ಸ್ಥಳೀಯ

ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣುಮಕ್ಕಳು

WhatsApp Group Join Now
Telegram Group Join Now

ಯಾದಗಿರಿ : ಜುಲೈ 12, : ಮಿಷನ್ ಶಕ್ತಿಯ 100 ದಿನಗಳ ವಿಶೇಷ ಅಭಿಯಾನಡಿಯಲ್ಲಿ, ಭಾರತೀಯ ಕಾನೂನಲ್ಲಿ ಸೇರ್ಪಡೆಯಾದ ಹೊಸ ಕಾನೂನಗಳ ಕುರಿತು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರೇಮ್‌ಮೂರ್ತಿ ಅವರು ಮಾಹಿತಿ ನೀಡಿದರು.

2024ರ ಜುಲೈ 12ರ ಶುಕ್ರವಾರ ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾಲೇಜು ಶಿಕ್ಷಣ ಇಲಾಖೆ, ಯಾದಗಿರಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಸಂಯುಕ್ತಾಶ್ರಯದಲ್ಲಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷಾ ಅಧಿನಿಯಮ, ಆಧುನಿಕ ಸಮಾಜದಲ್ಲಿ ಮಹಿಳೆಯರ ಸ್ಥಾನ ಮಾನ ಹಾಗೂ ಮಹಿಳೆಯರ ಪಾಲುದಾರಿಕೆ ಕುರಿತು, ಇಂದಿನ ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣುಮಕ್ಕಳು, ಮಿಷನ್ ಶಕ್ತಿಯ 100 ದಿನಗಳ ಕಾರ್ಯಕ್ರಮದ ಕುರಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಸಂಬAಧಿಸಿದAತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ಲಾಲ್‌ಸಾಬ ಮಾತನಾಡಿ, ಆಧುನಿಕ ಸಮಾಜದಲ್ಲಿ ಮಹಿಳೆಯರ ಸ್ಥಾನ ಮಾನ ಹಾಗೂ ಮಹಿಳೆಯರ ಪಾಲುದಾರಿಕೆ ಕುರಿತು, ಇಂದಿನ ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಅಂದರೆ, ಅದಕ್ಕೆ ಯೋಜನೆಗಳು, ಕಾನೂನುಗಳು, ಹಕ್ಕುಗಳು ಎಂದು ಹೇಳಬಹುದು, ಇವತ್ತಿನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಇದಾರೆ ಅದಕ್ಕೆ ಹೆಣ್ಣು ಮಕ್ಕಳಿಗೆ ಅನುಕಂಪ ತೊರಿಸುವುದಕ್ಕಿಂತ ಅವಕಾಶ ಕೋಡಿ ಎಂದು ಸಲಹೆ ನೀಡಿದರು.

ಪ್ರಧಾನ ಕಾನೂನು ನೆರವು ಅಭಿರಕ್ಷಕರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂಪAನ್ಮೂಲ ವ್ಯಕ್ತಿ ಅನಂತರಡ್ಡಿ ವಕೀಲರು ಮಾತನಾಡಿ, ಭಾರತೀಯ ಕಾನೂನಲ್ಲಿ ಸೇರ್ಪಡೆಯಾದ 03 ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷಾ ಅಧಿನಿಯಮ ಅದರಲ್ಲಿ ಸೆಕ್ಷನ್ 11 ರಲ್ಲಿ ಮಕ್ಕಳ ಮೇಲಿನ ಆಗುವಂತ ದೌರ್ಜನ್ಯ ಕಾನೂನಡಿಯಲ್ಲಿ ವಿಧಿಸಬಹುದಾದ ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಸಂಯೋಜಕರು ಪೋಷಕತ್ವ ಯೋಜನೆ ನಾಗಪ್ಪ ಗಮಗ ಮಾತನಾಡಿ, ಬಾಲ್ಯ ವಿವಾಹ ನಿಷೇದ ಮಕ್ಕಳ ಹಕ್ಕುಗಳ, ಬಾಲ ಕಾರ್ಮಿಕತೆ, ದತ್ತು ಪ್ರಕ್ರೀಯೆ, ಪೋಷಕತ್ವ ಯೋಜನೆ ಸೆಕ್ಷನ್ 44ರ ಕುರಿತು, ಪೋಕ್ಸೋ ಕಾಯ್ದೆ2012, ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181, ಮಕ್ಕಳ ಹಕ್ಕುಗಳ, ಪಿಸಿಪಿಎನ್‌ಡಿಟಿ ಕಾಯ್ದೆ 1994ರ ಕುರಿತು ಮಾಹಿತಿ ನೀಡಿದರು.

ಯಾದಗಿರಿ ಜೆಂಡರ್ ಸ್ಪೇಷಲಿಸ್ಟ್ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಶ್ರೀಮತಿ ಬಸಲಿಂಗಮ್ಮ ಮಾತನಾಡಿ, ಮಿಷನ್ ಶಕ್ತಿಯ ಉಪಯೋಜನೆಗಳಾದ ಸಂಬಲ ಮತ್ತು  ಸಾಮರ್ಥ್ಯಡಿಯಲ್ಲಿ ಬರುವಂತೆ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಯಾದಗಿರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರು ಡಾ.ಹರೀಶ್ ರಾಠೋಡ್, ಯಾದಗಿರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರು ಡಾ.ಪರುಷೋತ್ತಮ್ ಉಪಸ್ಥಿತರಿದ್ದರು.

 

ನಿಮ್ಮ ಸಹಾಯವಿಲ್ಲದೆ ಏನನ್ನೂ ಮಾಡಲು ಆಗದು, ನಿಮಗನ್ನಿಸಿದಷ್ಟು ಸಹಾಯ ಮಾಡಿ.
WhatsApp Group Join Now
Telegram Group Join Now

Related Posts