ಆರೋಗ್ಯ ಮತ್ತು ಫಿಟ್ನೆಸ್

ಸಕ್ಕರೆ ಕಾಯಿಲೆಯ ಒಳ ಮರ್ಮಗಳು-1

WhatsApp Group Join Now
Telegram Group Join Now

ಈಗ ನಾನು ಬರೆಯುತ್ತಿರುವ ಲೇಖನವು ಇದುವರೆಗೂ ನಾನು ಬರೆದಿರುವ ಎಲ್ಲಾ ಲೇಖನಗಳಿಗಿಂತ ಅತ್ಯಂತ ಹೆಚ್ಚು ತೂಕವಾದದ್ದು. ಈ ಬಗ್ಗೆ ಮುಖ್ಯವಾಹಿನಿಯ ಯಾವ ಜ್ಞಾನದೂತರೂ ಮಾತನಾಡುವುದಿಲ್ಲ. ಮಾರುಕಟ್ಟೆ ನಾಶದ ಭಯವೇ ಇದಕ್ಕೆ ಕಾರಣ.

ಏನು ವಿಷಯ?

ನೀವು ನಿಮ್ಮ ಸ್ನಾಯುಗಳ ಬಿಗಿತದ ಪ್ರಮಾಣ (muscle tone) ಎಷ್ಟಿದೆ ಎಂದು ಗಮನಿಸಿದ್ದೀರಾ?

ನೀವು ನಿಮ್ಮ ಸ್ನಾಯುಗಳ ಬಿಗಿತವನ್ನು ಗುರುತಿಸಲು ಸಾಧ್ಯವೇ ಇಲ್ಲ.

ಏಕೆ?

ಈ ಕಥೆ ಓದಿ:

ಮೀನು ಮಾರುವವಳು ಒಮ್ಮೆ ಮಲ್ಲಿಗೆ ಹೂವು ಮಾರುವವಳ ಮನೆಯಲ್ಲಿ ಒಂದು ರಾತ್ರಿ ಅವಳ ಬುಟ್ಟಿಯೊಡನೆ ತಂಗಬೇಕಾಗಿ ಬರುತ್ತದೆ.

ಹೂವಿನವಳು ಸಂತೋಷದಿಂದಲೇ ಸತ್ಕರಿಸಿ ರಾತ್ರಿ ಮಲಗುವ ವ್ಯವಸ್ಥೆಯನ್ನೂ ಮಾಡಿ, ಮಲ್ಲಿಗೆ ಹೂವಿನ ರಾಶಿ ಹರಡಿರುವ ವರಾಂಡದಲ್ಲಿ ಚಾಪೆಯನ್ನು ಕೊಟ್ಟಳು.

ಮೀನಿನವಳು ಈ ಹಾರ್ದಿಕ ಸತ್ಕಾರದಿಂದ ಸಂಪ್ರೀತಳಾಗಿ ಖುಷಿಯಾಗಿ ಮ ಲಗಿದಳು.

ಕಣ್ಣು ಮುಚ್ಚಿ ಮಲಗಿ ನಿದ್ದೆಗೆ ಜಾರಿದಳು.

ಇನ್ನೇನು ಗಾಢ ನಿದ್ದೆಗೆ ಜಾರಬೇಕು… ಅಷ್ಟರಲ್ಲಿ ಯಾರೋ ಬಲವಾಗಿ ಹೊಡೆದು ಎಬ್ಬಿಸಿದಂತೆ ತಟಕ್ಕನೆ ಅವಳಿಗೆ ಎಚ್ಚರವಾಗಿ ಬಿಟ್ಟಿತು.

ಮನೆಯಲ್ಲಿ ಏನೋ ಸರಿಯಿಲ್ಲ.

ದೀರ್ಘವಾಗಿ ಉಸಿರನ್ನು ಒಳಗೆಳೆದು ಕೊಂಡಳು….ಏನೋ ದುರ್ವಾಸನೆ. ತಡೆಯಲಾರದ ಅಸಹ್ಯಕರ ದುರ್ವಾಸನೆ!

ಮೀನು ಮಾರುವವಳಿಗೆ ಆ ದುರ್ವಾಸನೆ ಏನೆಂದು ಮತ್ತು ಎಲ್ಲಿಂದ ಬರುತ್ತಿದೆ ಎಂದು ತುಂಬಾ ಹೊತ್ತಿನವರೆಗೆ ಗೊತ್ತಾಗಲಿಲ್ಲ. ಆ ಬದಿಯಿಂದ ಈ ಬದಿಗೆ, ಈ ಬದಿಯಿಂದ ಆ ಬದಿಗೆ ಮಗ್ಗುಲು ಬದಲಾಯಿಸುತ್ತಾ, ಚಡಪಡಿಕೆಯಲ್ಲಿ ಕಳೆದಳು.

ಏನಾದರೂ ಮಾಡಿ ಆ ದುರ್ವಾಸನೆಯನ್ನು ನಿವಾರಿಸಿ ಕೊಳ್ಳದಿದ್ದರೆ ಆ ರಾತ್ರಿ ನಿದ್ದೆ ಮಾಡುವುದು ಸಾಧ್ಯವೇ ಇಲ್ಲವೆಂದು ಅವಳಿಗೆ ಅನಿಸಿತು.

(ಮುಂದುವರೆಯುತ್ತದೆ)

ಡಿ.ಎಲ್.ವೆಂಕಟೇಶ್ ಪಾಂಡವಪುರ

WhatsApp Group Join Now
Telegram Group Join Now

Related Posts