ಸ್ಥಳೀಯ

ಶಾಸಕ ರಾಜಾ ವೆಂಕಟಪ್ಪ ನಾಯಕ ವಿಧಿವಶ

WhatsApp Group Join Now
Telegram Group Join Now

<span;>ಸುರಪುರ: ಫೆಬ್ರವರಿ 25, ಸುರಪುರ ಮತಕ್ಷೇತ್ರದ ಶಾಸಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ (67) ರಾಜ ವೆಂಕಟಪ್ಪ ನಾಯಕರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಬಹು ಅಂಗಾಂಗ ವೈಫಲ್ಯದ ಕುರಿತು ಕಳೆದ ಎಂಟು ಹತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಹೃದಯಾಘಾತದಿಂದ ಮರಣಿಸಿದರು.

<span;>ಅರವತ್ತೇಳು ವರ್ಷದ ರಾಜಾವೆಂಕಟಪ್ಪ ನಾಯಕರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದ ಅವರು ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಶ್ರೀಯುತರು ಇಬ್ಬರು ಪುತ್ರರು ಮತ್ತು ಪತ್ನಿಯನ್ನು ಅಗಲಿದ್ದಾರೆ.

<span;>ವೆಂಕಟಪ್ಪ ನಾಯಕರ ಅಂತ್ಯ ಸಂಸ್ಕಾರ 26 ನೆ ತಾರೀಖು ಸಾಯಂಕಾಲ ನಾಲ್ಕು ಗಂಟೆಗೆ ಸುರಪುರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಲಿದೆ ಎಂದು ತಿಳಿದು ಬಂದಿದೆ. ಅಪಾರ ಅಭಿಮಾನಿ ಬಳಗವನ್ನು ಅಗಲಿದ ಶ್ರೀಯುತರು ಆತ್ಮೀಯರಲ್ಲಿ ದುಃಖವನ್ನುಂಟು ಮಾಡಿದ್ದಾರೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳು, ಹಿರಿಯ ನಾಯಕರು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

WhatsApp Group Join Now
Telegram Group Join Now

Related Posts