ಆರೋಗ್ಯ ಮತ್ತು ಫಿಟ್ನೆಸ್

ಸ್ತನ್ಯಪಾನದಿಂದ ಮಕ್ಕಳ ಆರೋಗ್ಯ ಉತ್ತಮ

WhatsApp Group Join Now
Telegram Group Join Now

ಯಾದಗಿರಿ : ಆಗಸ್ಟ್ 02,  : ತಾಯಿಯ ಸ್ತನ್ಯಪಾನ ಮಕ್ಕಳ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಜಗತ್ತಿನ ಏಕೈಕ ಕಲಬೆರಕೆ ಆಗದ್ದು ಎಂದರೆ ಎದೆಹಾಲು ಎಂದು ಆರ್‌ಸಿಎಚ್‌ಓ ಡಾ.ಮಲ್ಲಪ್ಪ ಹೇಳಿದರು.

ನಗರದ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ತರಬೇತಿ ಸಂಸ್ಥೆಯ ಸಂಭಾಗಣದಲ್ಲಿ ಗುರುವಾರ ನಡೆದ ವಿಶ್ವ ಸ್ತನ್ಯಪಾನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎದೆಹಾಲುಣಿಸಲು ತಾಯಂದಿರ ಎದೆಹಾಲು ಮಗುವಿಗೆ ಸಂಪೂರ್ಣವಾದ ಆಹಾರ, ಮಕ್ಕಳಿಗೆ ಅತ್ಯುತ್ತಮ ಪೋಷಕಾಂಶಗಳ ಒದಗಿಸುತ್ತದೆ. ಇದರಲ್ಲಿ ಶಿಶುಗಳ ಆರೋಗ್ಯಕರವಾದ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್, ಖನಿಜಗಳು, ಪ್ರೋಟಿನ್, ಕೊಬ್ಬಿನಾಂಶಗಳು ಸೇರಿವೆ ಎಂದು ತಿಳಿಸಿದರು.

ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ. ರಿಜ್ವಾನ್ ಆಫ್ರೀನ್ ಮಾತನಾಡಿ, ಎದೆಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮ್ಕಕಳ ಅತಿಸಾರ, ಶೀತ,ಕಫ ಮತ್ತು ಇತರೆ ಬ್ಯಾಕ್ಟಿ ರೀಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡ ರಕ್ಷಣೆ ಸಿಗುತ್ತದೆ. ಮುಂದೆ ಸಕ್ಕರೆ, ಬಿ.ಪಿ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬAದಿದೆ ಎಂದು ತಿಳಿಸಿದರು.

ಮಕ್ಕಳ ತಜ್ಞರಾದ ಡಾ.ಪ್ರಶಾಂತ ಬಾಸೂತ್ಕರ್ ಮಾತನಾಡಿ, ತಾಯಿ ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿರುವುದರಿAದ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಮಾತ್ರವಲ್ಲ, ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ಹಸುವಿನ ಹಾಲಿಗಿಂತ ಬೇಗ ತಾಯಿಯ ಹಾಲು ಜೀರ್ಣ ಆಗುವುದರಿಂದ ಮಗುವಿಗೆ ತಾಯಿಯ ಹಾಲು ಉತ್ತಮ ಎಂದು ತಿಳಿಸಿದರು.

ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ. ಮಗುವಿನ ಚುರುಕುತನ, ಐಕ್ಯು ಹೆಚ್ಚಾಗುವಂತೆ ಮಾಡು ವ ಶಕ್ತಿ ಸ್ತನ್ಯಪಾನಕ್ಕಿದೆ. ತಾಯಿ ಹಾಲು ಮಕ್ಕಳಿಗೆ ತಕ್ಷಣವೇ ಸಿಗುವುದರಿಂದ ತಾಜಾತನದಿಂದ ಕೂಡಿರುತ್ತದೆ ಮತ್ತು ಯಾವುದೇ ರೀತಿಯ ಕಲಬೆರಿಕೆ ಸಾಧ್ಯವಿಲ್ಲ. ಹಾಗಾಗಿಯೇ ಎದೆಹಾಲು ಸುರಕ್ಷಿತವೂ ಹೌದು.ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಸುಭಾಷ್ ಕರಣಿ, ಡಾ.ರಾಘವೇಂದ್ರ ರೆಡ್ಡಿ, ಡಾ.ಪ್ರವೀಣ ಇನಾಮದಾರ್, ಡಾ.ಶ್ವೇತಾ ಪಾಟೀಲ್, ಡಾ.ಮನಾಸಾ, ಡಾ.ರಾಮಲಿಂಗರೆಡ್ಡಿ, ಡಾ.ಕಪೀಲದೇವ ದೋಡ್ಮನಿ, ಡಾ.ಸಚೀನ್, ಡಾ.ಸನೀಲ್,ಡಾ.ಅಲ್ತಫ್, ಡಾ.ಶಾಕೀರ್ ಸೇರಿದಂತೆ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಆರೋಗ್ಯ ತುಂಬಾ ಮುಖ್ಯವಾದದ್ದು, ಅದನ್ನು ನೈಸರ್ಗಿಕ ಪದ್ಧತಿಗಳಿಂದ ಕಾಪಾಡಿಕೊಳ್ಳಬೇಕು. ಈ ಭ್ರಷ್ಟ ಸರ್ಕಾರಗಳು ಹೇರುವ ಚಟಗಳಿಗೆ ನಾವು ಬಲಿಯಾಗಬಾರದು-ಜನ ಆಕ್ರೋಶ”

WhatsApp Group Join Now
Telegram Group Join Now

Related Posts