ದೇವದುರ್ಗ: ತಾಲ್ಲೂಕಿನ ಕರ್ಕಿಹಳ್ಳಿ ಮತ್ತು ಹೇರುಂಡಿ ನದಿ ಪಾತ್ರಗಳ ಮರಳು ಸಂಗ್ರಹಗಾರಗಳಿಗೆ ನೀಡಲಾದ ಪರಿಸರ ನಿರಾಕ್ಷೇಪಣಾ ಪತ್ರ ರದ್ದಾಗಿದೆ ಎಂದು ಶರಣಪ್ಪರೆಡ್ಡಿ ಲಖಣಾಪುರ ತಿಳಿಸಿದರು. ಹಟ್ಟಿ ಗೋಲ್ಡ್ ಮೈನ್ಸ್‌ನಿಂದ ಮರಳು ಗಣಿಗಾರಿಕೆ ನಡೆಸುತ್ತಿದ್ದ ಈ ಎರಡೂ ಗ್ರಾಮಗಳ ಮರಳು ಡಕ್ಕಾಗಳಿಗೆ ನೀಡಲಾದ ಪರಿಸರ ನಿರಾಕ್ಷೇಪಣಾ ಪತ್ರವನ್ನು ರಾಜ್ಯ ಪರಿಸರ ಪ್ರಭಾವ ಅಂದಾಜೀಕರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿನಯ್ ಮೋಹನ್ ರಾಜ್ ವಿ ಇವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರಿಗೆ ಪತ್ರ ಬರೆಯುವ ಮೂಲಕ ಪರಿಸರ ನಿರಾಕ್ಷೇಪಣ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿhttps://youtu.be/zoJxLnQvHwI
ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ಮತ್ತು ಸಕ್ರಮವಾಗಿ ಮರಳು ಗಣಿಗಾರಿಕೆ ನಡೆಸಬೇಕಿರುವ ಹಟ್ಟಿ ಗೋಲ್ಡ್ ಮೈನ್ಸ್ ಇವರು ವಿಧಿಸಲಾಗಿರುವ ಷರತ್ತುಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪೀಠ ಚೆನೈ ಅವರ ಆದೇಶದ ಉಲ್ಲೇಖದ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಸಾಮಾಜಿಕ ಮತ್ತು ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಶರಣಪ್ಪರೆಡ್ಡಿ ಲಖಣಾಪುರ ಅವರು ತೀವ್ರವಾದ ಹೋರಾಟ ನಡೆಸಿದ್ದರು. ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಖದೀಮರು ಪರಿಸರ ಹಾನಿ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಲಖಣಾಪುರ ಅವರು ಸರ್ಕಾರಕ್ಕೂ ಮತ್ತು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದರು. ಶರಣಪ್ಪರೆಡ್ಡಿಯವರ ದೂರು ಅರ್ಜಿಯ ಉಲ್ಲೇಖದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.