ಸ್ಥಳೀಯ

ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಗೆ ಕೊನೆ ಯಾವಾಗ?-ಪ್ರದೀಪ್‌ ಅಣಬಿ

WhatsApp Group Join Now
Telegram Group Join Now

ಶಹಾಪುರ: ಯಾದಗಿರಿ ಜಿಲ್ಲಾದ್ಯಂತ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರದ ನಿಯಮ ಮತ್ತು ಆದೇಶಗಳನ್ನು ಅನಿಯಂತ್ರಿತವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ದೂರು ಸಲ್ಲಿಸಿದ ಘಟನೆ ಶಹಾಪೂರಿನಲ್ಲಿ ನಡೆದಿದೆ. 1 ರಿಂದ 10ನೇ ತರಗತಿಗೆ ಶಾಲಾ ನೇಮಕಾತಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಮಾಯಕ ಮತ್ತು ಬಡ ಪಾಲಕರಿಂದ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದು ಇದು ಹಗಲು ದರೋಡೆಯಾಗಿದೆ ಎಂದು ಪ್ರದೀಪ್ ಅಣಬಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅದ್ಯಕ್ಷರು ಈ ಕುರಿತು ಆರೋಪ ಮಾಡಿದ್ದಾರೆ.

ಶಹಾಪೂರಿನ ತಹಶೀಲ ಕಚೇರಿಯಲ್ಲಿ ಸಂಘಟನೆಯ ಸಹಚರರೊಂದಿಗೆ ತಹಶೀಲದಾರರ ಮೂಲಕ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡುವ ಮೂಲಕ ಜನ ಆಕ್ರೋಶಕ್ಕೆ ಹೇಳಿಕೆ ನೀಡಲಾಗಿದೆ.

2024-25ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರವೇಶಗಳು ಆರಂಭವಾಗಿದ್ದು ಈ ಅವಕಾಶವನ್ನು ಬಳಸಿಕೊಂಡು ಖಾಸಗಿ ಶಾಲೆಗಳ ಮಾಲೀಕರು ಮನಸೋ ಇಚ್ಛೆ ಪೋಷಕರಿಂದ ಹಣ ಸುಲಿಯುತ್ತಿದ್ದು ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೂ ಸೇರಿದಂತೆ ಸಂಬಂಧಪಟ್ಟ ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ಸಂಘಟನೆಯ ಮೂಲಕ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಪ್ರದೀಪ್ ಅಣಬಿ ಪತ್ರಿಕೆ ಹೇಳಿಕೆ ನೀಡಿದ್ದಾರೆ. ಅನಕ್ಷರಸ್ಥ ಪಾಲಕರಿಗೆ ಏಮಾರಿಸುವ ಅಥವಾ ವಂಚಿಸುವ ಪ್ರಯತ್ನವಾಗಿ ದುಬಾರಿ ಡೊನೆಷನ್ ಬೇಡಿಕೆ ಇಡಲಾಗುತ್ತದೆ. ಅವರಿಗೆ ಸರ್ಕಾರದ ನೀತಿ ನಿಯಮಗಳು ತಿಳಿಯದಿರುವ ಕಾರಣ ಶಿಕ್ಷಣ ಸಂಸ್ಥೆಯ ಮಾಲೀಕರು ಹೇರುವ ಡೊನೆಷನ್ನ್ನು ಮಕ್ಕಳ ಭವಿಷ್ಯದ ಕಾರಣಕ್ಕೆ ತೆರುತ್ತಿದ್ದಾರೆ. ಈ ವಿಷಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಮೌನ ಮತ್ತು ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾ ಜಿಲ್ಲೆಯಲ್ಲಿ ತಲೆ ಎತ್ತಿ ಶಿಕ್ಷಣ ಇಲಾಖೆಯನ್ನು ನಿಯಂತ್ರಿಸುತ್ತಿದೆಯಾ ಎನ್ನುವ ಸಂದೇಹ ಮೂಡಿದೆ ಎಂದು ಈ ಸಂದರ್ಭದಲ್ಲಿ ಪ್ರದೀಪ್ ಅಣಬಿಯವರು ಹೇಳಿದ್ದಾರೆ.

ಕೂಡಲೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಗೆ ಕಡಿವಾಣ ಹಾಕಬೇಕು. ಕಾನೂನು ಮತ್ತು ನಿಯಮಬಾಹಿರವಾಗಿ ಡೊನೆಷನ್ ಸ್ವೀಕರಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಬರೆದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನವಿ ಪತ್ರವನ್ನು ತಹಶೀಲದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಗಮೇಶ ಬೇವಿನಹಳ್ಳಿ, ದೇವರಾಜ, ಸಿದ್ದಪ್ಪ, ಭೋಜಪ್ಪ, ಆಂಜನೇಯ ಇಮ್ಲಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts