ಯಾದಗಿರಿ : ಡಿಸೆಂಬರ್ 02, : ಲಕ್ಷ್ಮೀ ನಾಗಪ್ಪ ಮ್ಯಾತ್ರಿ ಸುಮಾರು 45 ವರ್ಷದ ಬೆಳಗುಂದಿ ಗ್ರಾಮದ ಮಹಿಳೆ ಕಾಣೆಯಾದ ಹಿನ್ನೆಲೆ ಈ ಕುರಿತು ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಸೈದಾಪೂರ ಪೊಲೀಸ್ ಇನ್ಸ್ಪೆಕ್ಟರ್ ವಿನಾಯಕ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬೆಳಗುಂದಿ ಗ್ರಾಮದಿಂದ ಮಹಿಳೆಯು 2024ರ ಅಕ್ಟೋಬರ್ 20 ರಂದು ಸೈದಾಪೂರ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿಹೋದವಳು ಮರಳಿ ಬಾರದೆ ಕಾಣೆಯಾದ ಬಗ್ಗೆ ನಮ್ಮ ಬೀಗರ್ ನೆಂಟರ್, ನಮ್ಮ ಅಣ್ಣತಮ್ಮಂದಿರ ಇರುವ ಬೆಂಗಳೂರು ಮುಂತಾದ ಕಡೆ ವಿಚಾರಿಸಿದರೂ ಎಲ್ಲಾ ಕಡೆ ಹುಡಿಕಾಡಿದರು ಸಿಕ್ಕಿರುವುದಿಲ್ಲ. ಮಹಿಳೆಯ ಚಹರೆ ಪಟ್ಟಿ ಮಹಿಳೆ 45 ವರ್ಷ ಇದ್ದು, ಅಂದಾಜು 5 ಫೀಟ್ 6 ಇಂಚು ಎತ್ತರ ಇದ್ದು, ಸಾದಾರಣ ಮೈಕಟ್ಟು ಸಾದಾರಣ ಕಪ್ಪು, ಮೈಬಣ್ಣ, ಆರೆಂಜ್ ಬಣ್ಣದ ಬಿಳಿ ಹೂವಿನ ಡಿಸೈನ್ವುಳ್ಳ ಸೀರೆ ಮತ್ತು ಕೆಂಪ್ಪು ಕುಪ್ಪಸ ಧರಿಸಿರುತ್ತಾಳೆ, ಕನ್ನಡ, ಹಿಂದಿ ಭಾಷೆ ಮಾತಾನಾಡುತ್ತಾಳೆ, ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸೈದಾಪೂರ ಪೊಲೀಸ್ ಠಾಣೆಗೆ ಪಿ.ಐ.ಮೊ.ನಂ.9480803582, ಕಂಟ್ರೋಲ್ ರೂ.ನಂ.98480803600, ಯಾದಗಿರಿ ದೂ.ಸಂ.08473 253738ಗೆ ಕರೆ ಮಾಡಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.