ಸ್ಥಳೀಯ

ಜೈ ಕರವೇ ಜಿಲ್ಲಾ ಸಮಿತಿ ಸಭೆ: ಪದಾಧಿಕಾರಿಗಳ ನೇಮಕ

WhatsApp Group Join Now
Telegram Group Join Now

ಯಾದಗಿರಿ: ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸಭೆಯ ಜಿಲ್ಲಾಧ್ಯಕ್ಷ ಸಂಗಮೇಶ ಭೀಮನಳ್ಳಿ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು. ಸಭೆಯಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಸಂಗಮೇಶ ಭೀಮನಳ್ಳಿ, ಜಿಲ್ಲೆಯಲ್ಲಿ ವೇದಿಕೆಯನ್ನು ಬಲಪಡಿಸಲು ಪದಾಧಿಕಾರಿಗಳು ಶ್ರಮಿಸಬೇಕು ಅಲ್ಲದೇ ಕನ್ನಡ ನಾಡು ನುಡಿ ನೆಲ ಜಲ ವಿಷಯ ಬಂದಾಗಿ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳಾಗಿ ಸುಭಾಷ ನಾಯಕ ಹೆಡಗಿಮುದ್ರಿ (ಗೌರವಾಧ್ಯಕ್ಷರು), ಮಂಜುನಾಥ ದೊರೆ (ಪ್ರಧಾನ ಕಾರ್ಯದರ್ಶಿ), ಪ್ರವೀಣ ರಾಜ್ ಬುರಾನೊರ್ (ಜಿಲ್ಲಾ ಸಂಚಾಲಕರು), ಕಾಶಿನಾಥ ಕೊಟಿಮನಿ (ಸಂಘಟನಾ ಕಾರ್ಯದರ್ಶಿ), ನಿಂಗರಾಜ ಅಂಬಿಗೇರ (ಜಿಲ್ಲಾ ಕಾರ್ಯದರ್ಶಿ),

ಸಾಬಣ್ಣ ಮುಂಡರಗಿ (ಸಹ ಸಂಘಟನಾ ಕಾರ್ಯದರ್ಶಿ), ದೇವಿಂದ್ರಪ್ಪ ನಾಯಕ ಕಡ್ಡಿ (ವಾಹನ ಚಾಲಕರ ಘಟಕದ ಜಿಲ್ಲಾ ಅಧ್ಯಕ್ಷ), ಶಿವರಾಜ ಹಡಪದ (ಜಿಲ್ಲಾ ಸಹಕಾರ್ಯದರ್ಶಿ), ಸಂದೀಪ ಮಡಿವಾಳ (ಜಿಲ್ಲಾ ವಕ್ತಾರರು), ಅಂಬ್ರೇಷ್ ನಾಯಕ (ಯುವ ಘಟಕದ ಜಿಲ್ಲಾ ಅಧ್ಯಕ್ಷ), ಶರಣಪ್ಪ ನಗಲಾಪುರ (ಖಜಾಂಚಿ), ವೆಂಕಟೇಶ ದೇವರಕೊಂಡ (ಕಾರ್ಮಿಕರ ಘಕದ ಅದ್ಯಕ್ಷ), ರವಿಕುಮಾರ ನಾಯ್ಕೊಡಿ (ಕಾಕಾಸ ಸದಸ್ಯರು)

ದೇವೀಂದ್ರನಾಯಕ ವರ್ಕನಳ್ಳಿ (ಯಾದಗಿರಿ ತಾಲ್ಲೂಕು ಅಧ್ಯಕ್ಷ), ಸಾಗರ ಚಿಂತನಳ್ಳಿ (ಯಾದಗಿರಿ ನಗರ ಘಟಕ ಅಧ್ಯಕ್ಷ), ಇವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಹಿರಿಯ ಮಾರ್ಗದರ್ಶಕರಾದ ನರಸಪ್ಪ ನಾಯಕ ಬುಡಾಯಿನೋರ್ ಸೇರಿದಂತೆ ಇನ್ನಿತರರು ಇದ್ದರು.

WhatsApp Group Join Now
Telegram Group Join Now

Related Posts