ವೈಶಿಷ್ಟ್ಯ ಲೇಖನ

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ: ಸ್ಥಾಪನೆಯ ಹಿಂದಿನ ಧ್ಯೇಯಗಳು, ತಪ್ಪದೇ ಓದಿ

WhatsApp Group Join Now
Telegram Group Join Now

ಭಾರತ ಹಳ್ಳಿಗಳ ದೇಶ. ಈ ದೇಶದ ಸೌಂದರ್ಯ, ಈ ದೇಶದ ವೈಭವ, ಈ ದೇಶದ ಘನತೆ ಗ್ರಾಮೀಣ ಪ್ರದೇಶದಲ್ಲಿದೆ. ಈ ದೇಶದ ಜನರು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತಾ ಸಹಬಾಳ್ವೆಯನ್ನು ಜೀವಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಅಥವಾ ಗ್ರಾಮೀಣ ಭಾಗದಲ್ಲಿ ಜನಾಂಗೀಯ ಘರ್ಷಣೆ ಕಂಡು ಬರುವುದಿಲ್ಲ. ಧರ್ಮ ಸಂಘರ್ಷವಿಲ್ಲ. ಭಾರತ ಬಹುತೇಕ ಪುಟ್ಟಪುಟ್ಟ ಹಳ್ಳಿಗಳನ್ನು ಹೊಂದಿದೆ. ಅಲ್ಲಿ ಜನರು ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಮೇಲುಕೀಳು ಎನ್ನುವ ಭೇದ ಭಾವವಿಲ್ಲದೆ ಜೀವಿಸುತ್ತಿದ್ದಾರೆ. ಇದುವರೆಗೆ ಇಲ್ಲಿ ಬಡತನ ಅಂತಹ ದೊಡ್ಡ ಸಮಸ್ಯೆಯಾಗಿ ಕಂಡಿಲ್ಲ. ಬಹುತೇಕ ಕೃಷಿಯನ್ನು ಅವಲಂಬಿಸಿದ ಬದುಕು ಹಂಚಿಕೊಂಡು ಊಟ ಮಾಡುವ ಪದ್ಧತಿಯಲ್ಲಿ ಸಾಗಿತ್ತು. ಆದರೆ ಇತ್ತೀಚಿನ ಕಾಲಮಾನದಲ್ಲಿ ಈ ರಾಜಕೀಯ ಪಕ್ಷಗಳು ಅಧಿಕಾರದಾಹಕ್ಕಾಗಿ ಜನರಲ್ಲಿ ಕೋಮುಭಾವವನ್ನು ಸೃಷ್ಟಿಸಿದವು. ಸ್ನೇಹವಿದ್ದಲ್ಲಿ ಶತೃತ್ವವನ್ನು ಹುಟ್ಟು ಹಾಕಿದವು. ಅಣ್ಣ, ತಮ್ಮ, ಮಾವ, ಚಿಗಪ್ಪ-ದೊಡಪ್ಪ ಎಂದುಕೊಳ್ಳುತ್ತಾ ಅನೋನ್ಯವಾಗಿದ್ದ ಜನರಲ್ಲಿ ಜಾತಿಯ, ಧರ್ಮದ ವಿಷ ಬೀಜ ಬಿತ್ತುವ ಮೂಲಕ ಜನರನ್ನು ವಿಭಾಗಿಸಿದರು. ಜಾನಪದ ಹಾಡುಗಳು, ಹಬ್ಬ ಹರಿದಿನಗಳು, ಸುಗ್ಗಿಯ ದಿನಗಳನ್ನು ಸಂಭ್ರಮಿಸುತ್ತಾ ಸುಖವಾಗಿದ್ದ ಜನರಲ್ಲಿ ದ್ವೇಷ, ಜಗಳ, ವೈರತ್ವವನ್ನು ಉದ್ದೀಪನಗೊಳಿಸಲಾಯಿತು. ಒಂದು ಕುಟುಂಬದಂತಿದ್ದ ಹಳ್ಳಿಗಳು ಸಹಬಾಳ್ವೆಯನ್ನು ಮರೆತು ಹೋದವು. ಇಂತಿರುವ ಗ್ರಾಮೀಣ ಭಾರತ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಂವಿಧಾನದ  73ನೇ ತಿದ್ದುಪಡಿಯ ಮೂಲಕ 1993ರಲ್ಲಿ ಪಂಚಾಯತ್‌ ರಾಜ್‌ ಅಧಿನಿಯಮವನ್ನು ರಚಿಸಲಾಯಿತು ಮತ್ತು ಅನುಷ್ಠಾನಕ್ಕೆ ತರಲಾಯಿತು. ಇದನ್ನು ಅಧಿಕಾರ ವಿಕೇಂದ್ರೀಕರಣ ಎಂದು ಕರೆಯಲಾಯಿತು. ಹಳ್ಳಿಯ ಜನ ತಮ್ಮನ್ನು ತಾವು ಆಳಿಕೊಂಡು ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳಲು ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಯಿತು. ಇದರ ಧ್ಯೇಯ, ಇದರ ಉದ್ದೇಶ ಅದ್ಬುತವಾದ ಪರಿಕಲ್ಪನೆಯನ್ನು ಹೊಂದಿರುವುದು. ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದ್ದರೆ ಭಾರತವು ಅತಿ ಸುಂದರ ರಾಷ್ಟ್ರವಾಗಿ ಜಗತ್ತಿನಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಇರುತ್ತಿತ್ತು. ಬಹಳಷ್ಟು ಸ್ವಾರ್ಥಿಗಳು, ಲೋಭಿಗಳು, ವಂಚಕರು, ಒಬ್ಬರನ್ನೊಬ್ಬರು ತಿಂದು ಬದುಕುವ ಕ್ರೂರ ಪ್ರಾಣಿಯ ಮನೋಭಾವವನ್ನು ಹೊಂದಿರುವ ಈ ದೇಶದ ಜನ ಇನ್ನೊಬ್ಬರ ಹಕ್ಕುಗಳನ್ನು ಕಬಳಿಸುವ, ದೇಶವನ್ನು ಅಧೋಗತಿಗೆ ಕೊಂಡೊಯ್ಯುವ ಸಂಚಿನಲ್ಲಿದ್ದಾರೆ. ಸ್ವಾರ್ಥಪರರಿದ್ದಾರೆ. ಹೀಗಾಗಿ ಈ ಅಧಿನಿಯಮ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರದೆ ಇದರ ಉದ್ದೇಶ ತಲೆಕೆಳಗಾಗಿದೆ. ಸಹಸ್ರ ಸಹಸ್ರ ಕೋಟಿ ಹಣ ವ್ಯರ್ಥವಾಗಿ ಹೋಗುತ್ತಿದೆ. ಅದಿರಲಿ, ಏನಿದು ಗ್ರಾಮ ಪಂಚಾಯತಿಗಳ ಸ್ಥಾಪನೆಯ ಹಿಂದಿರುವ ಧ್ಯೇಗಳು? ನೋಡೋಣ ಬನ್ನಿ.

