಕಲಾ ಶಿಕ್ಷಕರು ಆಗಿ ನಂತರ ನೀವು ಯಾವ ಶಾಲೆಗೆ ಬಡ್ತಿ ಪಡೆದಿರುತ್ತಿರಿ ಅಲ್ಲಿ ಯಾವುದಾದರು ವಿಷಯ ಪಾಠಮಾಡಿದರೇ ಜೀವನ ಸರಳ

ನಿಜವಾದ ಕಲಾವಿದರು ಸುಮ್ಮನೆ ಇರುತ್ತಾರಾ ಅಂತಿರಾ…?ಹೌದು ಈಗ ಹೋದಸಲ ಚಿತ್ರಕಲಾ ಶಿಕ್ಷಕರಾದವರಲ್ಲಿ ಎಷ್ಟೂ ಜನಕ್ಕೆ ಚಿತ್ರಕಲೆಯೇ ನೆಟ್ಟಗೆ ಬರಲ್ಲ ಒಂದು ಹಣ ನೀಡಿ ಅಂಕಪಡೆದವರು ಹಾಗೂ ಚಿತ್ರಕಲಾ ಕಾಲೇಜು ಸಂಸ್ಥಾಪಕರ, ಪ್ರಾಂಶುಪಾಲರ ಇಲ್ಲ ಸಹೋದರ,ಸಹೋದರಿಯರ ಬೀಗರ ಮಕ್ಕಳೆ ಚಿತ್ರಕಲಾ ಶಿಕ್ಷಕರು ಆಗಿದ್ದು ಇನ್ನೂ ನಮ್ಮ ಕಲಾವಿದರು ನಮ್ಮದು ಆಗಲಿಲ್ಲ ಅಂತ ಗೋಳಾವುದು ತಲೆತುರಿಸಿಕೊಳ್ಳುವುದು ಅಷ್ಟೇ ಮಾಡುತ್ತಾರೆ ಅದರಲ್ಲಿ ಯಾರಾದರೂ ಪ್ರಶ್ನೆ ಮಾಡಿದರೇ ನಮ್ಮಗೆ ಏಕೆ ಅಂತ ಸುಮ್ಮನೆ ಆಗುವವರು ಇದ್ದಾರೆ, ಇನ್ನೂ ಸ್ವಲ್ಪ ಕಲಾವಿದರು ನಮ್ಮಗೇಕೆ ನಾನು ಒಂದು ಪೇಂಟಿಂಗ್,ಶಿಲ್ಪಕಲೆ ಮಾಡಿದರೆ ಸಾಕು ಇಷ್ಟು ಹಣ ಸಿಗುತ್ತದೆ ಅಂತಾರೆ, ಪ್ರತಿಭಟನೆಗೆ ಹಣ ನೀಡಿ ,ಹಾಕಿ ಬರುವಷ್ಟು ಉಳ್ಳವರು ನಮ್ಮ ಚಿತ್ರಕಲಾವಿದರಲ್ಲಿ ಇರುವುದು ಕಡಿಮೆ ಮನೆಯ ಪರಿಸ್ಥಿತಿಯೇ ಕಷ್ಟ ಇರುತ್ತದೆ ಯಾರೂ ಸಹ ಬಹಳ ತೆಲೆಕೆಡಿಸಿಕೊಳ್ಳಲ್ಲ

