ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಗಳ
ಸಂಗ್ರಹಣೆ ವಿಧಾನಗಳ ಕುರಿತು ತರಬೇತಿ
ಯಾದಗಿರಿ : ಜೂನ್ 13, : ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ಶಿಕ್ಷಣ ಶಾಲೆಯ ವಿದ್ಯಾರ್ಥಿಗಳಿಗೆ, ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಗಳ ಸಂಗ್ರಹಣೆ ವಿಧಾನಗಳ ಕುರಿತು ತರಬೇತಿಯನ್ನು ಆಯೋಜಿಸಲಾಯಿತು.
ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ಶಿಕ್ಷಣ ಶಾಲೆಯ ವಿದ್ಯಾರ್ಥಿಗಳಿಗೆ, ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಗಳ ಸಂಗ್ರಹಣೆ ವಿಧಾನಗಳ ಕುರಿತು ತರಬೇತಿಯಲ್ಲಿ 2024ರ ಜೂನ್ 13ರ ಗುರುವಾರ ರಾಜಕುಮಾರ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಮಣ್ಣಿನ ಮಹತ್ವ, ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಮಣ್ಣು ಪರೀಕ್ಷೆಯಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರವು 2024-25 ನೇ ಸಾಲಿನಿಂದ ಶಾಲಾ ಮಣ್ಣು ಆರೋಗ್ಯ ಅಭಿಯಾನ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು ಇದರಡಿಯಲ್ಲಿ ಜಿಲ್ಲೆಯ ಎರಡು ಶಾಲೆಗಳಾದ ಏಕಲವ್ಯ ಮಾದರಿ ಶಿಕ್ಷಣ ಶಾಲೆ ಬಂದಳ್ಳಿ ಮತ್ತು ಜವಾಹರ್ ನವೋದಯ ಮಹಾವಿದ್ಯಾಲಯ ಹೊತಪೇಠ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸತತವಾಗಿ ಮಣ್ಣಿನಲ್ಲಿ ಬೆಳೆಗಳನ್ನು ಬೆಳೆಯುವುದರಿಂದ ಸಸ್ಯ ಪೋಷಕಾಂಶಗಳು ಬೆಳೆಗಳಿಗೆ ಸಮರ್ಪಕವಾಗಿ ಪೂರೈಸಿದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ವಿವೇಚನೆ ಇಲ್ಲದೆ ಅತಿ ಹೆಚ್ಚು ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದ್ದು ಮತ್ತು ಮಣ್ಣಿನಲ್ಲಿರುವ ಬಹುಪಯೋಗಿ ಸೂಕ್ಷಾö್ಮಣು ಜೀವಿಗಳು ನಾಶವಾಗುತ್ತಿವೆ, ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿದೆ ಮತ್ತು ಪರಿಸರ ಮೇಲೆ ದುಷ್ಪರಿಣಾಮವಾಗಿ ಜನರಲ್ಲಿ ಅನೇಕ ರೋಗಗಳು ಬರುತ್ತಿವೆ ಆದರಿಂದ ರೈತ ಬಾಂಧವರು ಕನಿಷ್ಠ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆಯನ್ನು ಮಾಡಿಸಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ರಸಗೊಬ್ಬರಗಳನ್ನು ಶಿಫಾರಸಿನಂತೆ ಬಳಕೆಮಾಡಿದಲ್ಲಿ ಮಣ್ಣಿನ ಆರೋಗ್ಯ ಉಳಿಯುವುದಲ್ಲದೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತರಬೇತಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ರಾಜಕುಮಾರ್, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರಾದ ಡಾ.ಹೊನ್ನಯ್ಯ, ಆತ್ಮ ತಾಲೂಕ ತಾಂತ್ರಿಕ ಸಹಾಯಕರಾದ ರವೀಂದ್ರ, ಆತ್ಮ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರವೀಂದ್ರ ಬಡಿಗೇರ್ ಹಾಗೂ ಶಾಲೆಯ ಶಿಕ್ಷಕರಾದ ಬಸನಗೌಡ, ಮಲ್ಲಿಕಾರ್ಜುನ್, ಜಕ್ಕಪ್ಪ, ಶ್ರೀಮತಿ ನಿರ್ಮಲ ಮತ್ತು ವಾರ್ಡನ್ ಬಸವಣ್ಣಪ್ಪ ಉಪಸ್ಥಿತರಿದ್ದರು.