2024ರ ಜುಲೈ 18ರ ಗುರುವಾರ ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಪಂಚಾಯತ್ ರಾಜ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ, ಯರಗೋಳ ಗ್ರಾಮದ ಹೋಟ್ಟೆ ಹನುಮಪ್ಪ ದೇವಸ್ಥಾನದ ಹತ್ತಿರದ ಸಮುದಾಯ ಭವನದಲ್ಲಿ, ಮಿಷನ್ ಶಕ್ತಿಯ 100 ದಿನಗಳ ವಿಶೇಷ ಅಭಿಯಾನಡಿಯಲ್ಲಿ, ನರೇಗಾ ಕೂಲಿ ಕಾರ್ಮಿಕ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಕಾರ್ಯಚಟುವಟಿಕೆಗಳ ಕುರಿತು ಮತ್ತು ಸರಕಾರ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಹಾಗೂ ಕಾನೂನಿನ ವಿಷಯವಾಗಿ ಮನಷ್ಯನ ಜೀವನದ ಪ್ರತಿ ಹಂತದಲ್ಲು ಕಾನೂನಿನ ಚೌಕಟ್ಟಿನೊಳಗೆ ಬದುಕಬೇಕಾಗುತ್ತದೆ, ಕಾನೂನುಗಳು ಇವೆ ಅಂತಾನೆ ನಾವೆಲ್ಲರು ಸುರಕ್ಷತೆಯಿದೆ ಎಂದು ಹೇಳಿದರು.
ಜೆಂಡರ್ ಸ್ಪೇಷಲಿಸ್ಟ್ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಶ್ರೀಮತಿ ಬಸಲಿಂಗಮ್ಮ ಅವರು ಮಾತನಾಡಿ, ಮಿಷನ್ ಶಕ್ತಿಯ 100 ದಿನಗಳ ವಿಶೇಷ ನೊಂದಾಣಿ ಅಭಿಯಾನದ ಕುರಿತು ಪರಿಚಯಿಸಿದ್ದರು ಮತ್ತು ಮಿಷನ್ ಶಕ್ತಿ ಯೋಜನೆಗಳ ಸಂಬಲ ಮತ್ತು ಸಾರ್ಮರ್ಥ್ಯ ದಡಿಯಲ್ಲಿ ಬರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಕಾರ್ಯಚಟುವಟಿಕೆಗಳ ಕುರಿತು ಮತ್ತು ಸರಕಾರ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಹಾಗೂ ಕಾನೂನಿನ ವಿಷಯವಾಗಿ ಮನಷ್ಯನ ಜೀವನದ ಪ್ರತಿ ಹಂತದಲ್ಲು ಕಾನೂನಿನ ಚೌಕಟ್ಟಿನೊಳಗೆ ಬದುಕಬೇಕಾಗುತ್ತದೆ, ಕಾನೂನುಗಳು ಇವೆ ಅಂತಾನೆ ನಾವೆಲ್ಲರು ಸುರಕ್ಷತೆಯಿಂದ ಇದ್ದಿವಿ, ಆದ್ದರಿಂದ ಪ್ರತಿಯೋಬ್ಬರಿಗೂ ಸರಕಾರದ ಯೋಜನೆಗಳ ಕುರಿತು, ಕಾನೂನುಗಳ ಅರಿವು ಇರಬೇಕಾಗುತ್ತದೆ ಎಂದು ತಿಳಿಸಿದರು.
ಸಂಪAನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪುಷ್ಪಲತಾ ಪಾಟೀಲ್ ವಕೀಲರು ಮಾತನಾಡಿ, ಯಾದಗಿರಿ ಸಖಿ ಒನ್ ಸ್ಟಾಪ್ ಸೆಂಟರ್, ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯಚಟುವಟಿಕೆಗಳ ಕುರಿತು ಹಾಗೂ ವರದಕ್ಷಣಿ ನಿಷೇದ ಕಾಯ್ದೇ-1961 ಕುರಿತು ಮಾಹಿತಿ ನೀಡಿದರು.
ಶ್ರೀಮತಿ ಲತಾ ನಾಯಕ್ ವಕೀಲರು ಸಖಿ ಒನ್ ಸ್ಟಾಪ್ ಸೆಂಟರ್ ಯಾದಗಿರಿ, ಪೋಕ್ಸೋ ಕಾಯ್ದೆ-2012ರ ಅದರಡಿಯಲ್ಲಿ ಯಾವ ಅಪರಾದಗಳಿಗೆ ಏನು ಶಿಕ್ಷೆ ಎಂಬುವುದರ ಕುರಿತು ಮತ್ತು ಬಾಲ್ಯ ವಿವಾಹ ನಿಷೇದ ಕಾಯ್ದೆ-2005-05 ಬಾಲ್ಯ ವಿವಾಹ ಆದಾಗ ಯಾರರು ಶಿಕ್ಷೆಗೆ ಒಳಗಾಗುತ್ತಾರೆ ಎಂಬುವುದುರ ಕುರಿತು ಮತ್ತು ಪೋಸ್ ಕಾಯ್ದೆ-2013ರ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜ್ಯನ್ಯ ಕಾಯ್ದೆ, ಮಹಿಳಾ ಸಹಾಯವಾಣಿ-181 ಕುರಿತು ವಿವರಿಸಿದರು.
ಜಿಲ್ಲಾ ಸಂಯೋಜಕರು ಶ್ರೀ ನಾಗಪ್ಪ ಗಮಗ ಮಾತನಾಡಿದರು,ಪೋಷಕತ್ವ ಯೋಜನೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆ, ದತ್ತು ಪ್ರಕೀಯೆ, ಪೋಷಕತ್ವ ಯೋಜನೆ ಸೆಕ್ಷನ್ 44ರ ಕುರಿತು, ಮಕ್ಕಳ ಸಹಾಯವಾಣಿ 1098, ಪಿಸಿಪಿಎನ್‌ಡಿಟಿ ಕಾಯ್ದೇ-1994ರ ಕುರಿತು ಹೇಳಿದರು.
ಶ್ರೀ ಮಲ್ಲಿಕಾರ್ಜುನ ಕುರಕಂದಿ ಸಂಯೋಜಕರು ಡಾನ್ ಬಾಸ್ಕೋ ಸಂಸ್ಥೆ ರವರು ಸಂಸ್ಥೆಯ ವತಿಯಿಂದ ಉಚಿತ ಕಂಪ್ಯೂಟರ ತರಬೇತಿ ಹಾಗೂ ಕೆಲಸದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯರಗೋಳ ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಶ್ರೀ ರವೀಂದ್ರ, ಕಾಯಕ ಬಂದು ನರೇಗಾ ಯೋಜನೆ ಶ್ರೀಮತಿ ರೇಣುಕಾ ಉಪಸ್ಥಿತರಿದ್ದರು, ಶ್ರೀ ಶರಣಬಸಪ್ಪ ಶಿಕ್ಷಕರು ಸರ್ವೋದಯ ಪ್ರೌಢ ಶಾಲೆ ಯರಗೋಳ ರವರು ಕಾರ್ಯಕ್ರಮವನ್ನು ನಿರೂಪಿಸಿದರು.