ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ 10 ಹಿಂದುಗಳ ಸಾವು: ಕಠಿಣ ಪ್ರತಿಕಾರಕ್ಕೆ ರಾಷ್ಟçಪತಿಗಳಿಗೆ ವಿಎಚ್‌ಪಿ, ಭಜರಂಗದಳ ಒತ್ತಾಯ
ಯಾದಗಿರಿ: ಜಮ್ಮು ಕಾಶ್ಮೀರದ ಕಾಟ್ರಾದಿಂದ ಶಿವಕೋಡಿಗೆ ಸಂಚರಿಸುತ್ತಿದ್ದ ಹಿಂದು ಭಕ್ತರ ಬಸ್ ಮೇಲೆ ಉಗ್ರ ದಾಳಿ ನಡೆಸಿ 10 ಜನರ ಸಾವಿಗೆ ಕಾರಣರಾದ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಮತ್ತು ಭಯೋತ್ಪಾದಕರ ಮೂಲೋತ್ಥಾಟನೆಗೆ ಉಗ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಉಭಯ ಸಂಘಟನೆಗಳ ಕಾರ್ಯಕರ್ತರು ತೀರ್ಥ ಯಾತ್ರಾರ್ಥಿಗಳ ಮೇಲೆ ಜೂ.9 ರಂದು ದಾಳಿ ನಡೆಸಿದ ಪಾಕ್ ಮೂಲದ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ದುಷ್ಕೃತ್ಯದಿಂದಾಗಿ 10 ಜನ ಹಿಂದು ಯಾತ್ರಿಗಳು ಸಾವನ್ನಪ್ಪಿದ್ದು 40 ಜನ ಗಾಯಗೊಂಡಿದ್ದಾರೆ.
ಕೇAದ್ರ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿರುವುದು ಕಾಕತಾಳಿಯವಲ್ಲ, ಇದರಲ್ಲಿ ಭಾರತದಲ್ಲಿರುವ ದೇಶದ್ರೋಹಿಗಳು ಕೈಜೋಡಿಸಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಬೇಕೆಂದು ಭಜರಂಗದಳ ಮುಖಂಡ ಶಿವಕುಮಾರ ಸುಕಲೂರು ಆಗ್ರಹಿಸಿದರು.
ದೇಶದ ಹೊರಗಿನ ಭಯೋತ್ಪಾದಕರಿಗಿಂತಲೂ ದೇಶದೊಳಗಿರುವ ದೇಶದ್ರೋಹಿಗಳು ಹೆಚ್ಚು ಅಪಾಯಕಾರಿಯಾಗಿದ್ದು ಇಂತಹ ವ್ಯಕ್ತಿಗಳ ಬಗ್ಗೆ ಎನ್.ಐ.ಎ. ತನಿಖೆ ನಡೆಸಿ ಇಂತಹ ನೀಚ ದೇಶದ್ರೋಹಿಗಳ ನಿಗ್ರಹವೂ ಭಯೋತ್ಪಾದಕರ ನಿಗ್ರಹದಷ್ಟೇ ಪ್ರಮುಖ ಕಾರ್ಯವಾಗಿದೆ ಎಂದರು.
ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ನಂತರ ಕಾಶ್ಮೀರದಲ್ಲಿನ ನೆಮ್ಮದಿ ಮರಳಿ ಬರುತ್ತಿರುವ ವೇಳೆ ಎಲ್ಲ ದ್ರೋಹಿಗಳು ದುಷ್ಟರು ಸೇರಿ ನೆಮ್ಮದಿ ಹಾಳುಗೆಡುವುವ ನೀಚ ಕೃತ್ಯಕ್ಕೆ ಕೈಹಾಕಿದವರನ್ನು ಕೇಂದ್ರ ಸರ್ಕಾರ ಹೊಸಕಿ ಹಾಕಬೇಕೆಂದು ಒತ್ತಾಯಿಸಿದರು.
ರಾಷ್ಟçಪತಿಗಳಿಗೆ ಬರೆದ ಮನವಿಯನ್ನು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿರೇಶ ನೆಲ್ಲೋಗಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜೇಂದ್ರ ಬೆಳಗೇರಾ, ನರಸಿಂಹ ಮಂಥನಗುಡ ಸೇರಿದಂತೆ ಹಲವಾರು ಹಿಂದುಪರ ಕಾರ್ಯಕರ್ತರು ಉಪಸ್ಥಿತರಿದ್ದರು.