ಯಾದಗಿರಿ: ಜೂನ್, 20 ಬಾಲಕಾರ್ಮಿಕ ಪದ್ಧತಿ ತಡೆಯಲು ದಾಳಿ ಮಾಡಿ ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ತಿಳಿಸಿದ್ದಾರೆ
ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಆಯುಕ್ತರುÀ ನಿರ್ದೇಶನದಂತೆ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ – 2024)ರ ಅಂಗವಾಗಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ತಪಾಸಣೆ/ಹಠಾತ್ ದಾಳಿ ಕೈಗೊಂಡಿದ್ದು, ದಿ: 19-06-2024ರಂದು ಸುರಪುರ ತಾಲ್ಲೂಕಿನಲ್ಲಿ 1 ಕಿಶೋರಕಾರ್ಮಿಕ ಮತ್ತು ದಿ: 20-06-2024ರಂದು ಯಾದಗಿರಿ ತಾಲ್ಲೂಕಿನಲ್ಲಿ 1 ಕಿಶೋರಕಾರ್ಮಿಕನನ್ನು ರಕ್ಷಿಸಲಾಯಿತು. ಮುಂದುವರೆದು “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ 2016”ರ ಕುರಿತು ಬಾಲ ಹಾಗೂ ಕಿಶೋರಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರ ಹಾಗೂ ಸ್ಟಿಕ್ಕರ್ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಹೋಟೆಲ್, ಗ್ಯಾರೇಜ್ಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಹಠಾತ್ ದಾಳಿಯಲ್ಲಿ ಕಲಂ 17ರ ಅಡಿಯಲ್ಲಿ ನೇಮಕಗೊಂಡ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ರೂ, 20,000 ರೂಗಳಿಂದ 50,000 ರೂ ಗಳವರೆಗೆ ದಂಡ ಮತ್ತು 6 ತಿಂಗಳಿAದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುರಪುರದಲ್ಲಿ ನಡೆದ ತಪಾಸಣೆ/ಹಠಾತ್ ದಾಳಿಯಲ್ಲಿ ಸುರಪುರ ಕಾರ್ಮಿಕ ನಿರೀಕ್ಷಕರಾದ ಶ್ರೀ ಗಂಗಾಧರ, ಹಾಗೂ ಯಾದಗಿರಿಯಲ್ಲಿ ನಡೆದ ತಪಾಸಣೆ/ಹಠಾತ್ ದಾಳಿಯಲ್ಲಿ ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಾಬೇರಾ ಬೇಗಂ, ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಸದಾಶಿವ ಕೋಯಿಲುರು, ಡಾನ್ ಬಾಸ್ಕೋ ಸಂಸ್ಥೆಯ ನಾಗಪ್ಪ , ಜಿಲ್ಲಾ ಮಕ್ಕಳ ರಕ್ಷಣ ಘಟಕದ ಮಂಜಮ್ಮ, ಪೋಲಿಸ್ ಇಲಾಖೆಯ ರವೀಂದ್ರ ಎಚ್.ಸಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.