ಕೊಪ್ಪಳ: ಸಂವಿಧಾನಾತ್ಮಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುವಂತಹದ್ದು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಹೇಳಿದರು.
ಕೊಪ್ಪಳ ತಾಲ್ಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಪ್ರಕ್ರಿಯೆ ಸಂಸ್ಥೆ ಹಾಗೂ ದರ್ಪಣ ಇವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಸಂವಿಧಾನ ಅರಿವು ಅಭಿಯಾನದಡಿ ಶಾಲಾ ಮಕ್ಕಳಿಗೆ ಸಂವಿಧಾನ ಅರಿವು ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮುಂದುವರೆದು ಮಾತನಾಡಿ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳನ್ನು ಗುರುತೈಸುವ ಬಗ್ಗೆ ಆ ವ್ಯಕ್ತಿಗಳ ಮೌಲ್ಯಗಳನ್ನು ವಿದ್ಯಾರ್ಥಿಗಳು ಯಾವ ರೀತಿ ಅಳವಡಿಸಿಕೊಳ್ಳುವುದು ಎನ್ನುವುದರ ಬಗ್ಗೆ ವಿಶ್ಲೇಷಿಸಿದರು,
ಮುಖ್ಯ ಅತಿಥಿಗಳಾಗಿದ್ದ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಸಂವಿಧಾನದಡಿ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆದು ಅಭ್ಯಾಸ ಮಾಡಿ ಉತ್ತೀರ್ಣರಾಗುವುದು, ಕಾಲೇಜುಗಳಿಗೆ ಸೇರುವಾಗ ಆಯಾ ವಿಷಯಗಳು ಆಯ್ಕೆ ಮಾಡಿಕೊಂಡು ಓದುವಂತಹ ಹಕ್ಕನ್ನು ಸಂವಿಧಾನ ಕಲ್ಪಿಸಿದೆ, ವಿದ್ಯಾರ್ಥಿಗಳು ಸಂವಿಧಾನವನ್ನು ಸರಿಯಾಗಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ನೌಕರಸ್ಥರು,ವ್ಯಾಪಾರಸ್ಥರು, ಉದ್ಯೋಗಸ್ಥರು,ನಾಗರಿಕರಾಗಬಹುದು, ಜಿಲ್ಲೆಯಲ್ಲಿ ಕನ್ನಡ ಶಾಲೆಗಳಲ್ಲಿ 10ನೇ ತರಗತಿ ಓದುತ್ತಿರುವ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡ ಬರೆಯಲು ಬರುವುದಿಲ್ಲ, ವಿಜ್ಞಾನ,ಗಣಿತ ಕನಿಷ್ಠ ಕಲಿತಿಲ್ಲ ಎಂಬ ಸುದ್ದಿ ಬಂದಿರುವುದು ವಿಪರ್ಯಾಸ, ನಿಷ್ಕಾಳಜಿ ಮಾಡುವ ಶಿಕ್ಷಕರು ಪಡೆಯುವಷ್ಟೇ ಪಗಾರ ತೆಗೆದುಕೊಳ್ಳುವ ಶಿಕ್ಷಕರು ಆದರ್ಶ ವಿದ್ಯಾಲಯದಲ್ಲಿ ಜವಾಬ್ದಾರಿಯಿಂದ ಗುಣಮಟ್ಟದ ಬೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ ಮಾತನಾಡಿ ವಿದ್ಯಾರ್ಥಿಗಳು ಸಂವಿಧಾನ ಅರಿತು ಅದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹತ್ವಪೂರ್ಣ ಗುರಿಯನ್ನು ತಲುಪಬಹುದು ಎಂದು ಹೇಳಿದರು.
ತಾಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ್ ತಗಡಿನ ಮನಿ ಮಾತನಾಡಿ ಸಂವಿಧಾನವನ್ನು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬರೆದದ್ದಲ್ಲ, ಅನೇಕ ದೇಶಗಳ ಸಂಚರಿಸಿ ಅಧ್ಯಯನ ಮಾಡಿ ನಮ್ಮ ಸಂವಿಧಾನ ಬರೆದಿದ್ದಾರೆ, ಸಂವಿಧಾನದ ಮೌಲ್ಯಗಳನ್ನು ಎಲ್ಲರೂ. ಅಳವಡಿಸಿಕೊಳ್ಳಬೇಕು,ನನ್ನ ಸಂವಿಧಾನ ನಮ್ಮ ಸಂವಿಧಾನ ಎಂಬ ಭಾವನೆ ಬಂದಾಗ ಮಾತ್ರ ಓದಿ ಅರ್ಥ ಮಾಡಿಕೊಂಡು ಜೀವಿಸಲು ಸಾಧ್ಯ,ಸಂವಿಧಾನ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಐದರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಏರ್ಪಡಿಸೋಣ ಎಂದು ಹೇಳಿದರು.
ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದ ಎಸ್,ಡಿ,ಎಮ್,ಸಿ, ಸಮನ್ವಯ ಸಮಿತಿ ಅಧ್ಯಕ್ಷ ಈಶಪ್ಪ ಕಾತರಕಿ ಮಾತನಾಡಿ ನಮ್ಮ ಆದರ್ಶ ವಿದ್ಯಾಲಯದ ಮಕ್ಕಳಿಗೆ ಸಂವಿಧಾನ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಳಿಕೊಂಡಾಗ ಬಹಳ ಸಂತೋಷದಿಂದ ಅವಕಾಶ ಮಾಡಿಕೊಟ್ಟಿದ್ದೇವೆ, ಇದು ಒಂದು ಒಳ್ಳೆ ಕಾರ್ಯಕ್ರಮ ಎಂದು ಪ್ರಶಂಸಿಸಿದರು.
ಎಸ್ ಡಿ ಎಮ್ ಸಿ ಸದಸ್ಯ ವಿನಾಯಕ ಜೋಶಿ, ಮಾಜಿ ಅಧ್ಯಕ್ಷ ರಾಮಲಿಂಗಯ್ಯ ಶಾಸ್ತ್ರಿ ಮಠ ಹಾಗೂ ಶಿಕ್ಷಕರು ಅಪಾರ ವಿದ್ಯಾರ್ಥಿಗಳು ಉಪಸ್ಥಿರಿದ್ದರು.
ಆದರ್ಶ ವಿದ್ಯಾಲಯದ ದೈಹಿಕ ಶಿಕ್ಷಕ ಉದಯಕುಮಾರ್ ಹಟ್ಟಿ ಅವರು ಸ್ವಾಗತಿಸಿ ನಿರೋಪಿಸಿದರು,ಸಮಾಜ ವಿಜ್ಞಾನ ಶಿಕ್ಷಕ ಬಸವರಾಜ್ ಜಕಾತಿ ಪ್ರಸ್ತಾಪವಾಗಿ ಮಾತನಾಡಿದರು.ಸಮಾಜ ವಿಜ್ಞಾನ ಶಿಕ್ಷಕಿ ಸೌಜನ್ಯ ವಾಣಿ ಪ್ರದ ವಂದಿಸಿದರು.