ಕೋಲಾರ, ೧೩ ಏಪ್ರಿಲ್ : ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರಿಂದ ವಿಧಾನಸೌದದಲ್ಲಿಯೇ ಪಾಕಿಸ್ತಾನಕ್ಕೆ ಜೈಕಾರ ಕೂಗಿದರು. ಇಡೀ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ನಮ್ಮ ಶತೃ ರಾಷ್ಟ್ರ ಪಾಕಿಸ್ತಾನ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿ ನಮ್ಮ ಭಾರತ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎನ್ನುವುದನ್ನು ಊಹಿಸಿ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಮುನ್ನ ಯೋಚಿಸಿ ದೇಶದ ಭದ್ರತೆಗಾಗಿ ಇರುವ ಅಭ್ಯರ್ಥಿಗಳಿಗೆ ಮತ ಹಾಕಬೇಕು, ದೇಶ ವಿರೋಧಿ ಪಕ್ಷ ಕಾಂಗ್ರೆಸ್ನ್ನು ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಕರೆ ಕೊಟ್ಟರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಯಲ್ದೂರು,ಹೋಳೂರು,ದಳಸನೂರು ಮತ್ತು ಸುಗಟೂರು ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಕೋಲಾರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಭದ್ರತೆಗೆ ಮತ್ತು ದೇಶದ ಅಭಿವೃದ್ದಿಗೆ ಮೋದಿಯವರು ತುಂಬಾ ಮುಖ್ಯ, ಕುಕ್ಕರ್ ಬಾಂಬ್ ಇಟ್ಟವರನ್ನು ನನ್ನ ಬ್ರದರ್ಸ್ ಎಂದು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರು ದೇಶವನ್ನು ಯಾವ ರೀತಿ ಕಾಪಾಡಬಲ್ಲೆರು ಎಂಬುದನ್ನು ಜನರ ವಿವೇಚನೆಗೆ ಬಿಡುತ್ತೇವೆ, ಒಬ್ಬ ಶಾಸಕರ ಮನೆ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದವರು ಅಮಾಯಕರು ಅವರನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಗರಹ ಸಚಿವರಿಗೆ ಪತ್ರ ಕೊಡುತ್ತಾರೆ ಎಂದರೆ ಎಂತಹ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬುದನ್ನು ಜನತೆ ಚಿಂತಿಸಬೇಕಿದೆ ಎಂದರು.
ಕಾಂಗ್ರೆಸ್ ನವರು ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲಾಗದೆ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿಯವರ ವಿರುದ್ದ ಅಪಪ್ರಚಾರ ಮಾಡಿಕೊಂಡು ಮತ ಕೇಳುತ್ತಿದ್ದಾರೆ, ದೇಶವನ್ನು ಸುರಕ್ಷಿತವಾಗಿ ಕಾಪಾಡುತ್ತಿರುವುದು , ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ಲಸಿಕೆ ಕೊಟ್ಟಿದ್ದು , ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದು, ವಂದೇ ಮಾತರಂ ರೈಲು ಕೊಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಗಳು ಕೊಟ್ಟಿದ್ದು, ವಿಮಾನ ನಿಲ್ದಾಣಗಳು ಕೊಟ್ಟಿದ್ದು, ನೂರಾರು ವರ್ಷಗಳ ಹಿಂದೂಗಳ ಕನಸು ರಾಮಮಂದಿರ ಕೊಟ್ಟಿದ್ದು ಇವೆಲ್ಲಾ ಸುಳ್ಳೇ ಎಂದು ಪ್ರಶ್ನಿಸಿದರು… ಬಿಜೆಪಿಯವರು ಹತ್ತು ವರ್ಷಗಳ ಆಡಳಿತದ ಅಭಿವೃದ್ದಿ ಕೆಲಸಗಳು, ಭ್ರಷ್ಟಾಚಾರ ರಹಿತ ಆಡಳಿತದ ವಿಷಯಗಳ ಆಧಾರದ ಮೇಲೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕೆಂದು ಮತಯಾಚನೆ ಮಾಡುತ್ತಿದ್ದೇವೆ ಆದರೆ ಕಾಂಗ್ರೆಸ್ ನವರು ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ಜನರ ಮುಂದಿಟ್ಟು ಮತ ಕೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಿ ಮತ ಕೇಳುತ್ತಿಲ್ಲ ಕೇವಲ ಜಾತಿ, ಧರ್ಮಗಳ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು..
ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆ ಎದುರಿಸಲಾಗುತ್ತಿದೆ, ನರೇಂದ್ರ ಮೋದಿಯವರು ಕುಮಾರಸ್ವಾಮಿಯವರ ಮೇಲೆ ನಂಬಿಕೆಯಿಟ್ಟು ರಾಜ್ಯದಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ, ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿಯವರು ಜೆಡಿಎಸ್ ನವರು ಒಗ್ಗಟ್ಟಾಗಿ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು, ದೇವೇಗೌಡರ ಮತ್ತು ಪ್ರಧಾನಿ ಮಂತ್ರಿಯವರ ನಡುವೆ ಉತ್ತಮ ಬಾಂಧವ್ಯವಿದೆ ನರೇಂದ್ರ ಮೋದಿಯವರ ಉತ್ತಮ ಆಡಳಿತಕ್ಕೆ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿ ದೇಶಕ್ಕೆ ನರೇಂದ್ರ ಮೋದಿಯವರಂತಹ ಉತ್ತಮ ನಾಯಕರ ಅವಶ್ಯಕತೆಯಿದೆ ಅದಕ್ಕಾಗಿ ಮೂರನೇ ಭಾರಿಯೂ ದೇಶಕ್ಕೆ ಮೋದಿಯವರು ಪ್ರಧಾನಮಂತ್ರಿಯಾಗಲಿ ಎಂದು ದೇವೇಗೌಡರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ… ನರೇಂದ್ರ ಮೋದಿಯವರ ಮತ್ತು ದೇವೇಗೌಡರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲಿಯೂ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಬಾಂಧವ್ಯದಿ0ದ ಕೆಲಸ ಮಾಡಿ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿದೆ ಸಾಕ್ಷಿಯಾಗಬೇಕಿದೆ ಎಂದರು.
ಕೋಲಾರ ಲೋಕಸಬಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ರವರ ಕುಟುಂಬದಲ್ಲಿ ಅವರ ತಂದೆ ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಸೇವೆ ಮಾಡಿದ್ದರೆ ಅವರ ತಾಯಿ ಕೂಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ ಇದೀಗ ಅವರ ಮಗ ಮಲ್ಲೇಶ್ ಬಾಬು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಇವರೂ ಕೋಲಾರ ಜಿಲ್ಲೆಯ ಜನರ ಸೇವೆಗೆ ಕಾಳಜಿ ವಹಿಸಿದ್ದಾರೆ ಅದಕ್ಕಾಗಿ ಲೋಕಸಭಾ ಕ್ಷೇತ್ರದ ಜನ ಮಲ್ಲೇಶ್ ಬಾಬುರವರಿಗೂ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿದೆ… ಕೋಲಾರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ಗೆಲ್ಲಿಸಿಕೊಡುವ ಮೂಲಕ ರಾಜ್ಯದಲ್ಲಿನ ಬಿಜೆಪಿ ಜೆಡಿಎಸ್ ಮೈತ್ರಿಗೆ ಇನ್ನಷ್ಟು ಬಲ ತುಂಬುವAತಾಗಲಿ ಎಂದು ಮನವಿ ಮಾಡಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ ಕಾಂಗ್ರೆಸ್ ನವರು ಹೇಳೋದೊಂದು ಮಾಡೋದೊಂದು ಪ್ರತಿನಿತ್ಯ ನಾವು ಜಾತ್ಯಾತೀತವಾದಿಗಳು ಎಂದು ಭಾಷಣ ಮಾಡುತ್ತಾರೆ ಆದರೆ ಪ್ರತಿ ನಿತ್ಯ ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟುತ್ತಾರೆ, ಕಾಂಗ್ರೆಸ್ ನವರು ನಿಜವಾದ ಜಾತ್ಯಾತೀತವಾದಿಗಳಾದರೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಟಿ ಎಂದು ಹೇಳುವ ಬದಲು ಕೆಲವು ಕಾಂಗ್ರೆಸ್ ನವರು ಬಲಗೈ ಸಮುದಾಯಕ್ಕೆ ಟಿಕೆಟ್ ಕೊಟಿ ಎನ್ನುತ್ತಾರೆ ಇನ್ನು ಕೆಲವು ಕಾಂಗ್ರೆಸ್ ನವರು ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಿ ಎನ್ನುತ್ತಾರೆ ಒಗ್ಗಟ್ಟಾಗಿದ್ದ ಎಡಗೈ ಮತ್ತು ಬಲಗೈ ಜನಾಂಗಗಳ ನಡುವೆ ಎತ್ತಿಕೊಟ್ಟುವ ಕೆಲಸ ಕಾಂಗ್ರೆಸ್ ನವರು ಮಾಡಿದರು ಇಂತಹ ಜಾತಿ ಜಾತಿಗಳ ಮಧ್ಯೆ ವಿಷ ಬಿಜ ಬಿತ್ತುವ ಕಾಂಗ್ರೆಸ್ ನವರನ್ನು ಜನತೆ ದೂರ ಇಡಬೇಕಿದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನವರು ಜಾತಿಗಳ ಮಧ್ಯೆ ಎತ್ತಿಕಟ್ಟಲು ಭಯ ಪಡಬೇಕು ಆ ರೀತಿ ಜನ ಈ ಚುನಾವಣೆಯಲ್ಲಿ ಉತ್ತರ ಕೊಡಬೇಕು ಎಂದರು.
ಕೋಲಾರ ಲೋಕಸಭಾ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ ನಮ್ಮ ತಂದೆ ಮುನಿಸ್ವಾಮಿಯವರು ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಉತ್ತಮ ಸೇವೆ ಮಾಡಿದ್ದಾರೆ ಅದೇ ರೀತಿ ನಮ್ಮ ತಾಯಿಯವರೂ ಸಹ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಿಲ್ಲೆಗೆ ಉತ್ತಮ ಸೇವೆ ಮಾಡಿದ್ದಾರೆ ಇದೀಗ ಕುಮಾರಣ್ಣ ಮತ್ತು ದೇವೇಗೌಡರು ಜಿಲ್ಲೆಯಲ್ಲಿ ಸೇವೆ ಮಾಡಲು ನನ್ನನ್ನು ಕಳಿಸಿಕೊಟ್ಟಿದ್ದಾರೆ ಅದಕ್ಕಾಗಿ ಕೋಲಾರ ಲೋಕಸಭಾ ಕ್ಷೇತ್ರದ ಜನತೆ ಆಶೀರ್ವಾದ ಮಾಡಿ ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ, ಗೋವಿಂದರಾಜು, ಜಿ.ಪಂ ಮಾಜಿ ಅದ್ಯಕ್ಷ ತೂಪಲ್ಲಿ ಆರ್ ನಾರಾಯಣಸ್ವಾಮಿ, ಮಾಜಿ ಸದಸ್ಯರಾದ ಎಂ.ಶ್ರೀನಿವಾಸ್, ರಾಜಶೇಖರರೆಡ್ಡಿ, ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ರೊಣೂರು ಚಂದ್ರ ಶೇಖರ್, ಟಿ.ಎ.ಪಿ.ಎಂ.ಸಿ ಅಧ್ಯಕ್ಷ ವಡಗೂರು ರಾಮು, ಮುಖಂಡರಾದ ಲಾಯರ್ ಶಿವಾರೆಡ್ಡಿ, ಗಾಯತ್ರಿ ಮುತ್ತಪ್ಪ, ಎಸ್ ಎಲ್ ಎನ್ ಮಂಜುನಾಥ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.