ಯಾದಗಿರಿ: ಅಕ್ರಮ ಮರುಳುಗಾರಿಕೆ ದಂಧೆಯಲ್ಲಿ ರಾಜಕಾರಣಿಗಳು ಸೇರಿ ಯಾದಗಿರಿ ಶಾಸಕ ಮತ್ತು ಶಾಸಕರ ಪುತ್ರರು ಭಾಗಿಯಾಗಿರುವ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್,ಭೀಮುನಾಯಕರವರು ಯಾದಗಿರಿ ಜಿಲ್ಲೆಯಾದ್ಯಂತ ನಡೆಯುವಂತ ಅಕ್ರಮ ಮರಳುಗಾರಿಕೆ ಚಟುವಟಿಕೆ ನಡೆಯುತ್ತಿದ್ದು ಅದರಲ್ಲಿ ಹಾಡು ಹಗಲೆ ರಾಜಾರೋಷವಾಗಿ ಅಕ್ರಮ ಮರುಳು ದಂಧೆಯ ಬಗ್ಗೆ ಯಾದಗಿರಿ ಮತಕ್ಷೇತ್ರದ ವಡಿಗೇರಾ ತಾಲೂಕಿನಲ್ಲಿ ಕೃಷ್ಣ-ಭೀಮಾ ನದಿದಂಡೆಯಲ್ಲಿ ಬರುವ ಕೆಲವು ಪ್ರಮುಖ ಗ್ರಾಮಗಳಲ್ಲಿ ಈಗಾಗಲೇ ಜಿಲ್ಲಾಧ್ಯಕ್ಷರು ಹಾಗೂ ಸಂಘಟನೆಯ ಮುಖಂಡರುಗಳು ಬೇಟಿ ನೀಡಿ ವಿಚಾರಿಸಿದಾಗ ಮರಳು ದಂಧೆಕೋರರಿAದ ಕೆಲವು ರಾಜಕಾರಣಿಗಳು ಮತ್ತು ಯಾದಗಿರಿ ಶಾಸಕರು ಹಾಗೂ ಶಾಸಕರ ಪುತ್ರ ಶಾಮೀಲಾಗಿರುವುದು ತಿಳಿದು ಬಂದಿದೆ. ಅಕ್ರಮ ದಂಧೆಕೋರರ ಬಗ್ಗೆ ಆರೋಪ ಮಾಡಲಾಗಿದಿದ್ದು ಸತ್ಯವಾಗಿರುತ್ತದೆ ಹೇಳಿದರು.
ಈ ವಿಷಯವಾಗಿ ಯಾದಗಿರಿ ಶಾಸಕರು ಮತ್ತು ಅವರ ಕುಟುಂಬ ಯಾವುದೇ ರೀತಿಯ ಅಕ್ರಮದಲ್ಲಿ ಭಾಗಿಯಾಗಿಲ್ಲಾ ಇದರ ಬಗ್ಗೆ ಕರವೇ ದಾಖಲೆ ನೀಡಬೇಕೆಂದು ಕೆಲವು ದಿನಗಳ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆದರೇ ಕರವೇ ಯಾವುದೇ ಉಹಾ ಪೋಹಗಳಿಗೆ ಕಿವಿಕೊಟ್ಟು ಆರೋಪ ಮಾಡುವುದಿಲ್ಲಾ ಕರವೇ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಸಂಘಟಿಸುತ್ತಾ ಹೋರಾಟ ಮಾಡುತ್ತ ಸಾರ್ವಜನಿಕರ ಸಮಸ್ಯಗಳಿಗೆ ಕೆಲಸ ಮಾಡಿದ್ದೆವೆ ನಮಗೂ ಕಾನೂನಿ ಅರಿವಿದೆ. ಯಾರ ವೈಯಕ್ತಿಕ ಜೀವನದ ಕುರಿತು ಆರೋಪ ಮಾಡಲ್ಲ, ಶಾಸಕರು ಮತ್ತು ಅವರ ಪುತ್ರ ಈ ಒಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬುವುದು ಇಡೀ ಮತಕ್ಷೇತ್ರದ ಜನರ ಹಾದಿಬಿದಿಯಲ್ಲಿ ಚರ್ಚೆ ಮಾಡುತ್ತದ್ದಾರೆಂದು ಸ್ಪಷ್ಟಪಡಿಸಿದರು.
https://www.facebook.com/laxmikantnayakkollur
ಶಾಸಕರು ಈ ಅಕ್ರಮ ಮರಳು ಸಾಗಣೆ ವ್ಯವಹಾರದಲ್ಲಿ ಭಾಗೀಯಾಗಿಲ್ಲವೆಂದರೆ ಕೂಡಲೇ ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಏಕೆ ಹಿಂದೇಟು ಹಾಕುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಆದಕಾರಣ ಶಾಸಕರು, ಪುತ್ರರು ಮತ್ತು ಸಂಬ0ಧಪಟ್ಟ ಇಲಾಖೆ ಅಧಿಕಾರಿಗಳನ್ನು ಈ ಒಂದು ಆರೋಪಕ್ಕೆ ಸಂಬAಧಿಸಿದAತೆ ಪೋಲಿಸ್ ಇಲಾಖೆ ಯಾವ ರೀತಿಯಾಗಿ ಕೆಲ ಪ್ರಕರಣಗಳಲ್ಲಿ ಸತ್ಯಾನ್ವೇಷಣೆ ಅಥವಾ ಮಂಪರು ಪರೀಕ್ಷೆ ನಡೆಸುತ್ತಾರು ಅದೇ ರೀತಿಯಾಗಿ ಮಾಡಬೇಕು ಎಂದು ಹೇಳಿದರು, ಇದಕ್ಕೆ ಕರವೇ ಯಾವುದೇ ಹಂತದ ತನಿಖೆಗೆ ಸದಾ ಸಿದ್ದವಾಗಿದೆ ಇದಕ್ಕೆ ಶಾಸಕರು ಹಾಗೂ ಶಾಸಕರ ಪುತ್ರ ಮತ್ತು ಈ ಒಂದು ಅಕ್ರಮದಲ್ಲಿ ಭಾಗಿಯಾಗಿರುವ ಮರಳು ದಂಧೆಕೋರರು ಸಿದ್ದವಿದ್ದಲ್ಲಿ ಮಂಪರು ಪರೀಕ್ಷೆಗೆ ಸಿದ್ದವಾಗಲಿ ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಸಂತೋಷ ನಿರ್ಮಲಕರ್ ಆಕ್ರೋಶ ವ್ಯಕ್ತಪಡಿಸಿದರು.