ತಂತ್ರಜ್ಞಾನ

ಮುಂಬರುವ ಲೋಕಸಭಾ ಚುನಾವಣೆ-2024 ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ” -ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ

WhatsApp Group Join Now
Telegram Group Join Now

ಯಾದಗಿರಿ : ಫೆಬ್ರವರಿ 25,  : ಮುಂಬರುವ ಲೋಕಸಭಾ ಚುನಾವಣೆ-2024 ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ನಿಗಾವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ 2024ರ-ಚುನಾವಣೆ ಸಂಬಂಧ ಎಮ್‌ಸಿಸಿ ಹಾಗೂ ವೆಚ್ಚಗಳ ಕುರಿತು ವಿವಿಧ ತಂಡಗಳಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು 2024ರ ಫೆಬ್ರವರಿ 25ರ ಭಾನುವಾರ ರಂದು ಏರ್ಪಡಿಸಲಾಗಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಚುನಾವಣೆಗೆ ನೇಮಿಸಲಾಗುವ ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ ಕುರಿತು ತರಬೇತಿ ನೀಡಲಾಗಿದೆ. ಅದರ ಮುಂದುವರಿದ ಭಾಗವಾಗಿ ಇಂದು ಎಮ್‌ಸಿಸಿ ಮತ್ತು ಚುನಾವಣೆ ವೆಚ್ಚಗಳ ಬಗ್ಗೆ ನುರಿತ ತರಬೇತಿದಾರರಿಂದ ತರಬೇತಿ ನೀಡಲಾಗಿದ್ದು, ಅಧಿಕಾರಿಗಳು ಮುಂಬರುವ ಚುನಾವಣೆಯಲ್ಲಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುವಂತೆ ಸಲಹೆ ನೀಡಿದರು.

ನುರಿತ ಮಾಸ್ಟರ್ ಟ್ರೇನರ್‌ರಾದ ಡಾ.ಶಶೀಧರ ರೆಡ್ಡಿ ಅವರು ಮಾದರಿ ನೀತಿ ಸಂಹಿತೆ ಹಾಗೂ ಖರ್ಚುವೆಚ್ಚಗಳ ಕುರಿತು ದಾಖಲಾತಿ ಬಗ್ಗೆ ಸಮಗ್ರ ಮಾಹಿತಿ ನೀಡಿ ಚುನಾವಣೆಗೆ ನೇಮಿಸಲಾಗುವು ಅಧಿಕಾರಿಗಳು ಮುಕ್ತ, ನ್ಯಾಯಸಮ್ಮತ, ಹಾಗೂ ಪಾರದರ್ಶಕ ಚುನಾವಣೆಗೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ದೂರು ಬರದ ರೀತಿಯಲ್ಲಿ ಜವಾಬ್ದಾರಿಯಿಂದ ನಿಭಾಯಿಸಬೇಕು. ಚುನಾವಣೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದ ಅವರು ವಿವಿಧ ಚುನಾವಣೆ ತಂಡಗಳ ಮತ್ತು ಅಧಿಕಾರಿಗಳ ಮಧ್ಯ ಸಮನ್ವಯತೆ ಹಾಗೂ ಸಹಕಾರ ಇರಬೇಕು. ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕುರಿತು ಸಮಗ್ರ ಅರಿವು ಹೊಂದಬೇಕು ಎಂದು ತಿಳಿಸಿದರು ಹಾಗೂ ಚುನಾವಣೆ ಖರ್ಚುವೆಚ್ಚಗಳ ವಿಕ್ಷಕರು, ಸಹಾಯಕ ಚುನಾವಣೆ ವೆಚ್ಚ ವೀಕ್ಷಕರು, ಎಸ್‌ಎಸ್‌ಟಿ, ವಿವಿಟಿ, ಅಕೌಂಟಿಂಗ್ ಟೀಮ್, ಅಬಕಾರಿ ತಂಡ, ಆದಾಯ ತೆರಿಗೆ ತಂಡ, ಎಮ್‌ಸಿಸಿ ತಂಡ, ಎಮ್‌ಸಿಎಮ್‌ಸಿ ತಂಡಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳ ಜವಾಬ್ದಾರಿ ಕುರಿತು ತರಬೇತಿ ನೀಡಿದರು. ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್, ವಿವಿಧ ತಂಡಗಳ ನೋಡಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts