ಯಾದಗಿರಿ : ಜುಲೈ 15, : 2024ರ ಜುಲೈ 13 ರಂದು ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣದ ಪರಿಶೀಲಿಸಲಾಯಿತು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಭುಲಿಂಗ ಮಾನಕರ್ ಅವರು ತಿಳಿಸಿದ್ದಾರೆ.
ಕಾಕಲವಾರ ಗ್ರಾಮದಲ್ಲಿ ಸುಮಾರ 12 ವಾಂತಿ ಬೇಧಿ ಪ್ರಕರಣಗಳು ಕಂಡುಬAದಿದ್ದು, 2 (ಇಬ್ಬರು) ಜನ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂಳಿದ 10 ಜನ ಸ್ವಇಚ್ಛೆಯಿಂದ ಖಾಸಗಿ ಆಸ್ಪತ್ರೆ (ರಕ್ಷಾ ಆಸ್ಪತ್ರೆ) ಗುರುಮಠಕಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ಸುದ್ದಿ ತಿಳಿದ ತಕ್ಷಣ ತಾಲೂಕು ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿಯವರ ತಂಡದೊAದಿಗೆ ಕಾಕಲವಾರ ಗ್ರಾಮಕ್ಕೆ ಭೇಟಿ ನೀಡಿ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಂಡು ವೈದ್ಯಕೀಯ ತಂಡದ ಶಿಬಿರವನ್ನು ನಿಯೋಜಿಸಿದ್ದು, ಕಾರ್ಯಾರಂಭ ಮಾಡಿರುತ್ತದೆ. ಈ ಭೇಟಿಯಂದು ತಾಲೂಕು ಆರೋಗ್ಯ ಅಧಿಕಾರಿಗಳು ಕುಲಂಕುಷವಾಗಿ ಪರಿಶೀಲನೆ ಮಾಡಿ ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿಲ್ಲವೆಂದು ಖಚಿತಪಡಿಸಿಕೊಂಡು ಗ್ರಾಮ ಪಂಚಾಯತಿಗೆ ಈ ವರದಿಯನ್ನು ಒಪ್ಪಿಸಿರುತ್ತಾರೆ.
ಮಾನ್ಯ ಜಿಲ್ಲಾಧಿಕಾರಿಗಳು 2024ರ ಜುಲೈ 13 ರಂದು ಸುದ್ದಿ ತಿಳಿದ ತಕ್ಷಣ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ ಮತ್ತು ಖಾಸಗಿ ಆಸ್ಪತ್ರೆ (ರಕ್ಷಾ ಆಸ್ಪತ್ರೆ) ಗುರುಮಠಕಲ್ನಲ್ಲಿ ವಾಂತಿ ಬೇಧಿಯಿಂದ ದಾಖಲಾಗಿರಿವ ರೋಗಿಗಳ ಯೋಗಕ್ಷೇಮ ವಿಚಾರಿಸಿ ಅಲ್ಲಿರುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಸೂಕ್ತ ಚಿಕಿತ್ಸೆ ಮತ್ತು ಮುಂಜಾಗ್ರತಾ ಕೈಗೊಳ್ಳಲು ಸೂಚಿಸಿರುತ್ತಾರೆ.
2024ರ ಜುಲೈ 14 ರಂದು ಬೆಳಿಗ್ಗೆ 8 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ ಮತ್ತು ಖಾಸಗಿ ಆಸ್ಪತ್ರೆ (ರಕ್ಷಾ ಆಸ್ಪತ್ರೆ) ಗುರುಮಠಕಲ್ಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಲಾಯಿತು. ನಂತರ ಕಾಕಲವಾರ ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣಗಳ ಕಾರಣ ಕಂಡು ಹಿಡಿಯಲು ಊರಿನಲ್ಲಿನ ವಾಟರ್ ಪೈಪ್ಲೈಲ್, ಟ್ಯಾಂಕಿನ ನ್ಯೂನ್ಯೆತೆಗಳನ್ನು ಪರಿಶೀಲಿಸಿ ಅಲ್ಲಿದ್ದ ಅಧಿಕಾರಿಗಳಾದ ತಾಲೂಕು ಪಂಚಾಯತ್ ಇಓ, ಪಿಡಿಓ, ಆರ್ಡಬ್ಲೂö್ಯಎಸ್ ಜೆಇ ಇವರಿಗೆ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಲು ಆದೇಶಿಸಿರುತ್ತಾರೆ.
ವಾಟರ್ ಟ್ಯಾಂಕ್ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲು ಮತ್ತು ಪೈಪ್ಲೈನ್ ಲೀಕೇಜ್ ಸರಿಪಡಿಸಲು ಸೂಚಿಸಿರುತ್ತಾರೆ. ಈ ನೀರಿನ ಮಾದರಿ ಕುಡಿಯಲು ಯೋಗ್ಯವಾಗುವವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಂಬAಧಪಟ್ಟವರಿಗೆ ಸೂಚಿಸಿದರು.
ಅದಾದ ನಂತರ ವಾಂತಿ ಬೇಧಿ ಪ್ರಕರಣಗಳು ಕಂಡು ಬಂದ ಮನೆ ಮನೆಯ ಕುಟುಂಬದವರಿಗೆ ಭೇಟಿ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಲು ಮತ್ತು ಕಾಯಿಸಿ ಆರಿಸಿದ ನೀರನ್ನು ಕುಡಿಯಲು ತಿಳಿಸಲಾಯಿತು.
ಹಾಗೂ ಆರೋಗ್ಯ ಸಿಬ್ಬಂದಿಯವರಿಗೆ ಹಲೋಜಿನ್ ಮಾತ್ರೆಗಳನ್ನು ಮನೆ ಮನೆಗೆ ವಿತರಿಸಲು ಸೂಚಿಸಿದರು.
ಈ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಕಲವಾರ ಗ್ರಾಮದ ನಿವಾಸಿಗಳು ಯಾವುದೇ ರೀತಿಯಿಂದ ಆತಂಕಪಡುವ ಅವಶ್ಯಕತೆ ಇರುವುದಿಲ್ಲವೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.