ಇನ್ನೂ ಇಂತಹದರ ಬಗ್ಗೆ ಮಾದ್ಯಮಗಳು,ಸರ್ಕಾರ, ಪಾಲಕರು, ಜನಪ್ರತಿನಿಧಿಗಳು ಈ ತರಹ ನಿಜವಾದ ಕಲಾವಿದರಿಗೆ ಅನ್ಯಾಯ ಆಗುತ್ತಿದೆ ಅಂತ ತಲೆಕೆಡಿಸಿಕೊಳ್ಳುವವರಿಲ್ಲ ಏಕೆಂದರೆ ಕಲಾವಿದರ ಮತಗಳ ಸಂಖ್ಯೆ ಕಡಿಮೆ, ಅಬ್ಬಬ್ಬಾ ಎಂದರೇ ಒಂದೆರಡು ಲಕ್ಷ ಕಲಾವಿದರು ಕರ್ನಾಟಕದಲ್ಲಿ ಇರಬಹುದು
ಅದಕ್ಕೆ ಚಿತ್ರಕಲಾ ಶಿಕ್ಷಕರ ತರಬೇತಿ ಪಡೆಯಿರಿ ಶಿಕ್ಷಕರಾಗಿ
ನೌಕರಿಗಾಗಿ ಲಕ್ಷಾನುಗಟ್ಟಲೆ ನೀಡಬೇಕು ಎನ್ನುವುದು ಹೇಳುವುದು ಕೇಳಿದ್ದೇವೆ ಅದು ಸಹ ತಪ್ಪುತ್ತದೆ ಒಂದು ಎರಡು ಲಕ್ಷದಲ್ಲಿ 5 ವರ್ಷದ ತರಬೇತಿ ಮುಗಿಯುತ್ತದೆ
ಹಣಕ್ಕಾಗಿಯೇ ಇರುವ ಕಾಲೇಜುಗಳ ಪ್ರವೇಶಗಳು ಪ್ರಾರಂಭವಾಗಿ ಪ್ರವೇಶ ಪಡೆಯಿರಿ

ಅದೇ KPSC ಚಿತ್ರಕಲಾವಿದರನ್ನು ನೇರ ನೇಮಕಾತಿ ಮಾಡುವ ಬದಲು ಚಿತ್ರಕಲೆಗೆ ಸಂಬಂಧ ಪಟ್ಟ ಸ್ಮರಣ ಚಿತ್ರ,ಮಣ್ಣಿನ ಮಾದರಿ,ಬಣ್ಣಗಳ ಮಿಶ್ರಣಗಳ,ಸಿಸ್ ಫೆನ್ಸಿಲ್ ಗಳ ಬಗ್ಗೆ CET ಪರೀಕ್ಷೆ ನೆಡೆಸಿ ಎಂದು ಕಲಾವಿದರು ನ್ಯಾಯಾಲಯಕ್ಕೆ ಹೋಗಿದ್ದರೆ ಆಗ
ಪಕ್ಕಾ ನಿಜವಾದ ಕಲಾವಿದರು ಚಿತ್ರಕಲಾ ಶಿಕ್ಷಕರಾಗಿ ಆಯ್ಕೆ ಆಗುತ್ತಿದ್ದರು, ದುರ್ದೈವ ನಮ್ಮ ನಮ್ಮಲ್ಲಿ ಒಗ್ಗಟ್ಟು ಇಲ್ಲ,

ಮೇಲೆ ಹೇಳಿದಂತೆ ನನಗೆ ತಿಳಿದ ಮಟ್ಟಿಗೆ ಹಿರಿಯ ಹಾಗೂ ಕಿರಿಯ ಕಲಾವಿದ ಅನಿಸಿಕೆಗಳನ್ನು ಬರೆದಿರುವೇ
ತಪ್ಪಿದ್ದರೆ ಕ್ಷಮಿಸಿ…
ನಿಮ್ಮ ಅಭಿಪ್ರಾಯ ಹಂಚಿಕೆಕೊಳ್ಳಿ

…..ಅಯ್ಯನಗೌಡ ಮಾಲಿಪಾಟೀಲ,ಕಲಾವಿದ

 

ಫೇಸಬುಕ್ಕಿನಲ್ಲಿ ನನ್ನನ್ನು ಬೆಂಬಲಿಸಿhttps://www.facebook.com/Janaaakroshaa?mibextid=ZbWKwL

WhatsApp Group Join Now
Telegram Group Join Now

Related Posts