ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ ವಾಗಿದೆ – ಮೊಹಮ್ಮದ್ ಅಲಿ ಸಂಕನೂರ್
ಕೊಪ್ಪಳ : ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ ವಾಗಿದೆ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನ ಅತಿಥಿ ಉಪನ್ಯಾಸಕ ಮೊಹಮ್ಮದ್ ಅಲಿ ಸಂಕನೂರ್ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಗರದಲ್ಲಿ ಭಾರತದ 78 ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದ ಮಹಮ್ಮದ್ ಅಲಿ ಸಂಕನೂರ್ ಮುಂದುವರೆದು ಮಾತನಾಡಿ ಫಾತಿಮಾ ಬಿಬಿ ಮುಸುಕನ್ನು ಧರಿಸಿ ಬ್ರಿಟಿಷರ ಗೌಪ್ಯ ವಿಚಾರಗಳನ್ನು ತಿಳಿಸುತ್ತಿದ್ದರು. ಜಾತಿ ಮತ ಇಲ್ಲದೆ ಎಲ್ಲರೂ ದೇಶಕ್ಕಾಗಿ ಹೋರಾಡಿದ್ದಾರೆ. ನಾವು ನಾವೇ ಜಾತಿಯೆಂದು ಬಡೆದಾಡಿದರೆ ಮತ್ತೆ ನಮ್ಮ ದೇಶಕ್ಕೆ ಅಪಾಯ ಬರಬಹುದು ಎಲ್ಲರೂ ಒಂದಾಗಿ ಇರೋಣ ಎಂದು ಹೇಳಿದರು.
ಮಂಗಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಉಪನ್ಯಾಸಕ ಜಾವೀದ್ ಪಾಷಾ ಬಾಶುಸಾಬ್ ಕಲಾಲ್ ಬಂಡಿ ಮಾತನಾಡಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಕನಸು ಅಖಂಡ ಭಾರವಾಗಿತ್ತು.ದೇಶ ವಿಭಜನೆಯಿಂದ ತುಂಬಾ ಮನಸ್ಸಿಗೆ ನೋವು ಉಂಟುಮಾಡಿಕೊಂಡಿದ್ದರು. ಖಾನ್ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಅನುಸರಿಸುತ್ತಿದ್ದರು. ಇವರು ಕೂಡ ಅಹಿಂಸಾ ಚಳುವಳಿಯನ್ನೇ ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ ಖಾನ್ ಅವರು ಸಾವಿರಾರು ಜನರ ಮನಸ್ಸಿನಲ್ಲಿ ಅಹಿಂಸಾ ತತ್ವವನ್ನು ಮೂಡಿಸಿದರು ದೇಶದ ವಿಭಜನೆ ನಂತರ ಅವರಿಗೆ ಬೇರೆ ದೇಶದವರು ಉನ್ನತ ಹುದ್ದೆಯನ್ನು ಕೊಡುತ್ತೇನೆ ಬನ್ನಿ ಎಂದು ಕರೆದಾಗ ಅದನ್ನು ತಿರಸ್ಕರಿಸಿ. ಭಾರತವನ್ನು ಧಿಕ್ಕರಿಸಿ ಬರುವುದಿಲ್ಲ ಎಂದು ತಮ್ಮ ದೇಶ ಪ್ರೇಮವನ್ನು ಸಾರಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಹಿಂದೂ ಮುಸ್ಲಿಮರ ಐಕ್ಯ ಹೋರಾಟಕ್ಕೆ ಸಿಕ್ಕ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಪರಸ್ಪರ ನಂಬಿಕೆ ವಿಶ್ವಾಸ ದಿಂದ ಆಯಾ ಹಬ್ಬಗಳಲ್ಲಿ ಕೊಡಿ
ಆಚರಣೆ ಮಾಡುತ್ತಾ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಸೌಹಾರ್ದತೆಯ ಸಂದೇಶವನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು.ಯಾರದೋ ಹಿತಾಸಕ್ತಿಯ ಮಾತುಗಳಿಗೆ ಹಿಂದೂ ಮುಸ್ಲಿಮರು ಜಗಳವಾಡಿದರೆ ದೇಶದ ಸ್ವಾತಂತ್ರ್ಯಕ್ಕೆ ಮಾರಕ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭ್ರಾತೃತ್ವ ಸಮಿತಿಯ ಜಿಲ್ಲಾ ಮುಖಂಡ ಮಹಮ್ಮದ್
ಫರಿದೂದ್ದೀನ್ ಖಾಝಿ (ರಾಶೀದ) ಮಾತನಾಡಿ 13 ವರ್ಷದ ನಾರಾಯಣ ಮಹಾದೇವ ಧೋನಿ ಚಿಕ್ಕ ಬಾಲಕ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪ್ರಾಣವನ್ನು ಕೊಟ್ಟಿದ್ದು ಚರಿತ್ರೆಯಲ್ಲಿ ಇದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮದೇ ಆದ ಸಂವಿಧಾನ ಇದೆ.ಎಲ್ಲಾ ಜಾತಿ ಮತ ಪಂಥಗಳಿಗೆ ಸರಿಸಮಾನ ಅವಕಾಶಗಳೂ ಇದೆ. ಕುವೆಂಪು ಅವರು ಹೇಳಿದ ಹಾಗೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ದೇಶವಾಗಿದೆ.ನಾವೆಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬಾಳಬೇಕು ಎಂದು ಐಕ್ಯತೆಯ ಸಂದೇಶ ನೀಡಿದರು.
ವೇದಿಕೆ ಮೇಲೆ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಪ್ರಗತಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಆಫ್ರಿನ್ ಬಾನು ಖಾಝಿ. ಕುಮಾರಿ ಮತಿನ್ ಕೌಸರ್ ಖಾಝಿ ಮುಂತಾದವರು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಅನುಷಾ ಸ್ವಾಗತಿಸಿದರು.
ಸೋಫಿಯಾ ಗುಡಿ ಹಿಂದಲ್ ನಿರೂಪಿಸಿದರು.ಸಾಹೇರಾ ವಂದಿಸಿದರು.