ಸುರಪುರ: ತಾಲ್ಲೂಕಿನ ಕೆಂಬಾವಿ ಪೋಲಿಸ್ ಠಾಣಾ ವ್ಯಾಪ್ತಿಯ ಮಲ್ಲಾ ಬಿ ಗ್ರಾಮದಲ್ಲಿ ಮಹಾಪುರುಷರ ಭಾವಚಿತ್ರಗಳಿಗೆ ಅವಮಾನ ಮಾಡಿದ ದುಷ್ಕರ್ಮಿಯ ಬಂಧನಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಿಂದಗಿ ಶಹಾಪುರ ರಾಜ್ಯ ಹೆದ್ದಾರಿಯನ್ನು ನಿರ್ಬಂಧಿಸುವ ಮೂಲಕ ಪ್ರತಿಭಟನಾಕಾರರು ಪ್ರತಿಭಟಿಸಿದರು. ಮಲ್ಲಾ ಬಿ ಗ್ರಾಮದ ಕೆಂಚಮ್ಮ ದೇವಿಯ ಗುಡಿಯ ಮುಂಭಾಗದಲ್ಲಿರುವ ಬುದ್ದ, ಬಸವೇಶ್ವರ ಹಾಗೂ ಬಾಬಾ ಸಾಹೇಬ ಅಂಬೇಡ್ಕರ, ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳಿಗೆ ದುಷ್ಕರ್ಮಿಯೊಬ್ಬ ಅವಮಾನ ಪಡಿಸಿದ್ದು ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಕೆಂಬಾವಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ದೂರು ದಾಖಲಿಸಿ ಹತ್ತು ದಿನವಾದರೂ ದುಷ್ಕರ್ಮಿಯನ್ನು ಬಂಧಿಸದ ಪೋಲಿಸ್ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ದಿನಾಂಕ 12-10-2024ರಂದು ಸಾಯಂಕಾಲ ಈ ಘಟನೆ ನಡೆದಿದ್ದು ದಿನಾಂಕ 13-10-2024 ರಂದು ಯುವಕನೊಬ್ಬನ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿತ್ತು. ಆದರೆ ಪ್ರಕರಣ ದಾಖಲಾಗಿ ಹತ್ತು ದಿನಗಳು ಕಳೆದರೂ ಪೋಲಿಸರು ದುಷ್ಕರ್ಮಿಯನ್ನು ಬಂಧಿಸಿರಲಿಲ್ಲ. ಈ ಕುರಿತು ಮರೆಪ್ಪ ತಂದೆ ಶಿವಲಿಂಗಪ್ಪ ಎನ್ನುವವರು ದೂರು ದಾಖಲಿಸಿದ್ದರು. ರಾಷ್ಟ್ರ ನಾಯಕರು ಹಾಗು ಐತಿಹಾಸಿಕ ಪುರುಷರ ಅವಮಾನ ತೀರಾ ಗಂಭೀರವಾಗಿದ್ದು ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಭಾವಿಸಿ ಆರೋಪಿಯನ್ನು ಬಂಧಿಸಬೇಕಿತ್ತು, ಆದರೆ ಇನ್ನೂ ಬಂಧಿಸಿರುವುದಿಲ್ಲ. ಕೂಡಲೆ ಸರ್ಕಾರ ಜಾಗೃತವಾಗಿ ಸೂಕ್ತವಾದ ಕ್ರಮಕ್ಕೆ ಆದೇಶಿಸಬೇಕು ಎಂದು ಪ್ರತಿಭಟನೆಕಾರರು ಈ ಸಂದರ್ಭದಲ್ಲಿ ತಹಸೀಲದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶರಣು ಹೂವಿನಹಳ್ಳಿ, ಬಸವರಾಜ ಚಿಂಚೋಳಿ, ಮಾನಪ್ಪ ಬಡಿಗೇರ, ಮರೆಪ್ಪ ಮಾಳಳ್ಳಿ, ಶಿವಶರಣ ಯಾಳಗಿ, ಶಿವಣ್ಣ ನಾಟೇಕರ್, ಶಿವಣ್ಣ ಬಡಿಗೇರ್, ಶರಣಪ್ಪ ನಗನೂರು, ಲಾಲಪ್ಪ ಹೊಸ್ಮನಿ, ಶಿವಲಿಂಗ ಹಸನಾಪುರ ಮುಂತಾದವರು ಇದ್ದರು.
(ನಕಲಿ ಪತ್ರಕರ್ತರ ಬಗ್ಗೆ ಜಾಗ್ರತೆ ಇರಲಿ, ಇವರು ಪೋಲಿಸ್ ಇಲಾಖೆಯನ್ನೂ ಏಮಾರಿಸುತ್ತಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮ, ಬೆಂಗಳೂರಿನಲ್ಲಿ ಕಾರ್ಯಕ್ರಮ, ಪತ್ರಿಕಾ ದಿನಾಚಾರಣೆ, ದೀಪಾವಳಿ ವಿಶೇಷ ಸಂಚಿಕೆ ಅದು ಇದೂ ಎಂದು ಹೇಳಿ ಹಣ ಪೀಕುತ್ತಾರೆ, ಅಂದರೆ ನಿಮ್ಮನ್ನು ಮರಾ ಮೋಸಗೊಳಿಸುತ್ತಾರೆ. ಇಂತವರನ್ನು ಸಮಾಜದಲ್ಲಿ ಬೆಳೆಸುವುದು ಅಂದರೆ ಸಮಾಜವನ್ನು ಅಧೋಗತಿಗೆ ತರುವುದು ಎಂದರ್ಥ, ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ವೀಕ್ಷಿಸಿ)
https://youtu.be/FzE60K5OGLU?si=YCRZvYI727kvboT-