 

ಧ್ಯೇಯ:

1) ಗ್ರಾಮೀಣ ಸಮೂಹದ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಅಬಲೀಕರಣಗೊಳಿಸುವುದು.

ಅಂದರೆ ಗ್ರಾಮೀಣ ಪ್ರದೇಶಗಳು ಸುಶಿಕ್ಷಿತ ಬದುಕಿನಿಂದ ದೂರ ಇವೆ. ಜನರಲ್ಲಿ ಇನ್ನೂ ಅಭಿವೃದ್ಧಿಯ ಪರಿಕಲ್ಪನೆ ಮೂಡಿಲ್ಲ. ಶಿಕ್ಷಣದ ಅರಿವು ಮೂಡಿಲ್ಲ. ಈ ಜನರಿಗೆ ರಾಜಕೀಯ ಅರಿವು ಮೂಡಿಸುವುದು ತುಂಬಾ ಉಖ್ಯವಿದೆ. ಗ್ರಾಮೀಣ ಅಭಿವೃದ್ಧಿಯ ಕಾರ್ಯಕ್ರಮಗಳನು ರೂಪಿಸಿ ಅವರನ್ನು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಅವರನ್ನು ಸಬಲರನ್ನಾಗಿಸುವುದು ಮೊದಲ ಧ್ಯೇಯವಾಗಿದೆ.

 

2) ಬಡ ಗ್ರಾಮೀಣ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವಕಾಶಗಳನ್ನು ಕಲ್ಪಿಸುವುದು.

ಈ ಎರಡನೆಯ ಧ್ಯೇಯದಲ್ಲಿ ಗ್ರಾಮೀಣ ಜನರನ್ನು ಸಾಮಾಜಿಕವಾಗಿ ಮತ್ತು ಆಋಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶ ಕಲ್ಪಿಸುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಸಾಮಾನ್ಯವಾಗಿ ಭಾರತದ ಗ್ರಾಮೀಣ ಭಾಗದಲ್ಲಿ ಅವಕಾಶಗಳ ಕೊರತೆಯಿಂದ ಜನರಲ್ಲಿ ಬಡತನ ದಟ್ಟೈಸಿದೆ. ಕೇವಲ ಕೃಷಿಯನ್ನು ಅವಲಂಬಿಸಿದ ಜನರಿಗೆ ಆರ್ಥಿಕ ಅಭಿವೃದ್ಧಿಯ ಇತರ ಅವಕಾಸಗಳ ಅರಿವಿಲ್ಲ. ಆ ಅರಿವನ್ನು ಮೂಡಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೋಂದುವಂತೆ ಮಾಡುವುದು ತುಂಬಾ ಅಗತ್ಯವಾಗಿದೆ.

