ಅಪರಾಧ

ವಂಚಕರ ಬಂಧನ, ಕೋಟಿ ಕೋಟಿ ನಕಲಿ ನೋಟು ವಶ

WhatsApp Group Join Now
Telegram Group Join Now

ಬೆಂಗಳೂರು, 8 ಏಪ್ರಿಲ್ : ತಮ್ಮ ಬಳಿ 100 ಕೋಟಿ ಕಪ್ಪು ಹಣವಿದೆಯೆಂದು ನಂಬಿಸಿ, ಖೋಟಾ ನೋಟುಗಳನ್ನು ತೋರಿಸಿ ಮೋಸ ಮಾಡುತ್ತಿದ್ದ ಐದು ಮಂದಿ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿ 30.91 ಕೋಟಿ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವನಗುಡಿಯ ಸುಧೀರ್ (49), ದಾಸರಹಳ್ಳಿಯ ಕಿಶೋರ್ (44), ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ (48),ತೀರ್ಥ ರಿಷಿ ಅಲಿಯಾಸ್ ಗಿರೀಶ (28) ಮತ್ತು ವಿಜಯನಗರದ ವಿನಯ್ (42) ಬಂಧಿತ ವಂಚಕರು. ಈ ವಂಚಕರು ಖಾಸಗಿ ಟ್ರಸ್ಟ್ಗಳಿಗೆ ಸಿಎಸ್ಆರ್ ಫಂಡ್ ನೀಡುವುದಾಗಿ ವಂಚಿಸುತ್ತಿದ್ದರಲ್ಲದೇ, ಈ ಹಿಂದೆ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿ ರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಗ್ಯಾಂಗ್ ವಿಡಿಯೋ ಕಾಲ್ ಮಾಡಿ ಖೋಟಾ ನೋಟಿನ ಹಣದ ರಾಶಿಯನ್ನು ತೋರಿಸಿ ಕಪ್ಪು ಹಣವಿದೆ ಎಂದು ನಂಬಿಸಿ ಟ್ರಸ್ಟ್ಗಳಿಗೆ ಲಾಭಾಂಶವಿಲ್ಲದೆ ಹಣ ವರ್ಗಾಯಿಸುವುದಾಗಿ ಆಮಿಷವೊಡ್ಡುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಬಂಧಿತ ಐದು ಮಂದಿಯ ಪೈಕಿ ಒಬ್ಬಾತ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಬೆಳಸಿಕೊಂಡಿದ್ದಾನೆ. ತದನಂತರದಲ್ಲಿ ಅವರನ್ನು ಭೇಟಿ ಮಾಡಿ, ನಮಗೆ ಪರಿಚಯವಿರುವ ಕಂಪನಿಯವರ ಬಳಿ ಕಾನೂನು ಬದ್ದ ಹಣವಿದ್ದು, ಆ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್, ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭಾಂಶವಿಲ್ಲದೆ ಹಣವನ್ನು ವರ್ಗಾಯಿಸುವುದಾಗಿ ಹೇಳಿದ್ದಾನೆ.

WhatsApp Group Join Now
Telegram Group Join Now

Related Posts