ಸ್ಥಳೀಯ

ಇಬ್ರಾಹಿಂಪುರ ಗ್ರಾಮದ ಮತಗಟ್ಟೆ ಆವರಣದಲ್ಲಿ ಸ್ವೀಪ್ ಚಟುವಟಿಕೆ

WhatsApp Group Join Now
Telegram Group Join Now

ಇಬ್ರಾಹಿಂಪುರ ಗ್ರಾಮದ ಮತಗಟ್ಟೆ ಆವರಣದಲ್ಲಿ ಸ್ವೀಪ್ ಚಟುವಟಿಕೆ

ಯಾದಗಿರಿ : ಏಪ್ರಿಲ್ 05, : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ.07ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಹಾಗೂ ತಾಲೂಕ ಸ್ವೀಪ್ ಸಮಿತಿ ಸಹಯೋಗದಲ್ಲಿ ಏ.05 ರಂದು ಇಬ್ರಾಹಿಂಪುರ ಗ್ರಾಮದ ಮತಗಟ್ಟೆ ಆವರಣದಲ್ಲಿ ಸ್ವೀಪ್ ಚಟುವಟಿಕೆ ಹಮ್ಮಿಕೊಳ್ಳಲಾಯಿತು.

ಮತದಾನದ ಕುರಿತು ಜಾಗೃತಿ ಮೂಡಿಸಲು ಗ್ರಾಮದ 138, 139 ಹಾಗೂ 140 ಸಂಖ್ಯೆಯ ಮತದಾನ ಕೇಂದ್ರದ ಆವರಣದಲ್ಲಿ ಹಲವು ಬಣ್ಣಗಳ ಚಿತ್ತಾಕರ್ಷಣಿಯ ಮತದಾನ ಜಾಗೃತಿಯ ರಂಗೋಲಿ ಬಿಡಿಸುವ ಸ್ಪರ್ಧೆ ಏರ್ಪಡಿಸಿತ್ತು.

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ನೀಡಲಾಯಿತು. ಬಳಿಕ, ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ವೇಳೆ ಇಬ್ರಾಹಿಂಪುರ ಗ್ರಾಮ ಪಂಚಾಯತಿ Pಆಔ ಶ್ರೀ ಯಮನೂರಪ್ಪ, ಗ್ರಾಮ ಪಂಚಾಯಿತಿ ಗ್ರಂಥಪಾಲಕ, ಓಖಐಒ ತಾಲೂಕ ಸಂಯೋಜಕರಾದ ಬಸಲಿಂಗ, ದೇವಿಂದ್ರಪ್ಪ, ಒಃಏ, ಕೃಷಿ-ಪಶು ಸಖಿಯರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು. ಶಹಾಪುರ ತಾಪಂ ಐಇಸಿ ಸಂಯೋಜಕ ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts