ಯಾದಗಿರಿ: ತೀವ್ರ ಜಿದ್ದಜಿದ್ದಿನಿಂದ ಕೂಡಿದ್ದ ತಾಲೂಕಿನ ಬಂದಳ್ಳಿ ಗ್ರಾಪಂ ಉಪ ಚುನಾವಣೆ ಯಲ್ಲಿ ಕರಣಮ್ಮ ಸುಮಂತ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಅವರ ಸದಸ್ಯತ್ವ ರದ್ದಾದ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಕಳೆದ 23 ರಂದು ಚುನಾವಣೆ ನಡೆದು, ಮಂಗಳವಾರ ನಗರದ ತಹಸೀಲ್ ಕಾರ್ಯಾಲಯದಲ್ಲಿ ಮತ ಎಣಿಕೆ ನಡೆಯಿತು. ಕರಣಮ್ಮ 382 ಮತ ಪಡೆದರೆ, ಪ್ರತಿಸ್ಪರ್ಧಿ ಶೋಭಾ ಭೀಮರಾಯ 334 ಮತಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.19 ಮತಗಳು ತಿರಸ್ಕೃತಗೊಂಡು, 48 ಮತಗಳಿಂದ ಕರಣಮ್ಮ ಗೆಲುವು ಸಾಧಿಸಿದ್ದರೆ ಎಂದು ಚುನಾವಣಾಧಿಕಾರಿ ವಾಗೀಶ್ ಘೋಷಿಸಿದರು.
ನಂತರ ಜರುಗಿದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಯುವ ಮುಖಂಡ ಅರ್ಜುನ ಚೌವ್ಹಾಣ್, ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಯನ್ನು ಮತದಾರ ಗೆಲ್ಲಿಸಿದ್ದು, ನೂತನ ಸದಸ್ಯರು ಗ್ರಾಮೀಣ ಭಾಗದಲ್ಲಿ ಉತ್ತಮ ಕೆಲಸ ಮಾಡುವಂತೆ ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಸತ್ಯಪ್ಪ, ಜ್ಞಾನಮಿತ್ರ, ಗಿರೀಶ ಕುಮಾರ, ಯೇಸುರಾಜ, ಮಂಜುನಾಥ, ಆನಂದ, ರವಿ, ಗೋವಿಂದಪ್ಪ, ಸಲ್ಮಾನ್, ಶರಣು ಹೊಸಮನಿ, ಶರಣಪ್ಪ ನಿಂಗಪ್ಪ ಇದ್ದರು.