ಸ್ಥಳೀಯ

ಮಹಿಳೆರಲ್ಲಿ ನಾವು ಜಾಗೃತಿ ಮಟ್ಟವನ್ನು ಹೆಚ್ಚಿಸಬೇಕು

WhatsApp Group Join Now
Telegram Group Join Now

ಯಾದಗಿರಿ : ಫೆಬ್ರವರಿ 22,  : ಯಾದಗಿರಿ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವತಿಯಿಂದ ಜಿಲ್ಲಾಡಳಿತ ಸಭಾಂಗಣದಲ್ಲಿ ಆಯೋಜಿಸಿರುವ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಹಂತ-2ರ ಯೋಜನೆಯಲ್ಲಿನ ಸುಸ್ಥಿರ ಋತು ಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ಹಮ್ಮಿಕೊಂಡ ತರಬೇತಿದಾರರ ತರಬೇತಿ  (ToT) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಸುಶೀಲ.ಬಿ ಅವರು ಸಸಿಗೆ ನೀರುಣ್ಣಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಸ್ವೀಪ್ ಚಟುವಟಿಕೆ ಭಾಗವಾಗಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸೃಜನಾತ್ಮಕ ಕಿರುಚಿತ್ರ ತೋರಿಸಲಾಯಿತು. ಬಳಿಕ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಶ್ರೀ ಗುರುನಾಥ.ಎನ್ ಗೌಡಪ್ಪನೋರ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್ ಅವರು ಮಾತನಾಡಿ ಋತು ಚಕ್ರ ಪ್ರಕ್ರಿಯವು ನೈಸಗಿರ್ಕವಾದದ್ದು, ಈ ಅವಧಿಯಲ್ಲಿ ಮಹಿಳೆರಿಗೆ ಈ ಅವಧಿಯಲ್ಲಿ  ಕಿನ್ನತಗೆ ಒಳಗಾಗಂತೆ ಜಾಗೃತಿ ಮೂಡಿಸಬೇಕು. ಮುಟ್ಟಿನ ಅವಧಿಯಲ್ಲಿ ಮಹಿಳೆರಲ್ಲಿ ಇರುವ ಮೂಡನಂಬಿಕೆಗಳನ್ನು ಹೊಗಲಾಡಿಸಬೇಕಿದೆ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆರಲ್ಲಿ ನಾವು ಜಾಗೃತಿ ಮಟ್ಟವನ್ನು ಹೆಚ್ಚಿಸಬೇಕು ಹಾಗೂ ಸೂಕ್ತ ನಿರ್ವಹಣೆಯ ಕುರಿತು ಅರಿವು ಮೂಡಿಸಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀಮತಿ ಮೀನಾಕ್ಷಿ ಭರತ ಅವರು ತರಬೇತಿ ನೀಡಿದರು.
CSR  ಸಹಯೋಗದಲ್ಲಿ  SBI ಮತ್ತು ಕೆನರಾ ಬ್ಯಾಂಕ ಮುಖಾಂತರ ಒದಗಿಸಿರುವ 1200 ಮೆನ್ಸು÷್ಟçವಲ್ ಕಪ್ ಮಾಸ್ಟರ್  ಟ್ರೆöÊನರ್ ರವರಿಗೆ ನೀಡಲಾಯಿತು, ಸ್ವಚ್ಛವಾಹಿನಿ ಚಾಲಕೀಯರಿಗೆ ವಾಹನ ಚಾಲನಾ ಪರವಾಗಿ  ಪ್ರತಿ ವಿತರಣೆ ಮಾಡಲಾಯಿತು.

ಈ ವೇಳೆ  ಉಪ ಕಾರ್ಯದರ್ಶಿಗಳಾದ ಶ್ರೀ ಲಕ್ಷö್ಮಣ .ಬಿ ಶ್ರೀಂಗೆರಿ, ಶ್ರೀ ಗುರುನಾಥ ಗೌಡಪ್ಪನೋರ್ ಮಾನ್ಯ ಮುಖ್ಯ ಯೋಜನಾಧಿಕಾರಿಗಳು, ಲೀಡ ಬ್ಯಾಂಕ ವ್ಯವಸ್ಥಾಕರು, ವ್ಯವಸ್ಥಾಪಕರು, (ಕೆನರಾ, ಪಿಕೆಜಿಬಿ), ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು, ಋತು ಚಕ್ರ ನಿರ್ವಹಣೆಯ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯವರಾದ ಶ್ರೀಮತಿ ಮೀನಾಕ್ಷಿ ಭಾರತಿ , ರೂಪಲ್ ರಾಲ್ಫಿ ಯವರು ಉಪಸ್ಥಿತರಿದ್ದರು. ಜಿ.ಪಂ ಅಧಿಕಾರಿಗಳು,ವ್ಯವಸ್ಥಾಕರು,  SBM, NRLM, SAAHAS ಸಂಸ್ಥೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಶಿಬಿರಾರ್ಥಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts