ಅಪರಾಧ

ಒಬ್ಬಂಟಿ ವೃದ್ಧೆಯ ಕೊಲೆ!

WhatsApp Group Join Now
Telegram Group Join Now

ಬೆಂಗಳೂರು, ಏ.6- ಫಾರ್ಮ್ ಹೌಸ್ಗೆ ನುಗ್ಗಿ ಒಂಟಿ ವೃದ್ಧೆಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿಗೌಡನ ದೊಡ್ಡಿಯ ಪಾರ್ಮ್ ಹೌಸ್ನಲ್ಲಿ ವಾಸವಿದ್ದ ಶಾಂತಮ್ಮ (60) ಕೊಲೆಯಾದ ವೃದ್ಧೆ. ಶಾಂತಮ್ಮ ಅವರು ಒಬ್ಬರೇ ವಾಸವಿದ್ದರು.

ಇದನ್ನು ಗಮನಿಸಿಯೇ ನಿನ್ನೆ ಫಾರ್ಮ್ಹೌಸ್ಗೆ ನುಗ್ಗಿದ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಈ ವಿಷಯ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಕಗ್ಗಲಿಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ವೃದ್ಧೆಯನ್ನು ಹಣ ಆಭರಣಕ್ಕಾಗಿಯೋ, ಹಳೇ ದ್ವೇಷವೇ ಅಥವಾ ಆಸ್ತಿಗಾಗಿ ಕೊಲೆ ಮಾಡಲಾಗಿದೆಯೇ ಎಂಬುದು ಸಧ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕಗ್ಗಲಿಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

WhatsApp Group Join Now
Telegram Group Join Now

Related Posts