ಸ್ಥಳೀಯ

ನೀರಿನ ಪರಿಕ್ಷೆ ಏಳು ದಿನಗಳ ವಿಶೇಷ ಅಭಿಯಾನ ಹಾಗೂ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳಿಗೆ  Field Test Kit (FTK) ಕುರಿತು ತರಬೇತಿ

WhatsApp Group Join Now
Telegram Group Join Now

ಜಿಲ್ಲಾ ಪಂಚಾಯತ ಯಾದಗಿರಿ ಹಾಗೂ ಗ್ರಾಮೀಣ ಕುಡಿಯುವ ನೀರು & ನೈಮ೯ಲ್ಯ ವಿಭಾಗ ಯಾದಗಿರಿ ಇವರ ಸಹಯೋಗದಲ್ಲಿ ದಿನಾಂಕ 28/06/2024 ಹಾಗೂ 29/06/2024  ರ ಎರಡು ದಿನಗಳ ತರಭೇತಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿಗಳಾದ ಶ್ರೀಮತಿ ಗರಿಮಾ ಪನ್ವಾರ ಅವರು ಉದ್ಗಾಟಿಸಿದರು ಹಾಗೂ ಈ ತರಬೇತಿ ಕಾಯ೯ಕ್ರಮದ ಮುಖ್ಯ ಉದ್ದೇಶದ ಬಗ್ಗೆ ಮಾತನಾಡುತ್ತಾ ಈ ಕೆಳಗಿನ ಸಲಹೆ ಸೂಚನೆಗಳನ್ನು ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ಇದನ್ನೂ ಓದಿhttps://janaaakrosha.com/it-is-a-corrupt-system-to-make-money-on-paper

ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುವ ಪ್ರಕರಣಗಳು ಕಂಡು ಬಂದಿದ್ದು, ಇತ್ತಿಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಮುನ್ನಚ್ಚರಿಕೆ ವಹಿಸಲು ಕರೆ ನೀಡಿದರು.

ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಮೂಲಗಳ ರಾಸಾಯನಿಕ ಮತ್ತು ಬ್ಯಾಕ್ಟಿರಿಯಲಾಜಿಕಲ್ ನಿಯತಾಂಕಗಳ ಗುಣಮಟ್ಟವನ್ನು ಪರೀಕ್ಷಿಸಲು ಆದೇಶಿಸಿದರು.

  • ಕಲುಷಿತವೆಂದು ಕಂಡು ಬರುವ ನೀರಿನ ಮೂಲಗಳಿಗೆ ಪರ್ಯಾಯವಾಗಿ ಶುದ್ಧ ಮತ್ತು ಸುರಕ್ಷಿತ ನೀರನ್ನು, ಒದಗಿಸಲು ನಿರ್ದೇಶಿಸಲಾಗಿದೆ.
  • ಕಲುಷಿತವೆಂದು ಕಂಡುಬಂದಿರುವ ನೀರಿನ ಮೂಲಗಳಿಂದ ಕುಡಿಯಲು ನೀರನ್ನು ಸರಬರಾಜು ಮಾಡದೇ ಅಂತಹ ಮೂಲಗಳ ಹತ್ತಿರ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂಬ ನಾಮಫಲಕವನ್ನು ಅಳವಡಿಸಿ, ಇಂತಹ ನೀರಿನ ಮೂಲಗಳ ವಿವರಗಳನ್ನು ಜಲ ಜೀವನ್ ಮಿಷನ್ ನ WQMIS ನಲ್ಲಿ Geo-tagging ಮಾಡಲು ಸೂಚಿಸಿದರು.
  • FTKs ಮತ್ತು H2S Vials ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಎಲ್ಲಾ ನೀರಿನ ಮೂಲಗಳ ಪರೀಕ್ಷಾ ವರದಿಗಳನ್ನು WQMISನಲ್ಲಿ ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ,ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಹಾಗೂ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹಾಗೂ ನೀರಿನ ಪರೀಕ್ಷೆಯನ್ನು ಸ್ಥಳದಲ್ಲೇ ಪರೀಕ್ಷಿಸಲು ಮಾನ್ಯ ಆಯುಕ್ತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ  ಇಲಾಖೆ ರವರ ನೀರ್ದೇಶನದ ಮೇರೆಗೆ ಜಿಲ್ಲೇಯ ಎಲ್ಲಾ  ಗ್ರಾಮಗಳಲ್ಲಿ ವಿಶೇಷ ಅಭಿಯಾನ ದಿನಾಂಕ:27/06/2024 ರಿಂದ 03/07/2024 ವರೆಗೆ ಕೈಗೊಳ್ಳಲಾಗಿದೆ.

https://janaaakrosha.com/first-fir-filed-against-nirmala-devi-sangh-for-providing-poor-food