 

3) ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ದಕ್ಷ ಹಾಗೂ ಜವಬ್ದಾರಿಯುತ ಆಡಳಿತವನ್ನು ನೀಡುವುದು.

ಈ ಇಲಾಖೆಯ ಸಂಸ್ಥೆಯ ಸ್ಥಾಪನೆಯ ಹಿಂದಿರುವ ಸ್ಪಷ್ಟವಾದ ಉದ್ದೇಶ ಪಂಚಾಯತ್‌ ರಾಜ್‌ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಕಾಪಾಡುವುದು. ಸಹಜವಾಗಿ ಗ್ರಾಮೀಣ ಪ್ರದೇಶದ ಜನರು ಮುಗ್ದರಾಗಿದ್ದು ಅವರಿಗೆ ಮನಮುಟ್ಟು ಆಡಳಿವನ್ನು ಅನುಷ್ಠಾನಕ್ಕೆ ತರುವುದು ಪ್ರಮುಖವಾದ ಧ್ಯೇಯವಾಗಿದೆ.

 

4) ವಿಶೇಷ ಗುಂಪುಗಳನ್ನುಒಳಗೊಂಡಂತೆ ಸೇವೆಗಳ ವಿತರಣೆಗೆ ಸಂಬಂಧಿಸಿದಂತೆ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಸಬಲೀಕರಣಗೊಳಿಸುವುದು ಹಾಗೂ ಜವಬ್ದಾರಿಯುತವಾಗಿ ದಕ್ಷತೆಯಿಂದ ಹಾಗೂ ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸುವುದು.

 

5) ʼಪಂಚತಂತ್ರ 2.0″ ಗ್ರಾಮೀಣ ಸಮೂಹಕ್ಕೆ ಸಂಪರ್ಕ ಕಲ್ಪಿಸುವಂತಹ ಈ ಸಾಧನದಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳ ಆಡಳಿತದಲ್ಲಿ ಸಮಗ್ರ ಹಾಗೂ ಮೇಲುಸ್ತಮವಾರಿಯಿಂದ ಗ್ರಾಮ ಪಂಚಾಯತಿಗಳಲ್ಲಿ ಪಾರದರ್ಶಕತೆ ಹಾಗೂ ಜವಬ್ದಾರಿಯುತವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುವುದು.

 

ಈ ಮೇಲಿನ ಐದು ಧ್ಯೇಯಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ರಚನೆ ಹಿಂದಿರುವ ಧ್ಯೇಯಗಳು. ಶತಾಯಗಥಾಯ ಗ್ರಾಮ ಪಂಚಾಯತಿಗಳು ದಕ್ಷ ಮತ್ತು ಪ್ರಾಮಾಣಿಕ ಆಡಳಿತದ ಜೊತೆಗೆ ಈ ಅಧಿನಿಯಮದ ಉದ್ದೇಶವನ್ನು ಗ್ರಾಮೀಣ ಜನರಿಗೆ ತಲುಪಿಸುವ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಸದೃಢಗೊಳಿಸುವ ಉದ್ದೇಶವನ್ನು ಹೊಂದಿದೆ. ಆದರೆ ಈ ಆಯುಕ್ತಾಲಯ ತನ್ನ ಸ್ಥಾಪನೆಯ ಧ್ಯೇಯದ ಉದ್ದೇಶಕ್ಕೆ ಅನುಗುಣವಾಗಿ ಎಷ್ಟು ಪ್ರಾಮಾಣಿಕವಾಗಿ ಕಾರ್ಯನಿವರ್ವಹಿಸುತ್ತಿದೆ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಈ ಕುರಿತಂತೆ ನಿಮ್ಮ ಗ್ರಾಮ ಪಂಛಾಯತಿಯ ಅಪ್ರಾಮಾಣಿಕ ಮತ್ತು ಅದಕ್ಷ ಆಡಳಿತದ ಕುರಿತು ಜನ ಆಕ್ರೋಶ ಪತ್ರಿಕೆಯ ಗಮನಕ್ಕೆ ತನ್ನಿ. ಈ ಕುರಿತು ಪತ್ರಿಕೆ ಆಯುಕ್ತಾಲಯದ ಗಮಕ್ಕೆ ತರುತ್ತದೆ.

 

ನಾವು ದಕ್ಷ ಮತ್ತು ಪ್ರಾಮಾಣಿಕ ಆಡಳಿತಕ್ಕಾಗಿ ಹೋರಾಡಬೇಕಿದೆ.

 

                                                                                                                            ಲಕ್ಷ್ಮೀಕಾಂತ ನಾಯಕ

 

WhatsApp Group Join Now
Telegram Group Join Now

Related Posts