ಅಪರಾಧ

ರಕ್ಷಕರು ಭಕ್ಷಕರಾಗಿ ಬದಲಾದರೆ? ಸಿದ್ದು ಪಟ್ಟೆದಾರ ನಮ್ಮ ಕರ್ನಾಟಕ ಸೇನೆ

WhatsApp Group Join Now
Telegram Group Join Now

ಪೋಲಿಸ್ ಇಲಾಖೆಯನ್ನು ನಾಗರಿಕ ಸಮಾಜದ ರಕ್ಷಣೆಯ ಜವಬ್ದಾರಿಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದೆ, ಇಲಾಖೆ ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪೋಲಿಸ್ ಇಲಾಖೆಯ ಕಾರ್ಯ ವೈಖರಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಆತಂಕಕಾರಿ ಸಂಗತಿ ಮತ್ತು ಬೇಲಿ ಹೊಲ ಮೇಯುವ ಕೃತ್ಯ ಎಂದು ಸಿದ್ದು ಪಟ್ಟೇದಾರ ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಜನ ಆಕ್ರೋಶದೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಶಹಾಪೂರಿನಲ್ಲಿ ಇದೇ ತಿಂಗಳು 5ನೇ ತಾರೀಖು ಶಹಾಪೂರು ಭೀಮರಾಯನಗುಡಿ ಮಾರ್ಗ ಮಧ್ಯೆ ಶಹಾಪೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಮೋಟಗಿ ಎನ್ನುವ ರೆಸ್ಟೊರೆಂಟೊಂದು ಇದ್ದು ಆ ರೆಸ್ಟೊರೆಂಟಿನಲ್ಲಿ ಒಬ್ಬ ಸರ್ಕಾರಿ ಅಧಿಕಾರಿಯ ಸಾವು ಸಂಭವಿಸುತ್ತದೆ. ರಾತ್ರೋರಾತ್ರಿ ಶವವನ್ನು ಶವ ಪರೀಕ್ಷೆಗೆ ಸಾಗಿಸಿ ಅಸ್ವಾಭಾವಿಕ ಮರಣ ವರದಿಯನ್ನು ತಯಾರಿಸಿ ಪ್ರಕರಣವನ್ನು ಮುಗಿಸುವ ಯತ್ನ ಅಥವಾ ಮುಗಿಸಿರುತ್ತಾರೆ. ಶವದ ಭಾವಚಿತ್ರಗಳು ಸಾಮಾಜಿಕ ಜಾತಾಣದಲ್ಲಿ ಹರಿದಾರಿ ಆ ಸಾವು ಕೊಲೆಯಿಂದ ಸಂಭವಿಸಿದ್ದು ಎನ್ನುವುದು ಅತ್ಯಂತ ಸ್ಪಷ್ಟವಾಗಿ ಕಂಡು ಬರುತ್ತಿದ್ದರು ಒಬ್ಬ ಸರ್ಕಾರಿ ಸಿಬ್ಬಂದಿಯ ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತದೆ ಇದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಇದರ ವಿರುದ್ಧ ತೀವ್ರವಾದ ಹೋರಾಟಗಳಾಗಬೇಕು ಮತ್ತು ಪೋಲಿಸ ವರಿಠಾಧಿಕಾರಿಗಳು ಶಹಾಪೂರು ಪಿಐ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಈ ಸಂದರ್ಭದಲ್ಲಿ ಸಿದ್ದು ಪಟ್ಟೆದಾರ ಹೇಳಿದ್ದಾರೆ. ಸಂಘಟನೆಯೂ ಸಮಾಜದ ಬೇಲಿಯಾಗಿ ಕೆಲಸ ಮಾಡುತ್ತದೆ, ಹಣ ಮತ್ತಿತರ ಆಮಿಷಗಳಿಗೆ ಒಳಗಾಗಿ ಕೊಲೆಯಂತಹ ಅಪರಾಧಗಳನ್ನು ಮುಚ್ಚಿ ಹಾಕುವುದು ಗಂಭೀರ ಸ್ವರೂಪದ ಅಪರಾಧವಾಗಿದೆ. ಸಂಘಟನೆಯೂ ಈ ಪ್ರಕರಣವನ್ನ ಗಂಭೀರವಾಗಿ ಸ್ವೀಕರಿಸಿ ಹೋರಾಟಕ್ಕಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಕೊಲೆ ನಡೆದು ಹತ್ತು ದಿನ ಕಳೆದ ಮೇಲೆ ಸದ್ಯ ಶಹಾಪೂರು ಪೋಲಿಸ್ ಠಾಣೆಯಲ್ಲಿ ಪ್ರಥಮ ವರ್ಥಮಾನ ವರದಿ ದಾಖಲಾಗಿದ್ದು ಕೆಲ ಆರೋಪಿಗಳನ್ನು ಕಷ್ಟಡಿಗೆ ತೆಗೆದುಕೊಳ್ಳಲಾಗಿದೆ. ಕುಟುಂಬಸ್ಥರು ಮತ್ತು ಗಂಗಾ ಮತಸ್ಥ ಸಮಾಜ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬೆಳವಣಿಗೆಯೂ ಪೋಲಿಸರ ಕರ್ತವ್ಯಲೋಪವನ್ನು ಎತ್ತಿ ತೋರಿಸುತ್ತದೆ, ಇಲ್ಲಿ ಹಲವಾರು ಪ್ರಶ್ನೆಗಳು ಉದ್ಭವಾಗುತ್ತಿವೆ, ಪೋಲಿಸ್ ಇಲಾಖೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಇ ಸಂದರ್ಭದಲ್ಲಿ ಹೇಳಲಾಗಿದೆ.

WhatsApp Group Join Now
Telegram Group Join Now

Related Posts