ಹಾಗೂ ಈ ಸಂಧಬ೯ದಲ್ಲಿ ಶ್ರೀ ಆನಂದ  ಗ್ರಾಮೀಣ ಕುಡಿಯುವ ನೀರು & ನೈಮ೯ಲ್ಯ ವಿಭಾಗ ಯಾದಗಿರಿ ಇವರು  ತರಬೇತಿಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು ಹಾಗೂ ಈ ಸಂಧಬ೯ದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾಯ೯ದಶಿ೯ಗಳಾದ ವಿಜಯಕುಮಾರ್‌ ಎಮ್‌ ಅವರು ಹಾಗೂ ಡಿ ಎಚ್‌ ಒ ಅವರು ಹಾಗೂ ಸಹಾಯಕ  ಕಾಯ೯ಪಾಲಕ ಅಭಿಯಂತರರು ಸುರಪುರ, ಶಹಾಪೂರ ಹಾಗೂ ಯಾದಗಿರಿ  ಹಾಗೂ ತಾಲೂಕಾ ಕಾಯ೯ನಿವಾ೯ಕ ಅಧೀಕಾರಿಗಳು  ಹಾಗೂ ಜಿಲ್ಲಾ ಪಂಚಾಯತಿ ಸಿಬ್ಬಂದಿಗಳು  ಗ್ರಾಮೀಣ ಕುಡಿಯುವ ನೀರು & ನೈಮ೯ಲ್ಯ ವಿಭಾಗ ಯಾದಗಿರಿ ಸಿಬ್ಬಂದಿಗಳು ಯಾದಗಿರಿ , ಗುರುಮಿಟಕಲ್‌ & ವಡಗೇರಾ ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು ಬಾಗವಹಿಸಿದ್ದರು .

ಹಾಗೂ ಈ ಸಂಧಂಬ೯ದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂಧಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪೋಸ್ಟರ್‌ & ಪಾಕೇಟ್‌ ಹ್ಯಾಂಡ್‌ ಬುಕ್‌ಗಳನ್ನು ಬಿಡುಗಡೆ ಮಾಡಿದರು ಹಾಗೂ ಈ ಸಂಧಬ೯ದಲ್ಲಿ ಪಂಚಾಯತ ಅಭಿವೃಧ್ದಿ ಅಧಿಕಾರಿಗಳಿಗೆ FTK kit ಗಳನ್ನು ಕೂಡಾ ವಿತರಣೆ ಮಾಡಲಾಯಿತು ಹಾಗೂ ಈ ಕಾಯ೯ಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು & ನೈಮ೯ಲ್ಯ ವಿಭಾಗ ಯಾದಗಿರಿ ಜೆಜೆಎಮ್‌ ಯೋಜನಾ ನಿಧೆ೯ಶಕರು ಸಿಬ್ಬಂದಿಗಳು ಜೆಜೆಎಮ್‌ ಸಮಾಲೋಚಕರು ಹಾಗೂ SBM ಸಿಬ್ಬಂಧಿಗಳು ಪ್ರಯೋಗಾಲಯದ ಸಿಬ್ಬಂದಿಗಳಾದ ಹಿರಿಯ ವಿಶ್ಲೇಷಣಾಗಾರರು ಶ್ರೀ.ರವಿಕುಮಾರ ವಿಶ್ಲೇಷಣಾಗಾರರಾದ ಶ್ರೀ.ಬಾಲರಾಜ , ಶ್ರೀ.ಪದೀಪ್‌  ಅಶ್ವಿನಿ ಮತ್ತು ನೀರಿನ ಮಾದರಿ ಸಂಗ್ರಹಗಾರರಾದ ಶ್ರೀ.ಯಂಕಟರಮಣ,  ಶ್ರೀ.ಮುದಕಪ್ಪ ಶ್ರೀ.ಕುಮಾರ ಸದರಿ ಪ್ರಯೋಗಾಲಯದ ಸಿಬ್ಬಂದಿಗಳು ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಿದರು DTSU ಸಿಬ್ಬಂದಿಗಳು  ISRA ಸಿಬ್ಬಂದಿಗಳು ಬಾಗವಹಿಸಿದ್ದರು

https://janaaakrosha.com/the-toilet-water-is-collected-in-rudra-tandava-school-yard-of-bibitanda-disorders

ಜಲ ಜೀವನ್ ಮಿಷನ್ ಯೋಜನೆಯಡಿ ಸರಬರಾಜು ಮಾಡುತ್ತಿರುವ ಶುದ್ಧ ಮತ್ತು ಸುರಕ್ಷಿತ ನೀರಿನ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು, ನೀರಿನ ಗುಣಮಟ್ಟದ ಬಗ್ಗೆ ಜಾಗೃತಿ ಮತ್ತು ಅರಿವನ್ನು ಮೂಡಿಸುವುದು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಅಭಿಯಾನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮದಡಿಯಲ್ಲಿ ಬರುವ ಕೆಲವು ಚಟುವಟಿಕೆಗಳನ್ನು ಮಾಡಲಾಗುತ್ತಿದೆ.

