ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಒಂದು ವಿನೂತನ ಪ್ರಯೋಗ ಮಾಡಿದ್ದು ಪಂಚಮಿತ್ರ ವಾಟ್ಸಪ್ ಚಾಟ್ ಎನ್ನುವ ಸೇವೆಯನ್ನು ಮಾರ್ಚ್ ಒಂದನೆಯ ದಿನಾಂಕದಿಂದ ಲೋಕಾರ್ಪಣೆ ಮಾಡಿದೆ. ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾದ ಈ ಸೇವೆ ಗ್ರಾಮೀಣ ಜನರ ಕುಂದುಕೊರತೆಗಳನ್ನು ಅವರು ಮನೆಯಿಂದಲೇ ನಿವಾರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಗ್ರಾಮೀಣ ಜನರು ಮಾಡಬೇಕಿರುವುದು ಇಷ್ಟು: 8277506000 ಎನ್ನುವ ಸಂಖ್ಯೆಯನ್ನು ಮೊಬೈಲಿನಲ್ಲಿ ಸೇವ್ ಮಾಡಿಕೊಂಡು ವಾಟ್ಸಪ್ಪಿನಲ್ಲಿ ಹಾಯ್ ಎನ್ನುವ ಸಂದೇಶ ಕಳುಹಿಸದರೆ ಸಾಕು ನಿಮಗೆ ಪಂಚಮಿತ್ರ ಸೇವೆ ಆರಂಭವಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲೋಗೋದೊಂದಿಗೆ ಸ್ವಾಗತ ಸಂದೇಶ ಬರುತ್ತದೆ. ಅದಾದ ಮೇಲೆ ಭಾಷೆಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ರಾಜ್ಯದ ಜಿಲ್ಲೆಗಳ ಪಟ್ಟಿ ಬರುತ್ತದೆ. ನೀವು ನಿಮ್ಮ ಜಿಲ್ಲೆಯ ಕ್ರಮ ಸಂಖ್ಯೆಯನ್ನು ದಾಖಲಿಸಬೇಕು. ನಂತರ ತಾಲ್ಲೂಕು, ಗ್ರಾಮ ಪಂಚಾಯತಿಗಳ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಗ್ರಾಮ ಪಂಚಾಯತಿಯ ವಿವರ, ಕುಂದುಕೊರತೆ, ಸೇವೆಗಳು ಎನ್ನುವ ಸಂದೇಶ ಬರುತ್ತದೆ. ಈ ಮೂರರಲ್ಲಿ ನಿಮ್ಮ ಆದ್ಯತೆಗೆ ಅನುಗುಣವಾದ ಸಂದೇಶವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು.
ಸರ್ಕಾರವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಈ ಯೋಜನೆ ಗ್ರಾಮೀಣ ಜನರು ತಮ್ಮ ಕುಂದುಕೊರತೆಗಳನ್ನು ತಾವಿದ್ದಲ್ಲಿಯೇ ಪರಿಹರಿಸಿಕೊಳ್ಳಬಹುದು.