ವಿದ್ಯೆ ಧೈರ್ಯ ಛಲ ಆತ್ಮವಿಶ್ವಾಸ ಇದ್ದರೆ ಸಾಕು ನಮ್ಮಂತ ಶ್ರೀಮಂತರು ಬೇರೆ ಯಾರು ಇಲ್ಲ:ದೇವಿಂದ್ರಪಗೌಡ ಗೌಡಗೇರಾ
ಸುರಪುರ ತಾಲೂಕಿನ ಗೌಡಗೇರಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನವಹಿಸಿರುವಂತ ದಾನ ಪರೋಪಕಾರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವಂತ ಒಬ್ಬ ಮಾನವೀಯತೆ ವ್ಯಕ್ತಿತ್ವ ಹೊಂದಿರುವ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಸರುವಾಸಿಯಾಗಿರುವ ಸ್ವಚ್ಛ ಮನಸ್ಸಿನ ಸರದಾರ ಎಂದರೆ ಅದು ದೇವೇಂದ್ರಪ್ಪ ಗೌಡ ಗೌಡಗೇರಾ ಎಂದು ಜನರು ಸಂತೋಷ ವ್ಯಕ್ತಪಡಿ ಪಡಿಸುವುದರಲ್ಲಿ ತಪ್ಪಿಲ್ಲ ಯಾಕೆಂದರೆ ಗೌಡಗೇರಾ ಗ್ರಾಮದ ಪ್ರೌಢಶಾಲೆಯಲ್ಲಿ ಯಾವ ವಿದ್ಯಾರ್ಥಿಯು ಅತಿ ಹೆಚ್ಚು ಅಂಕ ಪಡೆಯುತ್ತಾನೋ ಆ ವಿದ್ಯಾರ್ಥಿಗೆ ಪ್ರತಿ ವರ್ಷ 51,000 ಬಹುಮಾನ ಕೊಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು ಮತ್ತು ಎಷ್ಟೇ ವಿದ್ಯಾರ್ಥಿಗಳು 90% ಅಂಕಗಳ ಮೇಲ್ಪಟ್ಟು ತೆಗೆದುಕೊಂಡರೆ ಅಂತ ವಿದ್ಯಾರ್ಥಿಗಳಿಗೆ ಎರಡು ವರ್ಷ ಕಾಲೇಜಿನ ಪಿಸು ನಾನೇ ಕಟ್ಟುತ್ತೇನೆ ಎಂದು ಹೇಳಿದರು ಮತ್ತು ನೆಮ್ಮದಿಯಿಂದ ಬದುಕಲು ಬೇಕಾಗಿರುವುದು ಜಾತಿ ಧರ್ಮ ಅಂತಸ್ತು ಆಸ್ತಿಗಳಲ್ಲ ವಿದ್ಯೆ ಧೈರ್ಯ ಛಲ ಆತ್ಮವಿಶ್ವಾಸ ಇದ್ದರೆ ಸಾಕು ನಮ್ಮಂತ ಶ್ರೀಮಂತರು ಬೇರೆ ಯಾರು ಇಲ್ಲ ಎಂದು ಮಕ್ಕಳಿಗೆ ಸಹ ಬಾಳ್ವೆಯಿಂದ ಬದುಕುವ ಮಾರ್ಗ ಹೇಳಿಕೊಟ್ಟರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮಕ್ಕಳು ಮತ್ತು ಊರಿನ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಹುಲಗಪ್ಪ ಎಮ್ ಹವಾಲ್ದಾರ
ಸುದ್ದಿ ಮತ್ತು ಜಾಹಿರಾತುಗಳನ್ನು ನೀಡಲು 9845968164/9886535957 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.