  • FTKs ಮತ್ತು H2S Vialsಗಳನ್ನು ಉಪಯೋಗಿಸಿ ಗ್ರಾಮಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕೈಗೊಳ್ಳುವ ಸಲುವಾಗಿ 5 ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ.ಈಗಾಗಲೇ ಮಹಿಳೆಯರನ್ನು ಗುರುತಿಸಿ ಸೂಕ್ತ ತರಬೇತಿ ನೀಡಿರುತ್ತದೆ.
  • FTKs ಮತ್ತು H2S Vials ಗಳನ್ನು ಉಪಯೋಗಿಸಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಪ್ರತಿ ಹಳ್ಳಿಯಲ್ಲಿಯೂ ಕನಿಷ್ಠ ಮೂರು ಮನೆಗಳಿಗೆ ಸರಬರಾಜಾಗುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಮ್ಮ ಜಿಲ್ಲೆಯಲ್ಲಿರುವ ಒಟ್ಟು 884 ಶಾಲೆಗಳಲ್ಲಿ,821 ಶಾಲೆಗಳಿಗೆ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗಿದ್ದು, ಶೇ.92.97 ಗುರಿಯನ್ನು ಹಾಗೂ 1150 ಅಂಗನವಾಡಿ ಕೇಂದ್ರಗಳಲ್ಲಿ 1090 ಅಂಗನವಾಡಿಗಳಿಗೆ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಅಂದರೆ ಶೇ.94.78 ರಷ್ಟು ಪ್ರಗತಿಯನ್ನು ಕೈಗೊಳ್ಳಲಾಗಿರುತ್ತದೆ. ಜಿಲ್ಲೆಯ 465 ಗ್ರಾಮಗಳ ಪೈಕಿ 440 ಗ್ರಾಮಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಗುಣಮಟ್ಟವನ್ನು ಅಂದರೆ (ಪ್ರತಿ ಹಳ್ಳಿಯಲ್ಲೂ ಕನಿಷ್ಠ ಮೂರು ಮನೆಗಳಿಗೆ ಸರಬರಾಜಾಗುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು) ಶೇ 94.62% ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕೊಳವೆಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವ (PWS) ಮಾದರಿಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಕಾರ್ಯಕ್ರಮವು ಪ್ರಗತಿಯಲ್ಲಿದ್ದು, ಭಾರತ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಾರಂಭಿಸಿರುವ “ಸ್ವಚ್ಛ ಜಲ ಸೆ ಸುರಕ್ಷಾ” (ಶುದ್ಧ ನೀರಿನಿಂದ ಸುರಕ್ಷತೆ) ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಕಾರ್ಯನಿರತವಾಗಿದೆ.

 

ಜನ ಆಕ್ರೋಶ ಪತ್ರಿಕೆಗೆ ಜಾಹಿರಾತು ಮತ್ತು ಸುದ್ದಿ ಹಾಗೂ ಲೇಖನಗಳನ್ನು ನೀಡಲು ನೇರವಾಗಿ ಸಂಪಾದಕರೊಂದಿಗೆ ವ್ಯವಹರಿಸಿ ಮತ್ತು ಮಾತನಾಡಿ. ನಕಲಿ ಪತ್ರಕರ್ತರು, ನಕಲಿ ವರದಿಗಾರರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರಿ ನೌಕರರನ್ನು ಗುತ್ತಿಗೆದಾರರನ್ನು ಏಮಾರಿಸುವ ಕಾರ್ಯ ನಡೆಯುತ್ತಿದೆ. ಒಂದೇ ಒಂದು ವಾಕ್ಯ ಬರೆಯಲು ಬಾರದವನ ಕೈಯಲ್ಲಿ ಮೈಕು ಮತ್ತು ವಾಹನಕ್ಕೆ ಪ್ರೆಸ್‌ ಎಂದು ಬರೆದಿರುತ್ತದೆ. ಇವರೆಲ್ಲಾ ಖದೀಮರು! ಖದೀಮರ ಬದುಕು ನರಕವಾಗಬೇಕು ಎಂದರೆ ಜನರು ಜಾಗೃತರಾಗಬೇಕು.

ಲಕ್ಷ್ಮೀಕಾಂತ ನಾಯಕ, ಸಂಪಾದಕರು ಜನ ಆಕ್ರೋಶ ಪತ್ರಿಕೆ. ಮೊಬೈಲ್‌ ಸಂಖ್ಯೆಗಳು: 9845968164/9886535957  email: [email protected]

 

 

WhatsApp Group Join Now
Telegram Group Join Now

Related Posts